Headlines

ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?

ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?


ಬೆಂಗಳೂರು, ಫೆಬ್ರುವರಿ 5: ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ ತಯಾರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ (AMCA ಯೋಜನೆ) ರೇಸ್ನಿಂದ ಎಚ್ಎಎಲ್ ಹೊರಬಿದ್ದಿದೆ. ಟಾಟಾ ಗ್ರೂಪ್, ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಗುಂಪುಗಳು (ಕನ್ಸೋರ್ಟಿಯಂ) ಈಗ ಈ ರೇಸ್‌ನಲ್ಲಿ ಉಳಿದಿವೆ. ಮುಂದಿನ ದಿನಗಳಲ್ಲಿ ಒಂದು ಸಂಸ್ಥೆಗೆ ಎಂಸಿಎ ರೂಪಿಸುವ ಮಹತ್ವದ ಪ್ರಾಜೆಕ್ಟ್ ಸಿಗಲಿದೆ. ಬಿಐಎಂಎಲ್, ಬಿಐಎಲ್, ಡಾಟಾ ಪ್ಯಾಟರ್ನ್ಸ್ ಇತ್ಯಾದಿ ಕಂಪನಿಗಳು ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಕನ್ಸಾರ್ಟಿಯಂಗಳಲ್ಲಿ ಇವೆ.

ಎಂಸಿಎ ಪ್ರಾಜೆಕ್ಟ್‌ಗೆ ಆಯ್ಕೆಯಾದ ಸಂಸ್ಥೆಯು ಪ್ರೋಟೊಟೈಪ್‌ಗಳನ್ನು ನಿರ್ಮಿಸಲಾಯಿತು. ಈ ಪ್ರೋಟೋಟೈಪ್ ನಿರ್ಮಾಣ ಯೋಜನೆಯು 16,000 ಕೋಟಿ ರೂ ಆಗಿರುತ್ತದೆ. ಇವುಗಳ ಪ್ರಯೋಗಗಳು ಯಶಸ್ವಿಯಾದ ಬಳಿಕ ಫೈಟರ್ ಜೆಟ್‌ಗಳ ಉತ್ಪಾದನೆಯು ಪ್ರಾರಂಭವಾಗಿದೆ. ಇದಕ್ಕೆ ಸುಮಾರು 10 ವರ್ಷಗಳಾಗುವ ನಿರೀಕ್ಷೆ ಇದೆ. ಪ್ರೋಟೋಟೈಪ್ನ ಮೊದಲ ವಿಮಾನ 2028 ಅಥವಾ 2029 ರಲ್ಲಿ ನಡೆಯಬಹುದು. ಇದಕ್ಕೆ ಹಸಿರು ನಿಶಾನೆ ಸಿಕ್ಕರೆ ಜೆಟ್‌ಗಳ ಪ್ರೊಡಕ್ಷನ್ 2035 ರಲ್ಲಿ ಪ್ರಾರಂಭವಾಗಬಹುದು.

ಸದ್ಯ ಎಂಸಿಎ ಪ್ರಾಜೆಕ್ಟ್ ರೇಸ್‌ನಲ್ಲಿ ಕಣಕ್ಕಿಳಿದಿರುವೆಲ್ಲಾ ಖಾಸಗಿ ಸಂಸ್ಥೆಗಳೇ ವಿಶೇಷ. ಭಾರತೀಯ ವಾಯುಪಡೆಗೆ ನೂರಕ್ಕೂ ಅಧಿಕ ಫೈಟರ್‌ಗಳ ಅಗತ್ಯವಿದೆ. ಹೀಗಾಗಿ, ಈ ಎಂಸಿ ಪ್ರಾಜೆಕ್ಟ್‌ನ ಮೌಲ್ಯ ಹಲವು ಲಕ್ಷ ಕೋಟಿ ರೂ.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ಎಚ್ಎಎಲ್ ಈ ರೇಸ್ನಿಂದ ಹೊರಬಿದ್ದಿದ್ದು ಯಾಕೆ?

ಫೈಟರ್ ಜೆಟ್ ತಯಾರಿಕೆ ಎಂದರೆ ಡೀಫಾಲ್ಟ್ ಆಗಿ ಎಲ್ಲರ ಕಣ್ಣು ಎಚ್‌ಎಎಲ್‌ನತ್ತಲೇ ನೆಟ್ಟಿರುತ್ತದೆ. ಆದರೆ, ಎಂಸಿಎ ಕಾರ್ಯಕ್ರಮಕ್ಕೆ ಸರ್ಕಾರ ಖಾಸಗಿಯವರಿಗೂ ಅವಕಾಶ ಕೊಡಲು ನಿರ್ಧರಿಸಿತು. ಪ್ರಾಜೆಕ್ಟ್‌ಗೆ ಐಒಐ ಸಲ್ಲಿಸಲು ಕೆಲ ಸ್ಥಳಗಳನ್ನು ಸರ್ಕಾರ ನಿಗದಿಪಡಿಸಿತು. ಅಂಥ ಒಂದು ಸ್ಥಳದಲ್ಲಿ ಎಚ್‌ಎಎಲ್ ವಿಫಲವಾಗಿದೆ.

ಎಚ್ಎಎಲ್ಗೆ ಮುಳುವಾದ ಆ ಸ್ಥಳದಲ್ಲಿ ಯಾವುದು?

ಒಂದು ಕಂಪನಿಯ ಟರ್ನೋವರ್‌ಗಿಂತ ಅದರ ಆರ್ಡರ್ ಬುಕ್ ಮೂರು ಪಟ್ಟು ಹೆಚ್ಚಾಗಿದ್ದರೆ ಪ್ರಾಜೆಕ್ಟ್ ಪರಿಗಣನೆಗೆ ಆದ್ಯತೆ ಕೊಡಲಾಗುವುದಿಲ್ಲ. ಈ ವಿಚಾರವು ಎಚ್ಎಎಲ್ಗೆ ಮುಳುವಾಯಿತು. ಎಚ್ಎಎಲ್ನ ಟರ್ವೋವರ್ಗಿಂತ ಅದರ ಆರ್ಡರ್ ಬುಕ್ ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತ ದೊಡ್ಡದು: ಅರವಿಂದ್ ಪಣಗರಿಯಾ

ಎಂಸಿಎ ಪ್ರಾಜೆಕ್ಟ್ ಯಾಕೆ ಮುಖ್ಯ?

ಎಂಸಿಎ ಪ್ರಾಜೆಕ್ಟ್ ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ದೇಶೀಯವಾಗಿ ಐದನೇ ತಲೆಮಾರಿನ ಸ್ಟೀಲ್ಟ್ ಜೆಟ್ ತಯಾರಿಸುವ ಯೋಜನೆ ಇದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ಐದನೇ ತಲೆಮಾರಿನ ಜೆಟ್ ತಯಾರಿಸಿವೆ. ಫ್ರಾನ್ಸ್ನ ರಫೇಲ್ ಜೆಟ್ 4.5 ತಲೆಮಾರಿನ ಜೆಟ್ ಎನಿಸಿದೆ. ಸ್ವಂತವಾಗಿ ಐದನೇ ತಲೆಮಾರಿನ ಜೆಟ್ ತಯಾರಿಕೆ ಎಂದರೆ ಅದರ ಎಂಜಿನ್ ಸೇರಿದಂತೆ ಪ್ರತಿಯೊಂದನ್ನೂ ದೇಶೀಯವಾಗಿ ಅಳವಡಿಸಿ ತಯಾರಿಸಬೇಕು. ಸ್ವಾವಲಂಬಿ ಭಾರತಕ್ಕೆ ಇದು ತಾಜಾ ನಿದರ್ಶನವಾಗುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *