Headlines

ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ

ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ


ನವದೆಹಲಿ, ಫೆಬ್ರುವರಿ 6: ಆರ್ಬಿಐನ ರಿಪೋ ದರದಲ್ಲಿ ಈ ಬಾರಿ ಬದಲಾವಣೆ ಮಾಡಲಾಗಲಿಲ್ಲ. ರಿಪೋ ದರವನ್ನು ಶೇ 5.25ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹಣಕಾಸು ನೀತಿ ಸಮಿತಿಯ ಎಲ್ಲಾ 6 ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಶುಕ್ರವಾರ ಪ್ರಕಟಿಸಿದ್ದಾರೆ.

ಆರ್ಬಿಐ ಪಾಲಿಸಿ ದರಗಳು

  • ರಿಪೋ ದರ: ಶೇ. 5.25
  • ರಿವರ್ಸ್ ರಿಪೋ ದರ: ಶೇ. 3.35
  • ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ದರ (ಎಸ್‌ಡಿಎಫ್): ಶೇ. 5
  • ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್): ಶೇ. 5.50
  • ಬ್ಯಾಂಕ್ ದರ: ಶೇ. 5.50
  • ಸಿಆರ್ ಆರ್: ಶೇ. 3
  • ಎಸ್ಎಲ್ಆರ್: ಶೇ. 18

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಜಿಡಿಪಿ ಶೇ. 7.4 ಬೆಳವಣಿಗೆಯ ಅಂದಾಜು

ಪ್ರಸಕ್ತ ಹಣಕಾಸು ವರ್ಷಕ್ಕೆ (2025-26) ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಎಂಪಿಸಿ ಸಭೆ ಪರಿಷ್ಕರಿಸಿದ್ದು, ಶೇ. 7.4ರಷ್ಟು ಜಿಡಿಪಿ ಹಿಗ್ಗಬಹುದು ಎಂದಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಜಿಡಿಪಿ ಶೇ. 7.3 ಹೆಚ್ಚು ಎಂದು ಅಭಿಪ್ರಾಯ ಪಟ್ಟಿತ್ತು.

ಹಣದುಬ್ಬರ ಶೇ. 2.1 ಇರಬಹುದು

ಪ್ರಸಕ್ತ ಹಣಕಾಸು ವರ್ಷಕ್ಕೆ ಹಣದುಬ್ಬರ ಶೇ. 2.1ರಷ್ಟು ಆಗಬಹುದು ಎಂದು ಆರ್ ಬಿಐನ ಎಂಪಿಸಿ ಸಭೆಯಲ್ಲಿ ವಿಮರ್ಶಿಸಲಾಗಿದೆ. ಈ ಹಿಂದಿನ ಸಭೆಯಲ್ಲಿ ಹಣದುಬ್ಬರ ಶೇ. 2ರಷ್ಟು ಇರಬಹುದು ಎಂದು ಅಂದಾಜಿಸಲಾಯಿತು. ಜನವರಿಯಿಂದ ಮಾರ್ಚ್ ಕ್ವಾರ್ಟರ್ ನಲ್ಲಿ ಹಣದುಬ್ಬರ ಶೇ. 3.2ಕ್ಕೆ ಏರಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *