
ಕಿರೀಟಕ್ಕಾಗಿ ನಡೆಯುವ ಈ ಫೈನಲ್ ಪಂದ್ಯದಲ್ಲಿ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಈ ಟೂರ್ನಿಯಲ್ಲಿ ಈಗಾಗಲೇ ಮೂರು ಅರ್ಧಶತಕ ಗಳಿಸಿರುವ ವೈಭವ್, ಫೈನಲ್ನಲ್ಲೂ ಬ್ಯಾಟಿಂಗ್ ಸ್ಫೋಟ ನಡೆಸುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆ.
ನಾಯಕನ ಫಾರ್ಮ್ ವಾಪಸ್
ಸೆಮಿಫೈನಲ್ನಲ್ಲಿ ಭರ್ಜರಿ ಅರ್ಧಶತಕದೊಂದಿಗೆ ಫಾರ್ಮ್ ಕಂಡುಕೊಂಡ ನಾಯಕ ಆಯುಷ್ ಮಾತ್ರೆ ಮತ್ತು ಮಲಯಾಳಿ ಮೂಲದ ಓಪನರ್ ಆರನ್ ಜಾರ್ಜ್ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ವಿಹಾನ್ ಮಲ್ಹೋತ್ರಾ ಮತ್ತು ವಿಕೆಟ್ ಕೀಪರ್ ಅಭಿಜ್ಞಾನ್ ಕುಂದು ಮಧ್ಯಮ ಕ್ರಮಾಂಕವನ್ನು ನಿರ್ವಹಿಸಲಿದ್ದಾರೆ.