ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ: ಪತ್ನಿಯ ಹರಕೆ ಸಲ್ಲಿಸಲು ಪತಿಯ ಪ್ರೀತಿಯ ಆಸರೆ

ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ: ಪತ್ನಿಯ ಹರಕೆ ಸಲ್ಲಿಸಲು ಪತಿಯ ಪ್ರೀತಿಯ ಆಸರೆ


ಚಿಕ್ಕೋಡಿ, ಫೆಬ್ರವರಿ 5: ಅಚಲವಾದ ಶ್ರದ್ಧೆ, ಭಕ್ತಿ, ನಂಬಿಕೆ ಇದ್ದರೆ ಯಾವುದೂ ಅಡ್ಡಿಯಾಗಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕ ದೇವಿ ಜಾತ್ರೆಯಲ್ಲಿ ಕಂಡು ಬಂದ ಅಪರೂಪದ ವಿದ್ಯಮಾನ ಸಾಕ್ಷಿಯಾಗಿದೆ. ತೀವ್ರ ತೊಂದರೆ ಇದ್ದರೂ ಪತ್ನಿಯ ಆಯ್ಕೆಯನ್ನು ನೆರವೇರಿಸಲು ಪತಿ ಆಕ್ಸಿಜನ್ ಸಿಲಿಂಡರ್ ಜೊತೆಗೇ ಬಂದು ದೇವಿಯ ದರ್ಶನ ಮಾಡಿಸಿದ್ದು ಭಕ್ತರ ಮನಸೂರೆಗೊಳ್ಳುವಂತೆ ಮಾಡಿದೆ.

ಭಾರತ ಹುಣ್ಣಿಮೆ ಪ್ರಯುಕ್ತ ನಡೆಯುತ್ತಿರುವ ಚಿಂಚಲಿ ಮಾಯಕ್ಕ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಭಕ್ತಸಾಗರದ ನಡುವೆಯೇ ಮಹಾರಾಷ್ಟ್ರದ ಪಂಢರಪುರದಿಂದ ದಂಪತಿ ದರ್ಶನಕ್ಕೆ ಆಗಮಿಸಿದ್ದಾರೆ. ಪತ್ನಿಗೆ ತೊಂದರೆ ಇರುವ ಕಾರಣ, ಆಕ್ಸಿಜನ್ ಸಿಲಿಂಡರ್ ಕೈಯಲ್ಲಿ ಹಿಡಿದುಕೊಂಡೇ ಪತಿ ದೇವಸ್ಥಾನದವರೆಗೆ ಹೆಜ್ಜೆ ಹಾಕಿ ದೇವಿಯ ದರ್ಶನ ಮಾಡಿದ್ದಾರೆ.

ಅನಾರೋಗ್ಯವನ್ನೇ ಲೆಕ್ಕಿಸದೆ ದೇವಿಯ ದರ್ಶನ ಪಡೆದ ದಂಪತಿಯ ಭಕ್ತಿ ಸ್ಥಳೀಯರ ಮನಸೆಳೆದಿದೆ. ‘ನಾವು ಮಹಾರಾಷ್ಟ್ರದ ಪಂಢರಪುರದಿಂದ ಬಂದಿದ್ದೇವೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಯಕ್ಕ ದೇವಿ ದರ್ಶನಕ್ಕೆ ಬರುತ್ತಿದೆ. ಈ ಬಾರಿ ಪತ್ನಿಯ ಆರೋಗ್ಯ ಸಮಸ್ಯೆಯಾದರೂ ದೇವಿಯ ಕೃಪೆಯಿಂದ ದರ್ಶನ ಚೆನ್ನಾಗಿ ಆಯಿತು’ ಎಂದ ಪತಿ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *