26ರ ಹರೆಯಕ್ಕೆ CEO ಆದ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಯುವತಿ ವಿರುದ್ಧ ಭಾರಿ ವಂಚನೆ ಆರೋಪ | Calder Fintech Startup Ceo Who Listed In Forbes Charged With Fraud

26ರ ಹರೆಯಕ್ಕೆ CEO ಆದ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಯುವತಿ ವಿರುದ್ಧ ಭಾರಿ ವಂಚನೆ ಆರೋಪ | Calder Fintech Startup Ceo Who Listed In Forbes Charged With Fraud



26ರ ಹರೆಯಕ್ಕೆ CEO ಆದ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಯುವತಿ ವಿರುದ್ಧ ಭಾರಿ ವಂಚನೆ ಆರೋಪ | Calder Fintech Startup Ceo Who Listed In Forbes Charged With Fraud

ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿದ್ದ, ಕಾಲ್ಡರ್ ಫಿನ್‌ಟೆಕ್ ಸ್ಟಾರ್ಟ್ಅಪ್ ಸಂಸ್ಥಾಪಕಿ ಗೋಕ್ಸೆ ಗುವೆನ್ ವಿರುದ್ಧ ಅಮೆರಿಕದಲ್ಲಿ ಭಾರಿ ವಂಚನೆ ಆರೋಪ ಕೇಳಿಬಂದಿದೆ. ಹೂಡಿಕೆದಾರರಿಗೆ ಸುಳ್ಳು ಮಾಹಿತಿ ನೀಡಿ ಸುಮಾರು $7 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

26ರ ಹರೆಯಕ್ಕೆ ಸಿಇಒ ಆದ ಯುವತಿ ವಿರುದ್ಧ ಭಾರಿ ವಂಚನೆ ಆರೋಪ

ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ, ಸ್ಯಾಮ್ ಬ್ಯಾಂಕ್‌ಮನ್ ಫ್ರೈಡ್, ಚಾರ್ಲಿ ಜೇವಿಸ್ ಮತ್ತು ಮಾರ್ಟಿನ್ ಶ್ಕ್ರೆಲಿ ಸೇರಿದಂತೆ ಹಲವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಅಮೆರಿಕಾದ ಫೆಡರಲ್ ನ್ಯಾಯಾಲಯವೂ ಇವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ವಂಚನೆ ಪ್ರಕರಣಕ್ಕೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಟೆಕ್‌ಕ್ರಂಚ್‌( TechCrunch) ವರದಿಯ ಪ್ರಕಾರ , 26 ವರ್ಷದ ಟರ್ಕಿಶ್ ಪ್ರಜೆ ಮತ್ತು ನ್ಯೂಯಾರ್ಕ್ ಮೂಲದ ಫಿನ್‌ಟೆಕ್ ಸ್ಟಾರ್ಟ್ಅಪ್ ಕಾಲ್ಡರ್‌ನ ಸಂಸ್ಥಾಪಕಿಯೂ ಆಗಿರುವ ಗೋಕ್ಸೆ ಗುವೆನ್ ಎಂಬಾಕೆಯ ವಿರುದ್ಧ ಅಮೆರಿಕದಲ್ಲಿ ಹಲವಾರು ವಂಚನೆ ಆರೋಪ ಕೇಳಿ ಬಂದಿದೆ.

ಹಲವು ವಂಚನೆಗಳಲ್ಲಿ ಭಾಗಿಯಾದ ಅರೋಪ

ಗೋಕ್ಸೆ ಗುವೆನ್ ವಿರುದ್ಧ ಕಳೆದ ವಾರ ಸೆಕ್ಯುರಿಟೀಸ್ ವಂಚನೆ, ವೈರ್ ವಂಚನೆ, ವೀಸಾ ವಂಚನೆ ಮತ್ತು ಗುರುತಿನ ಕಳ್ಳತನದ ಆರೋಪ ಹೊರಿಸಲಾಗಿದೆ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಆಕೆಯ ವಿರುದ್ಧದ ಆರೋಪಗಳನ್ನು ಅಮೆರಿಕದ ನ್ಯಾಯ ಇಲಾಖೆ ಘೋಷಿಸಿದೆ. ಈ ಆರೋಪಗಳು ಏಪ್ರಿಲ್ 2024 ರಲ್ಲಿ ಅವರ ಫಿನ್‌ಟೆಕ್ ಸ್ಟಾರ್ಟ್ಅಪ್ ಕಾಲ್ಡರ್‌ನ ಸೀಡ್ ಫಂಡಿಂಗ್ ರೌಂಡ್‌ಗೆ(seed funding round)ಸಂಬಂಧಿಸಿವೆ ಎಂದು ಅದು ಹೇಳಿದೆ. ಸೀಡ್ ಫಂಡಿಂಗ್ ರೌಂಡ್ ಎಂದರೇನು ಎಂದು ತಿಳಿಯದವರಿಗಾಗಿ, ಇದು ಒಂದು ನವೋದ್ಯಮಕ್ಕೆ ಮೊದಲ ಅಧಿಕೃತ ಇಕ್ವಿಟಿ ಆಧಾರಿತ ಹಣಕಾಸು ಹಂತವಾಗಿದ್ದು, ವ್ಯವಹಾರ ಕಲ್ಪನೆಯನ್ನು ಕ್ರಿಯಾತ್ಮಕ ಉತ್ಪನ್ನ ಅಥವಾ ಸೇವೆಯಾಗಿ ಪರಿವರ್ತಿಸಲು ಅಗತ್ಯವಾದ ಬಂಡವಾಳವನ್ನು ಒದಗಿಸುತ್ತದೆ.

ಇದನ್ನೂ ಓದಿ: ಈಗಾಗಲೇ ವಿವಾಹವಾಗಿರುವ ಮಹಿಳೆ, ತನಗೆ ಮದುವೆಯ ಭರವಸೆ ನೀಡಿ ಅತ್ಯಾಚಾರವೆಸಗಿದರು ಎಂದು ದೂರುವಂತಿಲ್ಲ: ಸುಪ್ರೀಂಕೋರ್ಟ್‌

2022 ರಲ್ಲಿ ಸ್ಥಾಪನೆಯಾದ ಕಾಲ್ಡರ್, ಅಂಗಸಂಸ್ಥೆ ಪಾಲುದಾರಿಕೆಗಳ ಮೂಲಕ ಕಂಪನಿಗಳಿಗೆ ಗ್ರಾಹಕ ಪ್ರತಿಫಲ ಕಾರ್ಯಕ್ರಮಗಳನ್ನು ರಚಿಸಲು ಮತ್ತು ಹಣಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿತ್ತು. ಈಗ ವಂಚನೆ ಆರೋಪಗಳಿಗೆ ಒಳಗಾಗಿರುವ ಗೋಕ್ಸೆ ಗುವೆನ್ ಅವರನ್ನು 2025 ರಲ್ಲಿ ಫೋರ್ಬ್ಸ್ 30 ವರ್ಷದೊಳಗಿನವರ ಪ್ರಭಾವಿಗಳ ಪಟ್ಟಿಗೆ ಸೇರಿಸಿತ್ತು. ಗೋಕ್ಸೆ ಗುವೆನ್ ಅವರ ಕ್ಲೈಂಟ್‌ಗಳಲ್ಲಿ ಚಾಕೊಲೇಟ್ ತಯಾರಕ ಗೋಡಿವಾ ಮತ್ತು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘವೂ ಸೇರಿದೆ ಎಂದು ಫೋರ್ಬ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: ಕೆಲಸ ಮಾಡಿಕೊಡದೇ ಲಂಚಕ್ಕಾಗಿ ಅಲೆಸುತ್ತಿರುವ ಅಧಿಕಾರಿಗಳಿಗೆ ತಾನು ಬೆಳೆದ ಮೂಲಂಗಿಯನ್ನೇ ತಂದ ಮಧುಗಿರಿ ರೈತ

ಗುವೆನ್ ಅವರು ಪಿಚ್ ಡೆಕ್‌ನಲ್ಲಿ ಸುಳ್ಳು ಮಾಹಿತಿಯನ್ನು ಪ್ರಸ್ತುತಪಡಿಸುವ ಮೂಲಕ ಒಂದು ಡಜನ್‌ಗಿಂತಲೂ ಹೆಚ್ಚು ಹೂಡಿಕೆದಾರರಿಂದ ಸುಮಾರು $7 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದಾರೆ ಎಂದು ತನಿಖಾ ತಂಡ ಹೇಳಿದೆ. 26 ಬ್ರ್ಯಾಂಡ್‌ಗಳು ಅವರ ಕಾಲ್ಡರ್ ಅನ್ನು ಬಳಸುತ್ತಿವೆ ಮತ್ತು ಇನ್ನೂ 53 ಬ್ರ್ಯಾಂಡ್‌ಗಳು ಲೈವ್ ಫ್ರೀಮಿಯಂ ನಲ್ಲಿವೆ, ಆದರೆ ಹಲವಾರು ಬ್ರಾಂಡ್‌ಗಳು ಕೇವಲ ಪೈಲಟ್ ಕಾರ್ಯಕ್ರಮಗಳನ್ನು ಹೊಂದಿದ್ದವು ಅಥವಾ ಯಾವುದೇ ಒಪ್ಪಂದಗಳನ್ನು ಹೊಂದಿರಲಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ,.

ಮಾರ್ಚ್ 2024 ರ ವೇಳೆಗೆ ಗುವೆನ್ ಅವರ ಕಾಲ್ಡರ್ ಸಂಸ್ಥೆಯ ಆದಾಯವು ಸ್ಥಿರವಾಗಿ ಬೆಳೆದು ವಾರ್ಷಿಕ ಪುನರಾವರ್ತಿತ ಆದಾಯದಲ್ಲಿ $1.2 ಮಿಲಿಯನ್ ತಲುಪಿದೆ ಎಂದು ಅವರ ಪಿಚ್ ಡೆಕ್ ತಪ್ಪಾಗಿ ಹೇಳಿದೆ ಎಂದು ಸರ್ಕಾರ ಹೇಳಿದೆ. ಪಿಚ್ ಡೆಕ್(pitch deck) ಎನ್ನುವುದು ಪವರ್ ಪಾಯಿಂಟ್‌ನಂತೆ ಸಂಕ್ಷಿಪ್ತವಾದ 10–20 ಸ್ಲೈಡ್‌ಗಳ ದೃಶ್ಯ ಪ್ರಸ್ತುತಿ, ಸಂಭಾವ್ಯ ಹೂಡಿಕೆದಾರರು, ಪಾಲುದಾರರು ಅಥವಾ ಗ್ರಾಹಕರಿಗೆ ವ್ಯಾಪಾರ ಯೋಜನೆ, ಉತ್ಪನ್ನ ಮತ್ತು ಕಾರ್ಯತಂತ್ರದ ಸ್ನ್ಯಾಪ್‌ಶಾಟ್ ಅನ್ನು ಒದಗಿಸು ವ್ಯವಸ್ಥೆಯಾಗಿದೆ.

ಕಂಪನಿಯ ನಿಜವಾದ ಹಣಕಾಸಿನ ಮಾಹಿತಿಯನ್ನು ಮರೆಮಾಚಲು ಗುವೆನ್ ಎರಡು ಹಣಕಾಸು ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಇದರಲ್ಲಿ ಒಂದು ಹೂಡಿಕೆದಾರರಿಗೆ ತೋರಿಸಲಾದ ಸುಳ್ಳು ಅಂಕಿ ಅಂಶ ಅಗಿತ್ತು, ಇದರ ಜೊತೆಗೆ ಅಸಾಧಾರಣ ತಾಕತ್ತು ಹೊಂದಿರುವ ವ್ಯಕ್ತಿಗಳಿಗೆ ಯುಎಸ್ ವೀಸಾ ಗಿಟ್ಟಿಸಲು ಗುವೆನ್ ಸುಳ್ಳು ಹಕ್ಕುಗಳನ್ನು ಮತ್ತು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರುವ ಒಂದು ತಮಾಷೆಯ ಮೀಮ್ಸ್‌ನ್ನು ಇಲ್ಲಿ ನಾವು ಸ್ಮರಿಸಬಹುದು, ಅಜ್ಜ ಮಾಡಿದ ಆಸ್ತಿ ಇದ್ದರೆ 23ಕ್ಕೆ ಮದುವೆ, ಅಪ್ಪ ಮಾಡಿದ ಆಸ್ತಿ ಇದ್ದರೆ 25ಕ್ಕೆ ಮದುವೆ, ನೀವೇ ಆಸ್ತಿ ಮಾಡಿ ಮದುವೆಯಾಗುವುದಾದರೆ 30ರ ಮೇಲೆ ಅಂತ. ಹಾಗೆಯೇ ಇಲ್ಲಿ 26ಕ್ಕೆಲ್ಲಾ ಏನೂ ಇಲ್ಲದೇ ಮಿಲಿಯನೇರ್ ಬಿಲಿಯನೇರ್ ಆಗ್ಬೇಕು ಅಂದ್ರೆ ಏನೋ ಗೋಲ್‌ಮಾಲ್ ಅಗ್ದೇ ಇರೋಕೆ ಸಾಧ್ಯನೇ ಇಲ್ಲ ಬಿಡಿ. ಇದರ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ..



Source link

Leave a Reply

Your email address will not be published. Required fields are marked *