ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್

ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್


ಇದು ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ. ಇತಿಹಾಸದ ಸ್ಮಾರಕ, ಸರ್ಕಾರಿ ಆಸ್ತಿ, ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡ. ಇದೇ ಕಟ್ಟಡದ ಮುಂದೆ ಬಿಗ್‌ಬಾಸ್ ಖ್ಯಾತಿಯ ರಜತ್ (ರಜತ್ ಕಿಶನ್) ಸಿಗರೇಟ್ ಸೇದುತ್ತಾ, ಕಾರಿನಿಂದ ಇಳಿಯುತ್ತಾ ವಿಲನ್ ಲುಕ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಕಪ್ಪು ಉಡುಪು, ಬಿಂದಾಸ್ ಸ್ಟೈಲ್, ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ರೀಲ್ಸ್ ಮತ್ತು ವಿಡಿಯೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಲಾಗಿದೆ. ದೂರು ಸ್ವೀಕರಿಸಿರುವ ಲಕ್ಷ್ಮಿಪುರಂ ಪೊಲೀಸರು ಪ್ರಾಥಮಿಕವಾಗಿ ಎನ್‌ಸಿಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಶೂಟಿಂಗ್ ನಡೆದಿದೆಯೇ? ಸಾರ್ವಜನಿಕ ಆಸ್ತಿಗೆ ಧಕ್ಕೆ ಆಗಿದೆಯೇ? ಕಾನೂನು ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *