Headlines

​ಕೇವಲ 765 ಗ್ರಾಂ ತೂಕ, ಆರು ಬಾರಿ ರಕ್ತ ಪೂರಣ; ಸಾವಿನ ದವಡೆಯಿಂದ ಮರಳಿ ಬಂದ ಪ್ರಿಯಾಂಕಾ ಚೋಪ್ರಾ ಪುತ್ರಿ ಮಾಲ್ತಿ | Nick Jonas Reveals Daughters Premature Birth And 100 Day Nicu Struggle

​ಕೇವಲ 765 ಗ್ರಾಂ ತೂಕ, ಆರು ಬಾರಿ ರಕ್ತ ಪೂರಣ; ಸಾವಿನ ದವಡೆಯಿಂದ ಮರಳಿ ಬಂದ ಪ್ರಿಯಾಂಕಾ ಚೋಪ್ರಾ ಪುತ್ರಿ ಮಾಲ್ತಿ | Nick Jonas Reveals Daughters Premature Birth And 100 Day Nicu Struggle


ಹಾಲಿವುಡ್ ಗಾಯಕ ನಿಕ್ ಜೋನಸ್, ತಮ್ಮ ಮಗಳು ಮಾಲ್ತಿ ಹುಟ್ಟಿದಾಗಿನ ಕಷ್ಟದ ದಿನಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವಧಿಪೂರ್ವ ಜನನ, ಮಗಳ ಸ್ಥಿತಿ, ಆಸ್ಪತ್ರೆಯಲ್ಲೇ ಕಳೆದ 3.5 ತಿಂಗಳ ಬಗ್ಗೆ ಹೇಳುತ್ತಾ ಭಾವುಕರಾದರು.

ಪ್ರಿಯಾಂಕಾ ಚೋಪ್ರಾ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಸ್ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಹುಟ್ಟಿದಾಗಿನ ಅತ್ಯಂತ ಭಾವುಕ ಮತ್ತು ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಮಾಲ್ತಿ ಅವಧಿಗೂ ಮುನ್ನ, ತುಂಬಾನೇ ಗಂಭೀರ ಸ್ಥಿತಿಯಲ್ಲಿ ಹುಟ್ಟಿದ್ದಳು ಎಂದು ಅವರು ಹೇಳಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡು ನಿಕ್ ಕಣ್ಣಂಚು ಒದ್ದೆಯಾಯಿತು. ಇತ್ತೀಚೆಗೆ ಜೈ ಶೆಟ್ಟಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ನಿಕ್, ‘ಇವತ್ತು ನನ್ನ ಮಗಳು ಆಟವಾಡುವುದನ್ನು, ನಗುವುದನ್ನು ನೋಡಿದಾಗ, ಅವಳು ಇಷ್ಟು ದೊಡ್ಡ ಹೋರಾಟ ಮಾಡಿ ಗೆದ್ದು ಬಂದಿದ್ದಾಳೆ ಅನ್ನೋದನ್ನು ನಂಬೋಕೆ ಆಗಲ್ಲ” ಎಂದರು.

ಏಪ್ರಿಲ್‌ನಲ್ಲಿ ಆಗಬೇಕಿದ್ದ ಜನನ, ಜನವರಿಯಲ್ಲೇ ಆಯಿತು

ಮಾಲ್ತಿ ಹುಟ್ಟಿನ ಬಗ್ಗೆ ಇದೇ ಮೊದಲ ಬಾರಿಗೆ ನಿಕ್ ಮುಕ್ತವಾಗಿ ಮಾತನಾಡಿದ್ದಾರೆ. ‘ಅವಳು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಈ ಜಗತ್ತಿಗೆ ಬಂದಳು. ಈ ಬಗ್ಗೆ ನಾನೆಂದೂ ಮಾತನಾಡಿರಲಿಲ್ಲ. ಅವಳು ಏಪ್ರಿಲ್‌ನಲ್ಲಿ ಹುಟ್ಟುತ್ತಾಳೆ ಅಂದುಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ ಕಾಲ್ ಬಂತು, ಡೆಲಿವರಿ ಬೇಗ ಆಗಲಿದೆ ಅಂತ. ನಾವು ಆಸ್ಪತ್ರೆಗೆ ಹೋದೆವು. ಅವಳು ಹುಟ್ಟಿದಾಗ ಕೇವಲ 1 ಪೌಂಡ್ 11 ಔನ್ಸ್ (ಸುಮಾರು 765 ಗ್ರಾಂ) ತೂಕವಿದ್ದಳು. ಅವಳ ಮೈಬಣ್ಣ ಬಹುತೇಕ ನೇರಳೆ ಬಣ್ಣಕ್ಕೆ ತಿರುಗಿತ್ತು ಎಂದು ನಿಕ್ ವಿವರಿಸಿದರು.

ಹುಟ್ಟಿದ ಮೂರೂವರೆ ತಿಂಗಳು ಆಸ್ಪತ್ರೆಯಲ್ಲೇ ಇದ್ದ ಮಾಲ್ತಿ!

ಹುಟ್ಟಿದ ತಕ್ಷಣ ಮಾಲ್ತಿಯನ್ನು NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ಗೆ ಕರೆದೊಯ್ಯಲಾಯಿತು. ಅಲ್ಲಿನ ನರ್ಸ್‌ಗಳು ಅವಳ ಜೀವ ಉಳಿಸಲು ಹಗಲಿರುಳು ಶ್ರಮಿಸಿದರು. ಅದು ಕೋವಿಡ್-19 ಸಮಯವಾಗಿದ್ದರಿಂದ ನಮ್ಮ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿತ್ತು. ನಾನು ಮತ್ತು ನನ್ನ ಪತ್ನಿ ಪ್ರತಿದಿನ 12-12 ಗಂಟೆ ಆಸ್ಪತ್ರೆಯಲ್ಲೇ ಇರುತ್ತಿದ್ದೆವು. ಇದು ಸತತ ಮೂರೂವರೆ ತಿಂಗಳು ನಡೆಯಿತು. ಆ ಜಾಗದ Smell ಇವತ್ತಿಗೂ ನನಗೆ ನೆನಪಿದೆ. ಪ್ರತಿದಿನ ಅಲ್ಲಿರುವುದು ಒಂಥರಾ ಸಮಾಧಾನ, ಇನ್ನೊಂದೆಡೆ ಭಯ ಹುಟ್ಟಿಸುತ್ತಿತ್ತು. ಯಾಕಂದ್ರೆ, ನಮ್ಮಂತೆ ಬೇರೆ ಕುಟುಂಬಗಳು ಕೂಡ ಅದೇ ನೋವನ್ನು ಅನುಭವಿಸುವುದನ್ನು ನಾವು ನೋಡುತ್ತಿದ್ದೆವು ಎಂದು ನಿಕ್ ಹೇಳಿದರು.

ಪ್ರಿಯಾಂಕಾ-ನಿಕ್ ಮಗಳಿಗೆ 6 ಬಾರಿ ರಕ್ತ ಪೂರಣ

ಮಾಲ್ತಿ ಬಗ್ಗೆ ಮಾತನಾಡುತ್ತಾ ನಿಕ್ ಜೋನಸ್ ಭಾವುಕರಾದರು. ಗದ್ಗದಿತರಾಗಿ, ‘ಅವಳು (ಮಾಲ್ತಿ) ಪ್ರತಿದಿನ ಹೋರಾಡಿದಳು. ನಿಧಾನವಾಗಿ ಅವಳ ತೂಕ ಹೆಚ್ಚಾಗತೊಡಗಿತು. ಆರು ಬಾರಿ ರಕ್ತ ಪೂರಣ (Blood Transfusion) ಮಾಡಿದ ನಂತರ ಅವಳ ಸ್ಥಿತಿ ಸುಧಾರಿಸಿತು. ಮೂರೂವರೆ ತಿಂಗಳ ನಂತರ ನಾವು ಅವಳನ್ನು ಮನೆಗೆ ಕರೆತರಲು ಸಾಧ್ಯವಾಯಿತು. ಇವತ್ತು ನಾನು ಅವಳನ್ನು ನೋಡಿದಾಗ, ಅವಳ ಈ ಮಾಂತ್ರಿಕ ಜಗತ್ತಿನ ಭಾಗವಾಗುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಆಶ್ಚರ್ಯವಾಗುತ್ತದೆ ಎಂದರು.

ಜನವರಿ 2022ರಲ್ಲಿ ಪ್ರಿಯಾಂಕಾ-ನಿಕ್ ಮಗಳ ಜನನ

ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ 2018ರಲ್ಲಿ ರಾಜಸ್ಥಾನದಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಿದ್ದರು. ಜನವರಿ 2022ರಲ್ಲಿ ಬಾಡಿಗೆ ತಾಯ್ತನದ (surrogacy) ಮೂಲಕ ಇವರ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಜನಿಸಿದಳು.



Source link

Leave a Reply

Your email address will not be published. Required fields are marked *