ಮುಂಬೈ, ಫೆಬ್ರವರಿ 05: ಸ್ವಾಭಿಮಾನದ ಬದುಕೇ ಹಾಗೆ, ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಮಕ್ಕಳು ಚೆನ್ನಾಗಿ ನೋಡಬೇಕಾದ ಸಮಯದಲ್ಲಿ ತಾವೇ ದುಡಿದು ಜೀವನ ನಡೆಸುತ್ತಿರುವವರಲ್ಲಿ ಈ ವೃದ್ಧೆ (ಮುದುಕಿ) ಕೂಡ ಒಬ್ಬರು. ಹೌದು, 89 ವರ್ಷದ ಅಜ್ಜಿಯೊಬ್ಬರು ಮುಂಬೈನ (ಮುಂಬೈ) ಲೋಕಲ್ ರೈಲಿನಲ್ಲಿ ಬ್ರೇಸ್ಲೆಟ್‌ಗಳನ್ನು ಮಾರುತ್ತಿದ್ದಾರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.
ಮೀತಾ ತುಷಿತ್ ಶಾ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ವೃದ್ಧೆಯೊಬ್ಬರು ಬ್ರೆಸ್ಲೆಟ್‌ಗಳನ್ನು ಮಾರುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಇದು ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಲ್ಲವೇ?. ಇಂದು ಮಧ್ಯಾಹ್ನ ಮುಂಬೈ ಲೋಕಲ್ ರೈಲಿನಲ್ಲಿ ಹತ್ತತ್ತಿದ್ದಾಗ, ನಾನು ಬಳೆಗಳನ್ನು ಮಾರುತ್ತಿದ್ದ 89 ವರ್ಷದ ವೃದ್ಧೆಯನ್ನು ಭೇಟಿ ಮಾಡಿದೆ.
ವೈರಲ್ ವಿಡಿಯೋ ಇಲ್ಲಿದೆ
ನಾನು ಎಲ್ಲವನ್ನೂ ಖರೀದಿಸಲು ಬಯಸಿದ್ದೆ, ಆದರೆ ಹಣದ ಕೊರತೆಯಿಂದಾಗಿ ಸಾಧ್ಯವಾಗಲಿಲ್ಲ. ತನ್ನ ಕುಟುಂಬದ ಜೀವನ ವೆಚ್ಚವನ್ನು ಭರಿಸಬೇಕು, ಅದಕ್ಕಾಗಿ ಈ ಕೆಲಸ ಎಂದು ಹೇಳಿದರು. ಇದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೀತಾ ತುಷಿತ್ ಶಾ ಈ ಅಜ್ಜಿಯನ್ನು ಮಾತನಾಡಿಸಿದ್ದು, ನನ್ನ ಹೆಸರು ಕಮಲಾಬೆನ್ ಮೆಹ್ತಾ. ನಾನು ನಲಸೋಪರಾದಲ್ಲಿ ನೆಲೆಸಿದ್ದೇನೆಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ
ಈ ವಿಡಿಯೋ ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರರು, ಈ ವೃದ್ಧೆಯ ಸ್ವಾಭಿಮಾನದ ನನ್ನದೊಂದು ಸಲಾಂ ಎಂದರೆ, ಮತ್ತೊಬ್ಬರು, ಈ ವೃದ್ಧೆ ನಾನು ಜೂನಿಯರ್ ಕಾಲೇಜಿನಲ್ಲಿದ್ದಾಗ ರೈಲುಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ನನಗೆ 40 ವರ್ಷ. ಇವತ್ತಿಗೂ ಅವರಲ್ಲಿ ಉತ್ಸಾಹ ಇದೆ. ಅವರಿಗೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಎಲ್ಲಾ ಕುಳಿತು ತಿನ್ನುವವರ ನಡುವೆ ಈ ವೃದ್ಧೆ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ