Headlines

‘ಜನ ನಾಯಗನ್’ ಸಿನಿಮಾದಿಂದಾಗಿ 100 ಕೋಟಿ ನಷ್ಟ ಅನುಭವಿಸಿದ ಚಿತ್ರಮಂದಿರಗಳು

‘ಜನ ನಾಯಗನ್’ ಸಿನಿಮಾದಿಂದಾಗಿ 100 ಕೋಟಿ ನಷ್ಟ ಅನುಭವಿಸಿದ ಚಿತ್ರಮಂದಿರಗಳು


ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾ ಜನವರಿ 10ಕ್ಕೆ ತೆರೆ ಕಾಣಬೇಕಿತ್ತು. ಆದರೆ ಸಿಬಿಎಫ್ ಸಿ, ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಅದರ ನಂತರ ನಡೆದ ಬೆಳವಣಿಗೆಗಳಿಗೆ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಸಿನಿಮಾ ಬಿಡುಗಡೆ ತಡವಾಗಿದ್ದಾರೆ ನಿರ್ಮಾಪಕ ಕೆವಿಎನ್ ಭಾರಿ ನಷ್ಟ ಅನುಭವಿಸುತ್ತಿದ್ದಾರೆ, ಅನುಭವಿಸುತ್ತಿದ್ದಾರೆ. ಅವರ ಜೊತೆಗೆ ಚಿತ್ರಮಂದಿರಗಳಿಗೂ ಸಹ ಸುಮಾರು 100 ಕೋಟಿ ನಷ್ಟ ಉಂಟಾಗಿದೆ.

‘ಜನ ನಾಯಕನ್’ ಸಿನಿಮಾ ಜನವರಿ 10ಕ್ಕೆ ಬಿಡುಗಡೆಯಾಗಬೇಕಿತ್ತು. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಸಾವಿರಾರು ಮಂದಿ ಸಿನಿಮಾ ವೀಕ್ಷಿಸಲು ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಂಡಿದ್ದರು. ಆದರೆ ಹಠಾತ್ತನೇ ಸಿನಿಮಾ ಬಿಡುಗಡೆಗೊಳಿಸಲಾಯಿತು. ಇದರಿಂದ ಚಿತ್ರಮಂದಿರಗಳಿಗೆ ಭಾರಿ ಹೊಡೆತ ಬಿದ್ದಿದೆ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ತಮಿಳುನಾಡಿನ ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ದಳ ವಿಜಯ್ ಸಿನಿಮಾ ಬಿಡುಗಡೆ ತಡವಾಗಿ ತಮಿಳುನಾಡು ಚಿತ್ರಮಂದಿರಗಳಿಗೆ ಕನಿಷ್ಠ 100 ಕೋಟಿ ರೂಪಾಯಿ ನಷ್ಟವಾಗಿದೆ. ದಳಪತಿ ವಿಜಯ್ ಸಿನಿಮಾಗಳು ಇತ್ತೀಚೆಗಿನ ಚಿತ್ರಮಂದಿರಗಳಿಗೆ ಬಂಪರ್ ಲಾಭವನ್ನೇ ತಂದುಕೊಟ್ಟಿವೆ. ಅದರಲ್ಲೂ ‘ಜನ ನಾಯಕ’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಭಾರಿ ಜನ ಪ್ರವಾಹವನ್ನೇ ಚಿತ್ರಮಂದಿರಗಳು ಎದುರು ನೋಡುತ್ತಿದ್ದವು. ಅಡ್ವಾನ್ಸ್ ನೀಡಿ, ಚಿತ್ರಮಂದಿರಗಳನ್ನು ಅಣಿ ಮಾಡಿ ಕಾಯುತ್ತಿದ್ದೆವು. ಆದರೆ ಸಿನಿಮಾ ಬಿಡುಗಡೆ ಆಗಿಲ್ಲ’ ಬಾಲ.

‘ಜನ ನಾಯಕನ್’ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನಿರಾಕರಿಸಿರುವ ಪ್ರಕರಣವನ್ನು ಇದೀಗ ಹೈಕೋರ್ಟ್ ನ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ಪ್ರಕರಣ ಮತ್ತಷ್ಟು ವಿಳಂಬ. ಇದೇ ಕಾರಣಕ್ಕೆ ಇದೀಗ ಸಿನಿಮಾದ ನಿರ್ಮಾಪಕರು, ಹೈಕೋರ್ಟ್‌ಗೆ ತಾವು ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲಿದೆ, ಸಿನಿಮಾವನ್ನು ಸಿಬಿಎಫ್ ಸಿ ಮೊದಲು ರಿವ್ಯೂ ಕಮಿಟಿಗೆ ಕಳಿಸಲು ನಿರ್ಧರಿಸಲಾಗಿದೆ.

ಸಿನಿಮಾವನ್ನು ಮತ್ತೆ ರಿವ್ಯೂ ಕಮಿಟಿಗೆ ಕಳಿಸಿದ, ಸಿಬಿಎಫ್ ಸಿ ಹೇಳಿದ ಎಲ್ಲ ಕಟ್ ಮತ್ತು ಮ್ಯೂಟ್ ಗಳನ್ನು ಚಿತ್ರತಂಡ ಒಪ್ಪಿಕೊಳ್ಳಬೇಕಿದೆ. ಆದರೆ ಇದರಿಂದ ಆಗುವ ಲಾಭವೆಂದರೆ ರಿವ್ಯೂ ಕಮಿಟಿಗೆ ಹೋದ ಸಿನಿಮಾಗಳಿಗೆ 15 ದಿನಗಳು ಕಡ್ಡಾಯವಾಗಿ ಪ್ರಮಾಣ ಪತ್ರ ನೀಡಲೇಬೇಕು. ನ್ಯಾಯಾಲಯದಲ್ಲಿ ವಿಚಾರಣೆ, ಆದೇಶಗಳು ವಿಳಂಬ ಆಗುವ ಭೀತಿ ಇರುವ ಕಾರಣಕ್ಕೆ ಇದೀಗ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸುವ ನಿರ್ಧಾರವನ್ನು ಚಿತ್ರತಂಡ ಹೇಳುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:35 pm, ಗುರುವಾರ, 5 ಫೆಬ್ರವರಿ 26



Source link

Leave a Reply

Your email address will not be published. Required fields are marked *