Shravani Subramanya Serial Amogh: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು ಜೂನಿಯರ್ಸ್’ ಶೋಗಳು ಈಗಾಗಲೇ ಪ್ರೇಕ್ಷಕರ ಮನಗೆದ್ದಿವೆ. ಈಗ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಟ ಅಮೋಘ್‌ಗೆ ಬಂಪರ್ ಆಫರ್ ಸಿಕ್ಕಿದೆ.

ಇದೀಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು ಜೂನಿಯರ್ಸ್’ ಎರಡೂ ಶೋಗಳ ‘ಮಹಾ ಸಂಚಿಕೆ’ ಪ್ರಸಾರವಾಗುತ್ತಿದೆ.

ಈ ಮಹಾ ಸಂಚಿಕೆಯಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಹೀರೋ ಸುಬ್ಬು ಅಲಿಯಾಸ್ ಅಮೋಘ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಇವರ ಡ್ಯಾನ್ಸ್ ನೋಡಿ ಶಿವರಾಜ್‌ಕುಮಾರ್ ಹೊಸ ಆಫರ್ ನೀಡಿದ್ದಾರೆ.

ಈ ಶೋನ ತೀರ್ಪುಗಾರರಾದ ನಟ ಡಾ. ಶಿವ ರಾಜ್‌ಕುಮಾರ್, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ಡು ಅವರು ಅಮೋಘ್ ಅವರ ಪ್ರತಿಭೆಯನ್ನು ಹೊಗಳಿದ್ದಾರೆ.

ಅಮೋಘ್ ಅವರ ಅದ್ಭುತ ನಟನೆಗೆ ಫಿದಾ ಆದ ನಟ ಶಿವ ರಾಜ್‌ಕುಮಾರ್, ಅಮೋಘ್ ಅವರ ಚೊಚ್ಚಲ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ರಚಿತಾ ರಾಮ್, ಅಮೋಘ್ ನಾಯಕನಾಗುವ ಸಿನಿಮಾಗೆ ತಾನೇ ಹೀರೋಯಿನ್ ಆಗುವುದಾಗಿ ಹೇಳಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಕೂಡ ಅಮೋಘ್ ಅವರ ಸಾಧನೆಯನ್ನು ಮೆಚ್ಚಿ, ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವೆ ಎಂದು ಹಾರೈಸಿದ್ದಾರೆ.

Source link
ಶಿವರಾಜ್‌ಕುಮಾರ್, ರಚಿತಾ ರಾಮ್‌ರಿಂದ ಬಂಪರ್ ಆಫರ್ ಪಡೆದ Shravani Subramanya Serial Hero ಅಮೋಘ್!