‘ಐ ಲವ್ ಯಶ್’; ‘ಟಾಕ್ಸಿಕ್’ ಬಗ್ಗೆ ನಿರೀಕ್ಷೆ ಹೊರಹಾಕಿದ ಆಶಿಶ್ ಚಂಚ್ಲಾನಿ

‘ಐ ಲವ್ ಯಶ್’; ‘ಟಾಕ್ಸಿಕ್’ ಬಗ್ಗೆ ನಿರೀಕ್ಷೆ ಹೊರಹಾಕಿದ ಆಶಿಶ್ ಚಂಚ್ಲಾನಿ


ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (ಟಾಕ್ಸಿಕ್ ಮೂವಿ) ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ಮಾರ್ಚ್ 19 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಬಾಲಿವುಡ್ ಯೂಟ್ಯೂಬರ್ ಹಾಗೂ ನಟ ಆಶಿಶ್ ಚಂಚ್ಲಾನಿ ನಿರೀಕ್ಷೆ ಹೊರಹಾಕಿದ್ದಾರೆ. ‘ಐ ಲವ್ ಯಶ್’ ಎಂದು ಅವರು ಪ್ರೀತಿಯಿಂದ ಹೇಳಿದ್ದಾರೆ.

ಯಶ್ ಅವರು ಭಾರತ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡದ ಪರಭಾಷೆಯಲ್ಲೂ ಅವರಿಗೆ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಈ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಸಿನಿಮಾದ ಟೀಸರ್ ಹಲ್ಚಲ್ ಸೃಷ್ಟಿಸಿದೆ. ಈ ಟೀಸರ್ ನೋಡಿದ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಹೀಗಿರುವಾಗಲೇ ಆಶಿಶ್ ಚಂಚಲಾನಿ ಈ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಮಾರ್ಚ್ 19 ರಂದು ರಣವೀರ್ ಸಿಂಗ್ ನಟನೆಯ ‘ಧುರಂಧರ 2’ ಸಿನಿಮಾ ರಿಲೀಸ್ ಆಗುತ್ತಿದೆ. ‘ಟಾಕ್ಸಿಕ್’ ಕೂಡ ಅದೇ ದಿನ ತೆರೆಗೆ ಬರುತ್ತಿದೆ. ಎರಡೂ ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡೋದು ಪಕ್ಕಾ ಆಗಿದೆ. ಈ ಎರಡು ಸಿನಿಮಾಗಳಲ್ಲಿ ಯಾರು ಗೆಲ್ಲಬೇಕು ಎಂದು ಹೇಳಿದ್ದಾರೆ.

ಆಶಿಶ್ ಅವರಿಗೆ ಎರಡೂ ಸಿನಿಮಾ ಗೆಲ್ಲಬೇಕು ಎಂಬ ಆಸೆ ಇದೆ. ‘ಟಾಕ್ಸಿಕ್ ಹಾಗೂ ಧರುಂಧರ್ 2 ಬರ್ತಾ ಇದೆ. ಯಾವ ಸಿನಿಮಾ ಚೆನ್ನಾಗಿ ಮಾಡುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಐ ಲವ್ ಯಶ್. ರಣವೀರ್ ಕೂಡ ಇಷ್ಟ. ಎರಡೂ ಸಿನಿಮಾಗಳು ಗೆಲ್ಲಬೇಕು’ ಎಂದು ಆಶಿಶ್ ಚಂಚ್ಲಾನಿ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ

‘ಧುರಂಧ’ ಸಿನಿಮಾ ತನ್ನನ್ನು ತಾನು ಬಯಸಿ ಮಾಡಿಕೊಂಡಿದೆ. ‘ಧುರಂಧರ 2’ ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಇದೇ ಕಾರಣ. ‘ಟಾಕ್ಸಿಕ್’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *