‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್

‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್


ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟಿಸಿದ ‘ಧುರಂಧರ’ ಜನವರಿ 30, 2026 ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಬಿಡುಗಡೆಯಾದ ತಕ್ಷಣ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೆಲ್ಲದರ ನಡುವೆ, ‘ಧುರಂಧರ್ 2: ದಿ ರಿವೆಂಜ್’ನ ಮೊದಲ ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ‘ಧುರಂಧರ’ ಚಿತ್ರದ ಎರಡೂ ಭಾಗಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್ ಫ್ಲಿಕ್ಸ್ ಖರೀದಿ ಮಾಡಿತ್ತು. ನೆಟ್‌ಫ್ಲಿಕ್ಸ್ ಎರಡೂ ಭಾಗಗಳನ್ನು ಒಟ್ಟಿಗೆ ಪಡೆಯಲು 170 ಕೋಟಿ ನೀಡಲು ರೆಡಿ ಇತ್ತು. ಆದರೆ, ನಂತರ ಡೀಲ್ ಕ್ಯಾನ್ಸಲ್ ಮಾಡಿ ಹಾಟ್‌ಸ್ಟಾರ್ ಇದರ ಹಕ್ಕನ್ನು ಹೊಂದಿದೆ.

ವರದಿಯ ಪ್ರಕಾರ, ಮೊದಲ ಭಾಗಕ್ಕಾಗಿ ನೆಟ್ ಫ್ಲಿಕ್ಸ್ 85 ಕೋಟಿ ರೂ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಖರೀದಿಗೆ ಇತ್ತೀಚೆಗೆ ಕಡಿಮೆ ಆಸಕ್ತಿ ತೋರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸು ಮತ್ತು ಪ್ರದರ್ಶನದಿಂದ ಬಂದ ಕಾರಣ ಅವರು ಇಷ್ಟು ದೊಡ್ಡ ಮೊತ್ತವನ್ನು ಬೇಡಿಕೆಯಿಟ್ಟರು. ಈಗ ಜಿಯೋ ಹಾಟ್‌ಸ್ಟಾರ್ 170 ಕೋಟಿ ರೂಪಾಯಿ ಕೊಟ್ಟು ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿನ ಭಾಗದಲ್ಲಿ ರೆಹಮಾನ್ ಡಕಾಯಿತ್ (ಅಕ್ಷಯ್ ಖನ್ನಾ) ಅವರ ಮರಣದ ನಂತರ, ಎರಡನೇ ಭಾಗವು ಹಮ್ಜಾ ಅಲಿ (ರಣವೀರ್ ಸಿಂಗ್) ಅವರ ಪಾತ್ರ ಹೈಲೈಟ್ ಆಗುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಕೂಡ ನಟಿಸಿದ್ದಾರೆ. ಈ ಚಿತ್ರವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *