Video: ಅಂತಿಮ ಕ್ಷಣದವರೆಗೂ ಗೆಲ್ಲುವುದಿಲ್ಲವೇನೋ ಎಂಬ ಆತಂಕವಿತ್ತು, ಕೊನೆಗೂ ಗೆದ್ರು ನಮ್ಮ ಹುಡುಗಿಯರು

Video: ಅಂತಿಮ ಕ್ಷಣದವರೆಗೂ ಗೆಲ್ಲುವುದಿಲ್ಲವೇನೋ ಎಂಬ ಆತಂಕವಿತ್ತು, ಕೊನೆಗೂ ಗೆದ್ರು ನಮ್ಮ ಹುಡುಗಿಯರು


ನೆನ್ನೆ ನಡೆದ (ಫೆ.5) ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಪಂದ್ಯಾವಳಿಯಲ್ಲಿ ಆರ್ಸಿಬಿ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಲಾಗಿದೆ. ಇದು ತಂಡದ ಎರಡನೇ WPL ಪ್ರಶಸ್ತಿಯಾಗಿದೆ. ಗುಜರಾತ್‌ನ ವಡೋದರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯ ಆರ್ಸಿಬಿ ಹುಡುಗಿಯರು ರೋಚಕ ವಿಜಯ ಸಾಧಿಸಿ ಕಪ್ ಎತ್ತಿ ಹಿಡಿದರು. ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಬಾರಿಗೆ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಪಂದ್ಯದ ಆರಂಭಿಕ ಹಂತದಲ್ಲಿ ಆರ್ಸಿಬಿ ತಂಡದ ಗೆಲುವಿನ ಬಗ್ಗೆ ಕೆಲವು ಅಭಿಮಾನಿಗಳಲ್ಲಿ ಸಂದೇಹಗಳಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಸ್ಕೋರ್ ಗಳಿಸಿದ ಚೇಸ್ ಮಾಡುವುದು ಸುಲಭವಲ್ಲ ಎಂದು ಅನೇಕರು ಭಾವಿಸಿದ್ದರು. ಆದರೆ, ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವಾಲ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವು ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಸ್ಮೃತಿ ಮಂದಾನ 87 ರನ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದ ಇನ್ನಿಂಗ್ಸ್ ಮತ್ತು ವಾಲ್ ಅವರ ಜೊತೆಯಾಟವು ಆರ್ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಭಿಮಾನಿಗಳು ಈ ಗೆಲುವಿನಿಂದ ಅತಿ ಹೆಚ್ಚು ಸಂತೋಷಗೊಂಡಿದ್ದಾರೆ. ಒಬ್ಬ ಅಭಿಮಾನಿಯಾದ ತೇಜಸ್ ಅವರ ಪ್ರಕಾರ, “ಇದು ನಮ್ಮ ಹುಡುಗರು ಗೆದ್ದಾಗ ಸಿಗುವ ಮಜಾವನ್ನೇ ನೀಡಿದ್ದಾರೆ. ಪಂದ್ಯದ ಪ್ರತಿಯೊಂದು ಕ್ರಿಯೆಯೂ ರೋಮಾಂಚನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿಯಾದ ಶ್ರುತಿ ಮಾತನಾಡಿ, “ಅಂತಿಮ ಕ್ಷಣದವರೆಗೂ ಗೆಲ್ಲುವುದಿಲ್ಲವೇನೋ ಎಂಬ ಆತಂಕ. ಆದರೆ ಕೊನೆಗೆ ಗೆಲುವು ಕಂಡಿದ್ದು ನಂಬಲಾಗದ ಸಂಗತಿಯಾಗಿದೆ” ಎಂದು ಹೇಳಿದ್ದಾರೆ. ಈ ವಿಜಯವು ಮಹಿಳಾ ಕ್ರಿಕೆಟ್‌ಗೆ ಒಂದು ದೊಡ್ಡ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ. ನಮ್ಮ ಹುಡುಗರು ಇಷ್ಟು ವರ್ಷ ಕಪ್ ಗೆದ್ದರೂ, ನಮ್ಮ ಹುಡುಗಿಯರು ಎರಡನೇ ಸಾರಿ ಪ್ರೂವ್ ಮಾಡಿದ್ದಾರೆ” ಎಂದು ಹೇಳುವ ಮೂಲಕ ಮಹಿಳಾ ತಂಡದ ಸಾಧನೆಯನ್ನು ಶ್ಲಾಘಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *