
ಲವ್ ವೀಕ್ ನ ಆರಂಭದ ದಿನ ರೋಸ್ ಡೇ, ಕೆಲವೊಮ್ಮೆ ಪದಗಳು ಹೇಳಲು ಸಾಧ್ಯವಾಗದೇ ಇರುವುದನ್ನು ಒಂದು ಹೂವು ಹೇಳುತ್ತೆ. ಹಾಗಾಗಿ ರೋಸ್ ನೀಡಿ ನಿಮ್ಮ ಪ್ರೀತಿಯನ್ನು ಹೇಳಿ.
ವಿಭಿನ್ನ ಬಣ್ಣಗಳು ವಿಭಿನ್ನ ಅರ್ಥ: ಕೆಂಪು ಪ್ರೀತಿಗೆ, ಹಳದಿ ಸ್ನೇಹಕ್ಕೆ, ಗುಲಾಬಿ ಮೆಚ್ಚುಗೆಗೆ ಮತ್ತು ಬಿಳಿ ಶಾಂತಿ ಅಥವಾ ಹೊಸ ಆರಂಭಕ್ಕೆ.
ಏನು ಮಾಡಬೇಕು: ಗುಲಾಬಿಯನ್ನು ನಿಮ್ಮವರಿಗೆ ಕೈಯಾರೆ ನೀಡಿ, ಕೆಲಸ ಅಥವಾ ಕಾಲೇಜಿನಲ್ಲಿ ಅವರಿಗೆ ಸರ್ಪ್ರೈಸ್ ನೀಡಿ, ಜೊತೆಗೆ ನಿಮ್ಮ ಪ್ರೀತಿಯನ್ನು ತಿಳಿಸುವ ಸಣ್ಣ ನೋಟ್ ಇರಲಿ
ಉಡುಗೊರೆ: ಫ್ರೆಶ್ ಹೂವುಗಳು, ಸಣ್ಣ ಪುಷ್ಪಗುಚ್ಛ, ಅಥವಾ ಬಾಳಿಕೆ ಬರುವ ಯಾವುದನ್ನಾದರೂ ಡ್ರೈ ಗುಲಾಬಿ ಬುಕ್‌ಮಾರ್ಕ್.