Bhagyalakshmi: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಆದಿಗೆ ತನ್ನ ಪ್ರೀತಿಯನ್ನು ಹೇಳಲು ತಡ ಮಾಡಿದ ಕಾರಣ ಇದೀಗ, ಭಾಗ್ಯಳನ್ನು ಬಿಟ್ಟು, ವಿಮಾನ ಹತ್ತಿ, ವಿದೇಶಕ್ಕೆ ಹೊರಟೇ ಬಿಟ್ಟ ಆದಿ. ಆದರೆ ವೀಕ್ಷಕರು ಹೇಳ್ತಿದ್ದಾರೆ, ಇದು ಮಿಲನ ಸಿನಿಮಾದ ಕಥೆಯನ್ನು ನೆನಪಿಸುತ್ತಿದೆಯಂತೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆದಿ ತನ್ನ ಪ್ರೀತಿಯನ್ನು ಭಾಗ್ಯಳಿಗೆ ತಿಳಿಸಿದ್ದರೂ, ಆತನನ್ನು ಆ ದೃಷ್ಟಿಯಲ್ಲಿ ನೋಡಲು ಇಷ್ಟಪಡದ ಭಾಗ್ಯ ಆತನ ಪ್ರೀತಿಯನ್ನು ದೂರ ತಳ್ಳಿದ್ದಳು. ಆದರೆ ಕೊನೆಗೂ ಭಾಗ್ಯಳಿಗೆ ತನ್ನಲ್ಲಿರುವ ಪ್ರೀತಿ ಅರ್ಥವಾಗಿದೆ. ಆದರೆ ಅದನ್ನು ಹೇಳಲು ಅಲ್ಲಿ ಆದಿಯೇ ಇಲ್ಲ.

ತನ್ನ ಪ್ರೀತಿಯನ್ನು ಆದಿಗೆ ಹೇಳಿಕೊಳ್ಳಬೇಕು, ಆದಿ ದೇಶದಲ್ಲಿ ಉಳಿಯುವಂತೆ ಮಾಡಬೇಕು ಎಂದು ಓಡೋಡಿ ಬಂದ ಭಾಗ್ಯಳಿಗೆ ಕಾದಿದ್ದು ನಿರಾಸೆ, ಭಾಗ್ಯನ ಬಿಟ್ಟು ಹೊರಟೇ ಹೋದ್ನಾ ಆದಿ. ವಿಮಾನ ಹತ್ತಿ ವಿದೇಶಕ್ಕೆ ತೆರಳಿದ್ದಾನೆ ಆದಿ. ಹಾಗಿದ್ರೆ ಮುಂದೆ ಭಾಗ್ಯ ಜೀವನ ಏನಾಗುತ್ತೆ?

ಆದಿ ಎಲ್ಲೂ ಹೋಗಿರಲ್ಲ, ವಿಮಾನ ಹೋದರೂ , ಆದಿ ಅಲ್ಲೇ ಸೈಡಲ್ಲಿ ಇರ್ತಾರೆ, ಮತ್ತೆ ಬಂದೇ ಬರ್ತಾರೆ.

ಇದು ಮಿಲನ ಸಿನಿಮಾದ ದೃಶ್ಯವನ್ನು ನೆನಪಿಸುತ್ತದೆ. ಆದಿ ಹೋಗಲ್ಲ.

ಆದಿ ಹೋಗಬೇಕು ಅಂದ್ರು, ಹೋಗೋದಕ್ಕೆ ನೀವು ಬಿಡಬೇಕು ಅಲ್ವಾ? ಅಂತಿದ್ದಾರೆ ವೀಕ್ಷಕರು.

ಮಿಲನಾ ಚಿತ್ರದಲ್ಲಿ ಅಂಜಲಿಯನ್ನು ಹುಡುಕಿ ಎರ್ ಪೋರ್ಟ್ ಗೆ ಬರುವ ಆಕಾಶ್, ಆಕೆ ವಿದೇಶಕ್ಕೆ ಹಾರಿ ಆಗಿದೆ ಎಂದು ಚಿಂತೆ ಮಾಡುತ್ತಾ ಕೂರುತ್ತಾನೆ. ಆದರೆ ಅಂಜಲಿ ಹೋಗಿರೋದಿಲ್ಲ. ಅದೇ ರೀತಿ ಇಲ್ಲೂ ಸಹ ಆದಿ ಮತ್ತೆ ಬಂದೇ ಬರುತ್ತಾನೆ ಎನ್ನುತ್ತಿದ್ದಾರೆ ಜನ.

ಇನ್ನೊಂದೆಡೆ ತಾಂಡವ್ ಎದುರು ಶ್ರೇಷ್ಠಾಳ ನಿಜ ಬಣ್ಣ ಬಯಲಾಗಿದೆ. ಆಕೆಗೆ ತನ್ನ ಮಕ್ಕಳ ಮೇಲೆ ಯಾವುದೇ ರೀತಿಯ ಪ್ರೀತಿ ಇಲ್ಲ ಎನ್ನುವ ಅರಿವು ಕೂಡ ಆಗಿದೆ. ಹಾಗಾಗಿ, ಶ್ರೇಷ್ಠಾಳನ್ನು ಬಿಟ್ಟು, ಮತ್ತೆ ಭಾಗ್ಯ ಬಳಿ ಬಂದು ಕ್ಷಮೆ ಕೇಳುತ್ತಿದ್ದಾರೆ ತಾಂಡವ್.

ಇದೀಗ ವೀಕ್ಷಕರಲ್ಲಿ ಪ್ರಶ್ನೆ ಮೂಡಿದ್ದು, ಭಾಗ್ಯ ತಾಂಡವ್ ಮತ್ತು ಆದಿ ಇಬ್ಬರ ಪ್ರೀತಿಯಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ. ತನ್ನ ತಪ್ಪಿನ ಅರಿವಾಗಿ ಮತ್ತೆ ಬಂದ ತಾಂಡವ್ ನನ್ನು ಮತ್ತೆ ಒಪ್ಪಿಕೊಳ್ಳುತ್ತಾಳೋ ಅಥವಾ ತನ್ನ ಪ್ರೀತಿಗಾಗಿ ಹಾತೊರೆಯುತ್ತಿರುವ ಆದಿಯನ್ನು ಒಪ್ಪುತ್ತಾಳೋ ಕಾದು ನೋಡಬೇಕು.

Source link
Bhagyalakshmi: ಭಾಗ್ಯನ ಬಿಟ್ಟು ಹೊರಟೇ ಹೋದ್ನಾ ಆದಿ?… ಖಂಡಿತಾ ಇಲ್ಲ, ‘ಮಿಲನ’ ಮೂವಿ ಗ್ಯಾರಂಟಿ ಎಂದ ವೀಕ್ಷಕರು