ಮೊಮ್ಮಕ್ಕಳಲ್ಲೇ ಭೇದಭಾವ ಮಾಡ್ತಿದ್ದಾರೆ; ಪತ್ರಕರ್ತನನ್ನು ತರಾಟೆಗೆ ತಗೊಂಡ Megastar Chiranjeevi ಸೊಸೆ! | Megastar Chiranjeevi Grandson Wish Lavanya Tripathi Class To Journalist

ಮೊಮ್ಮಕ್ಕಳಲ್ಲೇ ಭೇದಭಾವ ಮಾಡ್ತಿದ್ದಾರೆ; ಪತ್ರಕರ್ತನನ್ನು ತರಾಟೆಗೆ ತಗೊಂಡ Megastar Chiranjeevi ಸೊಸೆ! | Megastar Chiranjeevi Grandson Wish Lavanya Tripathi Class To Journalist



ಮೊಮ್ಮಕ್ಕಳಲ್ಲೇ ಭೇದಭಾವ ಮಾಡ್ತಿದ್ದಾರೆ; ಪತ್ರಕರ್ತನನ್ನು ತರಾಟೆಗೆ ತಗೊಂಡ Megastar Chiranjeevi ಸೊಸೆ! | Megastar Chiranjeevi Grandson Wish Lavanya Tripathi Class To Journalist

Actor Chiranjeevi News: ನಟ ಚಿರಂಜೀವಿ ಅವರ ಮಗ ರಾಮ್‌ ಚರಣ್‌ ತೇಜಗೆ ಅವಳಿ ಮಕ್ಕಳು ಜನಿಸಿದ್ದಾರೆ. ಈ ಹಿಂದೆ ಮಗಳು ಜನಿಸಿದ್ದು, ಈಗ ಓರ್ವ ಮಗ, ಮಗಳು ಜನಿಸಿದ್ದರು. ಈ ಬಗ್ಗೆ ಪತ್ರಕರ್ತರೊಬ್ಬರು ಮಾಡಿದ ಟ್ವೀಟ್‌ಗೆ ಸೊಸೆ ಲಾವಣ್ಯಾ ತ್ರಿಪಾಠಿ ಕ್ಲಾಸ್‌ ತಗೊಂಡಿದ್ದಾರೆ. ಏನದು?

ಮೆಗಾಸ್ಟಾರ್ ಚಿರಂಜೀವಿ ( Chiranjeevi ) ಮನೆಯಲ್ಲಿ ಈಗ ಡಬಲ್ ಸಂಭ್ರಮ ಮನೆಮಾಡಿದೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಇತ್ತೀಚೆಗೆ ಅವಳಿ ಮಕ್ಕಳು ಜನಿಸಿದ್ದಾರೆ. ಇದರಲ್ಲಿ ಓರ್ವ ಗಂಡು ಹಾಗೂ ಓರ್ವ ಹೆಣ್ಣು ಮಗುವಿದೆ. ಮೆಗಾ ಕುಟುಂಬಕ್ಕೆ ವಾರಸುದಾರ ಬಂದಿದ್ದಾನೆ ಎಂದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ರಾಮ್‌ ಚರಣ್‌ ತೇಜಗೆ ಗಂಡು ಮಗು ಜನನ

ಟಾಲಿವುಡ್‌ನಲ್ಲಿ ದಶಕಗಳಿಂದ ಅದ್ಭುತ ಸಿನಿಮಾಗಳನ್ನು ನೀಡಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವವರು ಮೆಗಾಸ್ಟಾರ್ ಚಿರಂಜೀವಿ. ಅವರ ಮಗ ರಾಮ್ ಚರಣ್ ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಮದುವೆಯಾದ 10 ವರ್ಷಗಳ ಬಳಿಕ ರಾಮ್ ಚರಣ್‌ಗೆ ಮಗಳು ಹುಟ್ಟಿದ್ದಳು. ಮೊಮ್ಮಗ ಇಲ್ಲ ಎಂಬ ಬೇಸರವನ್ನು ಚಿರಂಜೀವಿ ಒಮ್ಮೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಾಮ್ ಚರಣ್‌ಗೆ ಗಂಡು ಮಗು ಜನಿಸಿದ್ದು, ಈ ಬಗ್ಗೆ ಪತ್ರಕರ್ತರೊಬ್ಬರು ಮಾಡಿದ ಕಾಮೆಂಟ್ ವಿವಾದಕ್ಕೆ ಕಾರಣವಾಗಿದೆ.

ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ

ಇವೆಂಟ್‌ವೊಂದರಲ್ಲಿ ಚಿರಂಜೀವಿ ಅವರು, “ನಮ್ಮ ಮನೆ ಲೇಡಿಸ್‌ ಹಾಸ್ಟೆಲ್‌ ಥರ ಆಗಿದೆ. ಓರ್ವ ಗಂಡು ಮಗು ಕೊಡು, ನಮ್ಮ ವಂಶ ಬೆಳೆಯಬೇಕು ಎಂದು ನಾನು ನನ್ನ ಮಗ ಚರಣ್‌ಗೆ ಹೇಳಿದ್ದೇನೆ” ಎಂದು ಹೇಳಿದ್ದರು. ಗಂಡಿನಿಂದಲೇ ವಂಶ ಬೆಳೆಯಬೇಕು ಎಂದು ಚಿರಂಜೀವಿ ಹೇಳಿದ್ದು ದೊಡ್ಡ ವಿವಾದ ಹುಟ್ಟುಹಾಕಿತ್ತು. ಈಗ ಈ ವಿಷಯದ ಬಗ್ಗೆ ತೆಲುಗಿನ ಪತ್ರಕರ್ತರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಈಗ ಚಿರಂಜೀವಿ ಅವರ ತಮ್ಮ ನಾಗಬಾಬು ಸೊಸೆ ಲಾವಣ್ಯಾ ತ್ರಿಪಾಠಿ ಟ್ವೀಟ್‌ ಮಾಡಿ ಬೇಸರ ಹೊರಹಾಕಿದ್ದಾರೆ.

ಪತ್ರಕರ್ತ ಹೇಳಿದ್ದೇನು?

ಹರಿ ಚರಣ್ ಪುಡಿಪೆಡ್ಡಿ ಎಂಬ ಪತ್ರಕರ್ತ, ‘2026ರಲ್ಲಿಯೂ ಗಂಡು ಮಗುವಿಗಾಗಿ ಈ ಹಂಬಲ ನೋಡುವುದು ನಿರಾಶಾದಾಯಕ. ರಾಮ್ ಚರಣ್ ಮೊದಲ ಮಗಳು ಕ್ಲಿನ್ ಕಾರಾ ಹುಟ್ಟಿದಾಗ ಇಷ್ಟು ದೊಡ್ಡ ಸ್ವಾಗತ ಸಿಕ್ಕಿರಲಿಲ್ಲ. ಇದು ಒಂದು ರೀತಿಯ ‘ಸಿಕ್ ಮೆಂಟಾಲಿಟಿ’ಯ ಸಂಕೇತ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಮೆಗಾ ಸೊಸೆ ಲಾವಣ್ಯಾ ತ್ರಿಪಾಠಿ ತಿರುಗೇಟು ನೀಡಿದ್ದಾರೆ.

ಲಾವಣ್ಯಾ ತ್ರಿಪಾಠಿ ಹೇಳಿದ್ದೇನು?

ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಲಾವಣ್ಯಾ, ‘ಚಿರಂಜೀವಿ ಅವರ ವ್ಯಕ್ತಿತ್ವವನ್ನು ಕೀಳಾಗಿ ಕಾಣುವ ಹಕ್ಕು ಯಾರಿಗೂ ಇಲ್ಲ. ಸುಂದರವಾದ, ಸಂತೋಷದ ಕ್ಷಣವನ್ನು ಹೀಗೆ ಅಸಹ್ಯಕರವಾಗಿ ಮಾಡುವುದು ಕೀಳುಮಟ್ಟದ ಆಲೋಚನೆ. ಅವರು ತಮ್ಮ ಕುಟುಂಬದ ಮಹಿಳೆಯರನ್ನು, ಅದರಲ್ಲೂ ಮೊಮ್ಮಕ್ಕಳನ್ನು ಎಷ್ಟು ಪ್ರೀತಿ, ಗೌರವದಿಂದ ಕಾಣುತ್ತಾರೆ ಎಂಬುದು ನಿಮಗೆ ತಿಳಿದಿಲ್ಲ. ಅವರ ಕೆಲಸದಲ್ಲಿ 1% ಕೂಡ ಮಾಡಲು ಸಾಧ್ಯವಾಗದವರು ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲಾವಣ್ಯ ಅವರ ಈ ಟ್ವೀಟ್ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *