Headlines

ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ

ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ


ಬೆಂಗಳೂರು, ಫೆಬ್ರವರಿ 05: ಪ್ರಯಾಣಿಕರ ವಿರೋಧದ ನಡುವೆಯೂ ನಮ್ಮ ಮೆಟ್ರೋ ಟಿಕೆಟ್ ದರಕ್ಕೆ ಬಿಎಂಆರ್‌ಸಿಎಲ್ ಅಸ್ತು ಎಂದಿದೆ. ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಸದ್ಯ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸರ್ಕಾರಿ ಬಸ್ಸುಗಳ ಟಿಕೆಟ್ ದರ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಸದ್ಯ ಈ ವಿಚಾರದಲ್ಲಿ ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಕೆಎಸ್ಆರ್ ಟಿಸಿ ನಿಗಮ (KSRTC) ಸ್ಪಷ್ಟನೆ ನೀಡಿದೆ.

ಪ್ರಕಟಣೆಯಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣ ವ್ಯತ್ಯಾಸದ ಬಗ್ಗೆ ವರದಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಸ್ಆರ್ ಟಿಸಿ ನಿಗಮ, ಮೈಸೂರು ಮತ್ತು ಬೆಂಗಳೂರು ನಡುವಿನ ಐರಾವತ ಕ್ಲಬ್ ಕ್ಲಾಸ್ ದರ 430 ರೂ. ಆಗಿರುತ್ತದೆ ಎಂದು.

ಇದನ್ನೂ ಓದಿ: ಭಾರೀ ವಿರೋಧ ಬೆನ್ನಲ್ಲೇ ಎಚ್ಚೆತ್ತ ಸಚಿವರು: ಸರ್ಕಾರಿ ಬಸ್‌ಗಳಲ್ಲಿ ತುಂಬು ಉತ್ಪನ್ನಗಳ ಜಾಹೀರಾತು ತೆರವಿಗೆ ಸೂಚನೆ

ಪ್ರಯಾಣದ ಸಮಯದಲ್ಲಿ ವಿತರಣೆಯಾಗಿರುವ 431 ರೂ. ಮೌಲ್ಯದ ಟಿಕೆಟ್ ನಿರ್ವಾಹಕರು ಮಾರ್ಗಕ್ಕೆ ತೆರಳಿ ಕಾರ್ಯಾಚರಣೆ ಮಾಡುವಾಗ ಸದರಿ ಮಾರ್ಗಕ್ಕೆ ಐಟಿಎಂ ಯಂತ್ರದಲ್ಲಿ ಆಯ್ಕೆ ಮಾಡಬೇಕಾದ ರೂಟ್ ನಂಬರ್ 94 ರ ಬದಲಿಗೆ ಐಟಿಎಂ ಯಂತ್ರದ ರೂಟ್ ನಂಬರ್ 908 ಅನ್ನು ತಪ್ಪಾಗಿ ಆಯ್ಕೆ ಮಾಡಿಕೊಳ್ಳುವ ಕಾರ್ಯಾಚರಣೆಯನ್ನು ಮಾಡಲು ಈ ರೀತಿ ಆಗಿದ್ದು, ಇದನ್ನು ಸರಿಪಡಿಸಲಾಗಿದೆ. ಯಾವುದೇ ದರ ಏರಿಕೆ ಆಗಿಲ್ಲ ಎಂದು ಕೆಎಸ್ಆರ್ ಟಿಸಿ ನಿಗಮ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆಯಿಲ್ಲದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್!

ವಿವಿಧ ಬೇಡಿಕೆಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಇತ್ತೀಚೆಗೆ ಸಿಡಿದೆದ್ದಿದ್ದರು. ಆ ಮೂಲಕ ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದರು. ಕರ್ನಾಟಕ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕೂ ನಿಗಮಗಳಿಂದ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಅನಂತ್ ಸುಬ್ಬರಾವ್ ಅವರ ನಿಧನ ಹಿನ್ನೆಲೆ ಬೆಂಗಳೂರು ಚಲೋ ಅನ್ನು ಮುಂದೂಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *