Headlines

ರಾಯನಿಗೆ ಧುರಂಧರ್ ಬಿಗ್ ಸವಾಲ್! ಕನ್ನಡದಲ್ಲೂ ಬರಲಿದೆ ಧುರಂಧರ್-2, ಟಾಕ್ಸಿಕ್ ರಿಲೀಸ್ ಮುಂದೂಡಿಕೆ? | March 19 Box Office Mega Clash Yash Toxic Vs Dhurandhar 2 Confirmed Kvn

ರಾಯನಿಗೆ ಧುರಂಧರ್ ಬಿಗ್ ಸವಾಲ್! ಕನ್ನಡದಲ್ಲೂ ಬರಲಿದೆ ಧುರಂಧರ್-2, ಟಾಕ್ಸಿಕ್ ರಿಲೀಸ್ ಮುಂದೂಡಿಕೆ? | March 19 Box Office Mega Clash Yash Toxic Vs Dhurandhar 2 Confirmed Kvn


ಮಾರ್ಚ್ 19 ರಂದು ಯಶ್ ಅಭಿನಯದ ‘ಟಾಕ್ಸಿಕ್’ ಮತ್ತು ‘ಧುರಂಧರ್-2’ ಚಿತ್ರಗಳು ಮುಖಾಮುಖಿಯಾಗಲಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬಾಕ್ಸಾಫೀಸ್ ಸಂಘರ್ಷಕ್ಕೆ ಕಾರಣವಾಗಿದೆ. ‘ಧುರಂಧರ್-2’ ಚಿತ್ರದ ಭಾರಿ ನಿರೀಕ್ಷೆಯಿಂದಾಗಿ, ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡುವಂತೆ ಒತ್ತಡ ಹೆಚ್ಚುತ್ತಿದೆ.

ಮಾರ್ಚ್ 19ಕ್ಕೆ ಭಾರತೀಯ ಸಿನಿರಂಗದ ಅತಿದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯೋದು ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಎದುರು ಧುರಂಧರ್-2 ತೆರೆಗೆ ಬರ್ತಾ ಇದೆ. ಎರಡೂ ಬಹುದೊಡ್ಡ ನಿರೀಕ್ಷೆಯ ಚಿತ್ರಗಳಾಗಿದ್ದು, ಎರಡೂ ಚಿತ್ರಗಳ ನಡುವೆ ಪ್ಯಾನ್ ಇಂಡಿಯಾ ಕದನ ನಡೆಯಲಿದೆ.

ರಾಯನಿಗೆ ಧುರಂಧರ್ ಬಿಗ್ ಸವಾಲ್..!

ಯೆಸ್, ಮಾರ್ಚ್ 19ಕ್ಕೆ ಭಾರತೀಯ ಸಿನಿರಂಗದಲ್ಲಿ ಬಹುದೊಡ್ಡ ಬಾಕ್ಸಾಫೀಸ್ ಕದನ ನಡೆಯೋದು ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಬರೊಬ್ಬರಿ 4 ವರ್ಷಗಳ ಕಾಲ ಸಮಯ ತೆಗೆದುಕೊಂಡು ರೆಡಿಮಾಡಿರೋ ಟಾಕ್ಸಿಕ್ ಮೂವಿ ಆ ದಿನ ರಿಲೀಸ್ ಆಗ್ತಾ ಇದೆ. ಮತ್ತು ಅದರ ಎದುರು ಬಾಲಿವುಡ್‌ನ ಬಹುನಿರೀಕ್ಷೆಯ ಧುರಂಧರ್-2 ಕೂಡ ತೆರೆಕಾಣಲಿದೆ. ಅಸಲಿಗೆ ಧುರಂಧರ್ 1 ಬಂದಾಗ ಅಷ್ಟು ದೊಡ್ಡ ನಿರೀಕ್ಷೆ ಇರಲಿಲ್ಲ. ಆದ್ರೆ ಈ ಸ್ಪೈ ಕಥಾಹಂದರದ ಈ ಮಲ್ಟಿಸ್ಟಾರರ್ ಮೂವಿ ದೇಶಾದ್ಯಂತ ಬಹುದೊಡ್ಡ ಸಕ್ಸಸ್ ಗಳಿಸಿತು. ಇದು ಬರೋಬ್ಬರಿ 1350 ಕೋಟಿ ಗಳಿಕೆ ಮಾಡಿತು.

ಇನ್ನೂ ಯಶ್ ನಟನೆಯ ಹಿಂದಿನ ಸಿನಿಮಾ ಕೆಜಿಎಫ್ -2 ಬಾಕ್ಸಾಫೀಸ್​ನಲ್ಲಿ 1250 ಕೋಟಿ ಗಳಿಸಿತ್ತು. ಈಗ ಕೆಜಿಎಫ್​ 2 ಮೀರಿಸುವಂತೆ ಟಾಕ್ಸಿಕ್‌ನ ರೆಡಿ ಮಾಡಲಾಗಿದೆ. ಇಂಗ್ಲೀಷ್​ನಲ್ಲೂ ಸಿನಿಮಾ ಸಿದ್ದಗೊಂಡಿದ್ದು ವರ್ಲ್ಡ್ ವೈಡ್ ತೆರೆಗೆ ಬರ್ತಾ ಇದೆ.

ಕನ್ನಡದಲ್ಲೂ ಬರಲಿದೆ ಧುರಂಧರ್-2!

ಹೌದು ಧುರಂಧರ್-1 ಹಿಂದಿ ಜೊತೆಗೆ ತಮಿಳು, ತೆಲುಗುನಲ್ಲಿ ಬಂದಿತ್ತು. ಆದ್ರೆ ಕನ್ನಡ ವರ್ಷನ್ ರಿಲೀಸ್ ಆಗಿರಲಿಲ್ಲ. ಅಷ್ಟಾದ್ರೂ ಬೆಂಗಳೂರಿನಲ್ಲಿ ಸಿನಿಮಾ ಭರ್ಜರಿ ಕಮಾಯಿ ಮಾಡಿತ್ತು. ಸೋ ಈಗ ಧುರಂಧರ್ ಟೀಂ ಕನ್ನಡದಲ್ಲೂ ಡಬ್ ಮಾಡಿ ಚಿತ್ರವನ್ನ ರಿಲೀಸ್ ಮಾಡ್ತಾ ಇದೆ. ಬಿಡುಗಡೆ ಆಗಿರೋ ಹೊಸ ಟೀಸರ್ ಜೊತೆಗೆ ಕನ್ನಡ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಅದ್ರಲ್ಲೂ ನಿರ್ದೇಶಕ ಆದಿತ್ಯ ಧರ್ , ಕನ್ನಡ ಪೋಸ್ಟರ್ ಹಂಚಿಕೊಂಡು ಹಾಳಾಗುವ ಸಮಯ ಬಂದಿದೆ ಅಂತ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಹಾಳಾಗೋ ಸಮಯ ಅಂತ ಟಾಕ್ಸಿಕ್‌ಗೆ ಹೇಳಿದ್ರಾ ಅಂತ ಚರ್ಚೆ ಶುರುವಾಗಿದೆ.

ಟಾಕ್ಸಿಕ್ ಮುಂದೂಡಿಕೆಗೆ ವಿತರಕರ ಮನವಿ..!

ಹೌದು ಟಾಕ್ಸಿಕ್​ ಹಿಂದಿ ವಿತರಕರು , ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಿ ಅಂತ ಒತ್ತಾಯ ಮಾಡ್ತಾ ಇದ್ದಾರಂತೆ. ಧುರಂಧರ್-2 ಜೊತೆಗೆ ಟಾಕ್ಸಿಕ್ ಬಿಡುಗಡೆ ಆದ್ರೆ ಖಂಡಿತ ಕಲೆಕ್ಷನ್ ಹೊಡೆತ ಬೀಳುತ್ತೆ. ನಮಗೆ ನಷ್ಟವಾಗುತ್ತೆ. ಸೋ ಸಿನಿಮಾ ಮುಂದಕ್ಕೆ ಹಾಕಿ ಅಂತ ನಿರ್ಮಾಪಕರ ಬಳಿ ಒತ್ತಾಯಿಸ್ತಾ ಇದ್ದಾರೆ.

ಇನ್ನೂ ಟಾಕ್ಸಿಕ್ ನಿರ್ಮಾಣ ಮಾಡಿರೋ ಕೆವಿಎನ್ ಪ್ರೊಡಕ್ಷನ್ ಈಗ ಜನನಾಯಗನ್ ಚಿತ್ರದ ವಿಳಂಬದಿಂದ ಕೊಂಚ ಸಂಕಷ್ಟದಲ್ಲಿ ಸಿಲುಕಿದೆ. ಜನನಾಯಗನ್ ವಿಚಾರ ಕೋರ್ಟ್​ ಅಂಗಳದಲ್ಲಿದ್ದು, ಇದು ಕೂಡ ಟಾಕ್ಸಿಕ್ ಬಿಡುಗಡೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಡೇರಿಂಗ್ ಸ್ಟಾರ್ ಆಗ್ತಾರಾ ರಾಕಿಂಗ್ ಸ್ಟಾರ್?

ಧುರಂಧರ್1 ಈಗಾಗ್ಲೇ ಗೆದ್ದಿರೋದ್ರಿಂದ ಪಾರ್ಟ್​​-2ಗೆ ಬಿಗ್ ಓಪನಿಂಗ್ ಸಿಕ್ಕೋದು ಫಿಕ್ಸ್, ಸೋ ಗೊತ್ತಿದ್ದೂ ಗೊತ್ತಿದ್ದೂ ಟಾಕ್ಸಿಕ್ ಅದರ ಎದುರು ಫೈಟ್ ಮಾಡಬೇಕಿದೆ. ಯಶ್‌ಗೆ ಟಾಕ್ಸಿಕ್ ಬಲು ಮುಖ್ಯ. ಯಾಕಂದ್ರೆ ಬರೊಬ್ಬರಿ 4 ವರ್ಷ ಚಿತ್ರಕ್ಕಾಗಿ ಕಳೆದಿದ್ದಾರೆ. ಸೋ ಈ ಕ್ಲಾಶ್‌​ನಿಂದ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆ.

ಈ ಕ್ಲ್ಯಾಶ್ ಬೇಡ ಅಂತ ಯಶ್ ಮೇಲೆ ಖಂಡಿತ ಒತ್ತಡ ಬಂದೇ ಬರುತ್ತೆ. ಆ ಒತ್ತಡ ಮೀರಿಯೂ ಮಾರ್ಚ್ 19ಕ್ಕೆ ಸಿನಿಮಾ ಮಾಡಿದ್ರೆ ಖಂಡಿತ ರಾಕಿಂಗ್ ಸ್ಟಾರ್ ಡೇರಿಂಗ್ ಸ್ಟಾರ್ ಅಂತ ಕರೆಸಿಕೊಳ್ಳಲಿದ್ದಾರೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *