ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ (ರಜತ್ ಕಿಶನ್) ಅವರು ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಅವರು ಪಾರಂಪರಿಕ ಕಟ್ಟಡದ ಎದುರು ಸೇದಿದ್ದಕ್ಕೆ ದೂರು ದಾಖಲಾಗಿದೆ. ‘ಕರ್ನಾಟಕ ಸೇನಾ ಪಡೆ’ (ಕರ್ನಾಟಕ ಸೇನಾ ಪಡೆ) ಕಾರ್ಯಕರ್ತರು ದೂರು ನೀಡಿದರು. ಈ ಬಗ್ಗೆ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಪಾರಂಪರಿಕ ಕಟ್ಟಡ ಆಗಿರುವ ನಮ್ಮ ಡಿಸಿ ಕಚೇರಿ ಎದುರು ರಜತ್ ಸಿಗರೇಟ್ ಸೇದಿ, ರೀಲ್ಸ್ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಸಿಗರೇಟ್ ಸೇದುವುದು ಅಪರಾಧ. ಅಂಥದ್ದರಲ್ಲಿ ಸೆಲೆಬ್ರಿಟಿ ಆದ ಈ ರೀತಿ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಈ ಯುವ ಜನತೆಗೆ ಏನು ಸಂದೇಶ ಇದೆ? ಸಿಗರೇಟ್ ಸೇದಿದರೆ ಇವರೇನೂ ದೊಡ್ಡ ಹೀರೋ ಅಂದುಕೊಂಡಿದ್ದಾರಾ? ರಜತ್ (ರಜತ್)ಅವರಿಗೆ ಈ ರೀತಿ ಫೋಟೋಶೂಟ್ ಮಾಡಲು ಅನುಮತಿ ಕೊಟ್ಟವರು ಯಾರು? ರಜತ್ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.