
ಚಿರಂಜೀವಿ ಸ್ಟಾರ್ ಸ್ಟೇಟಸ್ ಬಂದ ಮೇಲೂ ಪ್ರಯೋಗಗಳನ್ನು ಮಾಡುತ್ತಲೇ ಇದ್ದರು. ಲೆಜೆಂಡರಿ ನಿರ್ದೇಶಕ ಜಂಧ್ಯಾಲ ಅವರ ನಿರ್ದೇಶನದಲ್ಲಿ ‘ಚಂಟಬ್ಬಾಯಿ’ ಚಿತ್ರ ಮೂಡಿಬಂದಿದೆ. ಈ ಚಿತ್ರದಲ್ಲಿ ಚಿರು ಅವರ ಕಾಮಿಡಿ ಟೈಮಿಂಗ್ ಹಿಂದೆಂದೂ ನೋಡಿರದ ಮಟ್ಟದಲ್ಲಿತ್ತು. ಈ ಪೀಳಿಗೆಯ ಹೀರೋಗಳಿಗೆ ಚಂಟಬ್ಬಾಯಿ ಸಿನಿಮಾ ಆಲ್ ಟೈಮ್ ಫೇವರಿಟ್ ಲಿಸ್ಟ್‌ನಲ್ಲಿದೆ. ಸಿನಿಮಾದುದ್ದಕ್ಕೂ ನಗಿಸುತ್ತಲೇ ಸಾಗುವ ಚಿರಂಜೀವಿ, ಕೊನೆಯಲ್ಲಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಾರೆ.
ಚಿರಂಜೀವಿ ತಮ್ಮ ಸ್ಟಾರ್ ಸ್ಟೇಟಸ್ ಬದಿಗಿಟ್ಟು ಮಾಡಿದ ಸಿನಿಮಾಗಳಲ್ಲಿ ‘ಸ್ವಯಂ ಕೃಷಿ’ ಕೂಡ ಒಂದು. ಕಲಾತಪಸ್ವಿ ಕೆ. ವಿಶ್ವನಾಥ್ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಮತ್ತು ವಿಜಯಶಾಂತಿ ಜೋಡಿಯಾಗಿ ನಟಿಸಿದ್ದಾರೆ.