Headlines

Karna Serial: ಕೊನೆಗೂ ಕರ್ಣ-ನಿಧಿ ಪ್ರೀತಿ ನಿತ್ಯಾ ಮುಂದೆ ಬಯಲು… ತಂಗಿ ಮದುವೆ ಮಾಡಿಸಿಯೇ ಬಿಡ್ತಾಳ ಅಕ್ಕ!

Karna Serial: ಕೊನೆಗೂ ಕರ್ಣ-ನಿಧಿ ಪ್ರೀತಿ ನಿತ್ಯಾ ಮುಂದೆ ಬಯಲು… ತಂಗಿ ಮದುವೆ ಮಾಡಿಸಿಯೇ ಬಿಡ್ತಾಳ ಅಕ್ಕ!

Karna Serial: ಕೊನೆಗೂ ಕರ್ಣ-ನಿಧಿ ಪ್ರೀತಿ ನಿತ್ಯಾ ಮುಂದೆ ಬಯಲು… ತಂಗಿ ಮದುವೆ ಮಾಡಿಸಿಯೇ ಬಿಡ್ತಾಳ ಅಕ್ಕ!

Karna Serial: ಕರ್ಣ ಧಾರಾವಾಹಿಯಲ್ಲಿ ಕೊನೆಗೂ ನಿಧಿ ಮತ್ತು ಕರ್ಣ ಪ್ರೀತಿ ನಿತ್ಯಾ ಮುಂದೆ ಬಯಲಾಗೋ ಸಮಯ ಬಂದಿದೆ. ಸತ್ಯ ಗೊತ್ತಾದ್ರೆ ನಿಧಿ ಮತ್ತು ಕರ್ಣನಿಗೆ ಆಸ್ಪತ್ರೆಯಲ್ಲೆ ಮದುವೆ ಮಾಡಿಸಿ, ತಾನು ದೂರ ಹೋಗ್ತಾಳ ನಿತ್ಯಾ. ಸಖತ್ ಟ್ವಿಸ್ಟ್ ಕೊಟ್ಟಿದೆ ಸೀರಿಯಲ್.

ಕರ್ಣ ಧಾರಾವಾಹಿಯಲ್ಲಿ ಕೊನೆಗೂ ಸತ್ಯ ಬಯಲಾಗೋ ಸಮಯ ಬಂದೆ ಬಿಟ್ಟಿದೆ. ಇಲ್ಲಿವರೆಗೂ ಅಕ್ಕನಿಂದ ತನ್ನ ಪ್ರೀತಿಯನ್ನು ನಿಧಿ ಮುಚ್ಚಿಟ್ಟಿದ್ದಳು. ಇದೀಗ ಸಮಯ ನಿತ್ಯಾಗೆ ಎಲ್ಲಾ ಸತ್ಯವನ್ನು ಗೊತ್ತಾಗುವಂತೆ ಮಾಡಿದೆ. ಕರ್ಣ ಮತ್ತು ನಿಧಿ ಪ್ರೀತಿ ಗೊತ್ತಾದ ಮೇಲೆ ಏನು ಮಾಡ್ತಾಳೆ ನಿತ್ಯಾ ಕಾದು ನೋಡಬೇಕು.

ಕರ್ಣ ಸೀರಿಯಲ್ ಪ್ರೊಮೊ ಇದೀಗ ಬಿಡುಗಡೆಯಾಗಿದ್ದು, ಕರ್ಣನ ಕ್ಯಾಬಿನ್ ನಲ್ಲಿ ಕೂತಿರೋ ನಿಧಿ, ಕರ್ಣ ಮತ್ತು ನಿಧಿ ಹೆಸರನ್ನು ಸೇರಿಸಿ FLAMES ಗೇಮ್ ಆಡ್ತಿದ್ದಾಳೆ, ಅದನ್ನೇ ಕರ್ಣನಿಗೂ ಬಂದು ತೋರಿಸಿದ್ದಾಳೆ. ಆದರೆ ಅಷ್ಟರಲ್ಲೇ ಅಲ್ಲಿಗೆ ಬರೋ ಸ್ಟಾಫ್, ಅದೇ ಪೇಪರನ್ನು ತೆಗೆದುಕೊಂಡು ಹೋಗ್ತಾರೆ, ಅದನ್ನ ವಾಪಾಸ್ ಕೊಡುವಂತೆಯೂ ಕೇಳುತ್ತಾಳೆ.

ಆ ಚೀಟಿಯಲ್ಲಿ ನನ್ನ ಭವಿಷ್ಯಾನೆ ಇದೆ ಎಂದು ನಿಧಿ ಹೇಳ್ತಾಳೆ, ಆದರೆ ಅಲ್ಲಿಗೆ ಬರುವ ನಿತ್ಯಾ ಅವರ ಕೈಯಿಂದ ಆ ಚೀಟಿ ತೆಗೆದು ನೋಡಿ ಶಾಕ್ ಆಗ್ತಾಳೆ. ಅಲ್ಲಿಗೆ ನಿಧಿ ಮತ್ತು ಕರ್ಣ ಪ್ರೀತಿಯ ಕಣ್ಣಾಮುಚ್ಚಾಲೆ ನಿತ್ಯಾ ಮುಂದೆ ಬಯಲಾಗಿದೆ. ಮುಂದೇನು ಮಾಡ್ತಾಳೆ ನಿತ್ಯಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಪ್ರೊಮೋದಲ್ಲಿ ತೋರಿಸಿರುವಂತೆ ನಿತ್ಯಾ ಮುಂದೆ ಸತ್ಯ ಬಯಲಾಗಿದೆ. ಆದರೆ ನಿಜವಾಗಿಯೂ ಇಷ್ಟು ಬೇಗ ಸತ್ಯ ಬಯಲಾಗೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ವೀಕ್ಷಕರು. ಸಡನ್ ಆಗಿ ಸತ್ಯ ಅನಾವರಣ ಆಗುವ ಸಾಧ್ಯತೆ ಇಲ್ಲ, ನಿತ್ಯಾ ಮೆಡಿಸಿನ್ ಬಗ್ಗೆ ನೋಡಿ ಶಾಕ್ ಆಗಿರಬೇಕು, ನಿಧಿ ಬರೆದಿರೋದು ಹಿಂದುಗಡೆ ಇದೆ ಎಂದಿದ್ದಾರೆ ವೀಕ್ಷಕರು.

ಕರ್ಣನಿಗೆ ತನ್ನ ತಂದೆಯಿಂದಲೇ ಕರ್ಣ-ನಿತ್ಯಾ-ನಿಧಿ ಬದುಕು ಹಾಳಾಗಿದೆ ಅನ್ನೋದು ಗೊತ್ತಾಗಿದೆ. ಇಲ್ಲಿವರೆಗೆ ಕಂಡಿದ್ದ ಅಪ್ಪನ ಒಳ್ಳೆಯತನ ಎಲ್ಲವೂ ಸುಳ್ಳು ಅನ್ನೋದು ಸಹ ಬಯಲಾಗಿದೆ. ಹಾಗಾಗಿ ಅಪ್ಪನ ಸೊಕ್ಕು ಮುರಿಯಲು ಏನೇನು ಮಾಡಬಹುದು ಎಲ್ಲವನ್ನೂ ಮಾಡುತ್ತಿದ್ದಾನೆ ಕರ್ಣ. ಜೊತೆಗೆ ನಿತ್ಯಾಗೆ ತಮ್ಮ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಸಾಲಿನಲ್ಲೂ ತಂದು ಕೂರಿಸಿದ್ದಾರೆ.

ಇಲ್ಲಿವರೆಗೂ ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗೋರು ಯಾರು ಅನ್ನೋದು ಮಾತ್ರ ಗೊತ್ತಾಗ್ತ ಇಲ್ಲ. ಕರ್ಣ ಮತ್ತು ನಿಧಿ ಹತ್ತಿರವಾಗುತ್ತಾರೆ ಅಂದಾಗಲೆಲ್ಲಾ, ವಿಧಿ ಅವರನ್ನು ಮತ್ತೆ ಮತ್ತೆ ದೂರ ಮಾಡುತ್ತಿದೆ, ಮತ್ತೊಂದೆಡೆ ನಿತ್ಯಾ ಮತ್ತು ತೇಜಸ್ ಕೂಡ ದೂರಾಗಿದ್ದಾರೆ. ನಿತ್ಯಾ ಮತ್ತು ಕರ್ಣ ಹತ್ತಿರವಾಗಿದ್ದಾರೆ. ಹಾಗಾಗಿ ಯಾರು ಕರ್ಣನಿಗೆ ಜೋಡಿಯಾಗ್ತಾರೆ ಅನ್ನೋದೆ ವೀಕ್ಷಕರಿಗೆ ಕಗ್ಗಂಟಾಗಿದೆ.

Source link

Leave a Reply

Your email address will not be published. Required fields are marked *