ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ: ಕೋರ್ಟ್‌ ಮಹತ್ವದ ತೀರ್ಪು!

ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ: ಕೋರ್ಟ್‌ ಮಹತ್ವದ ತೀರ್ಪು!

ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ: ಕೋರ್ಟ್‌ ಮಹತ್ವದ ತೀರ್ಪು!

ಚಂಡೀಗಢ: ಮಹಿಳೆಯರ ಮೇಲೆ ಲೈಂ*ಗಿಕ ಕಿರುಕುಳ ನೀಡುವ ಲಂಪಟರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಚಂಡೀಗಢ ಕೋರ್ಟ್ ಮಾಡಿದ್ದು, ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ ಎಂದು ಮಹತ್ವದ ತೀರ್ಮಾನ ನೀಡಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ

ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಹಾಗೂ ಗೌರವಯುತ ಲಿಂಗಭೇದವಿಲ್ಲದೇ ಜೀವನ ನಡೆಸಲು ಸಂವಿಧಾನವು ಅವಕಾಶ ಕೊಟ್ಟಿದೆ. ಇದೀಗ ಚಂಡೀಗಢ ಕೋರ್ಟ್ ಮಹಿಳೆಯರ ಘನತೆಯ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ.

‘ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆಯುವುದು ಸಹ ಲೈಂ*ಗಿಕ ಕಿರುಕುಳವೆಂದೇ ಆಗುತ್ತದೆ. ಅದು ಮಹಿಳೆಯ ಘನತೆಗೆ ಧಕ್ಕೆ’ ಎಂದು ಚಂಡೀಗಢ ಕೋರ್ಟ್‌ ವ್ಯಕ್ತಿಯೋರ್ವನಿಗೆ 10,000 ರು. ದಂಡ ಹಾಕಿದೆ.

2021ರಲ್ಲಿ ಮನೆಯ ಮುಂದೆ ಕಸ ಗುಡಿಸುವ ವೇಳೆ ವ್ಯಕ್ತಿಯೋರ್ವ 500 ರು. ನೋಟು ಬಿಸಾಡಿ, ಫ್ಲೈಯಿಂಗ್‌ ಕಿಸ್‌ ಕೊಟ್ಟ ಬಗ್ಗೆ ಮಹಿಳೆ ಹೂಡಿದ್ದ ಪ್ರಕರಣ ವಿಚಾರಣೆ ನಡೆಸಿದ ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

‘ನೋಟು ಬಿಸಾಡುವುದು, ಅಸಭ್ಯ ಚಿಹ್ನೆಗಳನ್ನು ತೋರುವುದು, ಫ್ಲೈಯಿಂಗ್‌ ಕಿಸ್‌ ಕೊಡುವುದೂ ಸಹ ಕಿರುಕುಳವೆಂದೇ ಪರಿಗಣಿಸಲಾಗುತ್ತದೆ ಎಂದಿದೆ. ಲೈಂ*ಗಿಕ ಕಿರುಕುಳ ಎನ್ನುವುದು ಕೇವಲ ಸ್ಪರ್ಶದಿಂದಲೇ ಆಗಬೇಕೆಂದಿಲ್ಲ ಎಂದಿದೆ.

ದೋಷಿಯಂದ 20,000 ರು. ಪ್ರೊಬೇಷನ್‌ ಬಾಂಡ್‌ (ಶೂರಿಟಿ ಬಾಂಡ್‌) ಪಡೆದು, 10,000 ರು. ದಂಡ ಹಾಕಿದೆ. ಈ ಮೂಲಕ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.

ಇನ್ನು ಮಹಿಳೆಯರನ್ನು ಹಾಗೂ ಯುವತಿಯರನ್ನು ಪುರುಷರು ದಿಟ್ಟಿಸಿ ನೋಡುವುದು ಕೂಡಾ ಅಪರಾಧ ಎಂದು ಈಗಾಗಲೇ ಕೋರ್ಟ್ ಹಲವು ತೀರ್ಪುಗಳ ಮೂಲಕ ಸ್ಪಷ್ಟಪಡಿಸಿದೆ. ಹೀಗಾಗಿ ಪುರುಷರು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಬೆಸ್ಟ್.

Source link

Leave a Reply

Your email address will not be published. Required fields are marked *