ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ‘ಧುರಂಧರ್’: ‘ಅನಿಮಲ್’, ‘ಪುಷ್ಪ 2’ ರೆಕಾರ್ಡ್ ಧೂಳೀಪಟ

ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ‘ಧುರಂಧರ್’: ‘ಅನಿಮಲ್’, ‘ಪುಷ್ಪ 2’ ರೆಕಾರ್ಡ್ ಧೂಳೀಪಟ


ಕಳೆದ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ’ ಈಗ ಒಟಿಟಿ (OTT) ಲೋಕದಲ್ಲೂ ಅಧಿಪತ್ಯ ಸಾಧಿಸಿದೆ. ಜನವರಿ 30 ರಂದು ನೆಟ್‌ಫ್ಲಿಕ್ಸ್‌ನಲ್ಲಿ (ನೆಟ್‌ಫ್ಲಿಕ್ಸ್) ಬಿಡುಗಡೆಯಾದ ಈ ಸಿನಿಮಾ, ಕೇವಲ ಒಂದೇ ವಾರದಲ್ಲಿ ಭಾರತದ ಅತಿದೊಡ್ಡ ಹಿಟ್ ಚಿತ್ರಗಳಾದ ‘ಅನಿಮಲ್’, ‘ಫೈಟರ್’ ಮತ್ತು ‘ಪುಷ್ಪ 2: ದಿ ರೂಲ್’ ಸಿನಿಮಾಗಳ ದಾಖಲೆ ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದೆ. ಆ ಮೂಲಕ, ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಚಿತ್ರಮಂದಿರದಲ್ಲಿ ಒಟಿಟಿಯಲ್ಲೂ ಸೂಪರ್ ಹಿಟ್ ಆಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ‘ಧುರಂಧರ’ ಬರೋಬ್ಬರಿ 7.6 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಪೋಸ್ಟ್-ಥಿಯೇಟ್ರಿಕಲ್ ಡಿಜಿಟಲ್ ಬಿಡುಗಡೆಯ ಇತಿಹಾಸದಲ್ಲೇ ಮೊದಲ ವಾರಾಂತ್ಯದಲ್ಲಿ 7 ಮಿಲಿಯನ್ ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಿಂದೆ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ 6.2 ಮಿಲಿಯನ್ ವೀಕ್ಷಣೆಯೊಂದಿಗೆ ಅಗ್ರಸ್ಥಾನದಲ್ಲಿತ್ತು. ಹೃತಿಕ್ ರೋಷನ್ ಅವರ ‘ಫೈಟರ್’ (5.9 ಮಿಲಿಯನ್) ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (5 ಮಿಲಿಯನ್) ನಂತರದ ಸ್ಥಾನಗಳಲ್ಲಿದ್ದವು. ಇದೀಗ ‘ಧುರಂಧರ’ ಈ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.

ಅಂಕಿಅಂಶಗಳ ಪ್ರಕಾರ, ಏಳು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನ ‘ಟಾಪ್ 10’ ಇಂಗ್ಲಿಷ್‌ೇತರ ಸಿನಿಮಾಗಳಲ್ಲಿ ‘ಧುರಂಧರ’ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿಷೇಧ ಹೇರಲಾಗಿದ್ದರೂ, ಅಲ್ಲಿ ಒಟಿಟಿ ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈವರೆಗೆ ಜಾಗತಿಕವಾಗಿ ಈ ಚಿತ್ರವು 26.1 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಕಂಡಿದೆ.

ಇದನ್ನೂ ಓದಿ: ‘ಧುರಂಧರ’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಅಮೀರ್ ದಾಖಲೆ ಉಡೀಸ್

‘ಧುರಂಧರ’ ಚಿತ್ರದ ಯಶಸ್ಸಿನ ನಂತರದ ಅಭಿಮಾನಿಗಳು ಇದರ ಎರಡನೇ ಭಾಗ ‘ಧುರಂಧರ: ದಿ ರಿವೇಂಜ್’ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಕ್ವೆಲ್ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೆರಿಟೇಲ್ ಫಾರ್ ಗ್ರೋನ್-ಅಪ್ಸ್’ ಕೂಡ ಬಿಡುಗಡೆಯಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ನಡೆಯುವ ಸಾಧ್ಯತೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *