Headlines

‘ಆರ್​​ಆರ್​​ಆರ್’ ಸಿನಿಮಾ ರೀಮೇಕ್ ಆಗುತ್ತಿದೆ, ಆದರೆ ಬೇರೆ ರೂಪದಲ್ಲಿ

‘ಆರ್​​ಆರ್​​ಆರ್’ ಸಿನಿಮಾ ರೀಮೇಕ್ ಆಗುತ್ತಿದೆ, ಆದರೆ ಬೇರೆ ರೂಪದಲ್ಲಿ


ರಾಜಮೌಳಿ (ರಾಜಮೌಳಿ) ಈಗ ಗ್ಲೋಬಲ್ ಆಗಿದ್ದಾರೆ. ಅವರನ್ನು ಗ್ಲೋಬಲ್ ಆಗುವಂತೆ ಮಾಡಿದ್ದು ಅವರ ಈ ಹಿಂದಿನ ಸಿನಿಮಾ ‘ಆರ್ ಆರ್ ಆರ್’. ಈ ಸಿನಿಮಾ ಭಾರಿ ಯಶಸ್ಸು ಗಳಿಸುವ ಜೊತೆಗೆ ವಿದೇಶದ ಬಾಕ್ಸ್ ಆಫೀಸ್ ನಲ್ಲೂ ದೊಡ್ಡ ಯಶಸ್ಸು ಗಳಿಸಿತು. ಜೇಮ್ಸ್ ಕ್ಯಾಮೆರಾನ್, ಸ್ಟಿವನ್ ಸ್ಪೀಲ್ಬರ್ಗ್ ಇನ್ನೂ ಹಲವು ಖ್ಯಾತನಾಮ ನಿರ್ದೇಶಕರು ಸಿನಿಮಾ ನೋಡಿ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದರು. ಇದೀಗ ಈ ಸಿನಿಮಾವನ್ನು ಇನ್ನೊಂದು ರೂಪದಲ್ಲಿ ಹೊರ ತರಲು ರಾಜಮೌಳಿ ಸಜ್ಜಾಗಿದ್ದಾರೆ.

ರಾಜಮೌಳಿ ಅವರು ತಮ್ಮ ಬ್ಲಾಕ್‌ಬಸ್ಟರ್ ಸಿನಿಮಾ ‘RRR’ ಅನ್ನು ಅನಿಮೆ (Anime) ರೂಪದಲ್ಲಿ ತರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದು ಸಿನಿಮಾ ಪ್ರೇಮಿಗಳಲ್ಲಿ ಮತ್ತು ವಿಶೇಷವಾಗಿ ಅನಿಮೆ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಅನಿಮೆ ಭಾರಿ ಜನಪ್ರಿಯ ಆಗಿರುವ ಹಾಗೂ ಅತಿ ಹೆಚ್ಚು ಅನಿಮೆ ಸಿನಿಮಾಗಳು ರೂಪುತಳೆಯುವ, ಜಪಾನ್‌ನಲ್ಲಿ ‘RRR’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ, ರಾಜಮೌಳಿ ಅವರಿಗೆ ‘ಆರ್‌ಆರ್‌ಆರ್’ ಸಿನಿಮಾವನ್ನು ಅನಿಮೆ ರೂಪದಲ್ಲಿ ರಿಮೇಕ್ ಮಾಡುವ ಐಡಿಯಾ ಬಂದಿದೆ.

ರಾಜಮೌಳಿ ಅವರಿಗೆ ಸಿನಿಮಾದ ವಿವಿಧ ತಂತ್ರಜ್ಞಾನಗಳ ಬಗ್ಗೆ ಬಹಳ ಆಸಕ್ತಿ. ಅವರ ನಿರ್ದೇಶನದ ‘ಬಾಹುಬಲಿ’ ಸಿನಿಮಾವನ್ನು ಕಾರ್ಟೂನ್ ರೂಪದಲ್ಲಿ ಹೊರತರುತ್ತಿದ್ದರೆ, ಅದರ ಟ್ರೈಲರ್ ಸಹ ಬಿಡುಗಡೆಯಾಗಿದೆ. ಇದೀಗ ‘ಆರ್‌ಆರ್‌ಆರ್‌’ ಅನ್ನು ಅನಿಮೆ ರೂಪದಲ್ಲಿ ಹೊರತರುವ ಬಗ್ಗೆ ಆಲೋಚಿಸಿದ್ದಾರೆ. ರಾಜಮೌಳಿ ಅವರು ತಮ್ಮ ಕಳೆದ ಜಪಾನ್ ಪ್ರವಾಸದ ವೇಳೆ ಅವರು ಕಜುಟೊ ನಕಜಾವಾ ಹಾಗೂ ಇನ್ನೂ ಕೆಲವು ಖ್ಯಾತ ಅನಿಮೆ ನಿರ್ಮಾಪಕರನ್ನು ಭೇಟಿಯಾಗಿ, ಅನಿಮೇಷನ್ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದಾರೆ. “ಜಪಾನಿನ ಅನಿಮೆಗಳ ಮೇಕಿಂಗ್ ಬಗ್ಗೆ ನನಗೆ ಯಾವಾಗಲೂ ಕುತೂಹಲವಿತ್ತು” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ…

‘RRR’ ಸಿನಿಮಾದಲ್ಲಿರುವ ಅತಿಮಾನುಷ ಆಕ್ಷನ್ ದೃಶ್ಯಗಳು, ನಾಯಕರ ನಡುವಿನ ಸ್ನೇಹ ಮತ್ತು ದೃಶ್ಯ ವೈಭವವು ಅನಿಮೆ ಶೈಲಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ‘ಆರ್ ಆರ್ ಆರ್’ ಸಿನಿಮಾದ ಅನಿಮೆ ರೂಪವು ಕೇವಲ ಸಿನಿಮಾದ ಯಥಾವತ್ ರಿಮೇಕ್ ಆಗಿರದೆ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಜೀವನದ ಹಲವು ರೋಚಕ ಕಥೆಗಳನ್ನು ಒಳಗೊಂಡಿದೆ.

ಸದ್ಯ ರಾಜಮೌಳಿ ಅವರು ಮಹೇಶ್ ಬಾಬು ಅವರೊಂದಿಗೆ ದೊಡ್ಡ ಮಟ್ಟದ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ, ತಮ್ಮ ನಿರ್ಮಾಣದ ‘ಬಾಹುಬಲಿ: ದಿ ಎಟರ್ನಲ್ ವಾರ್’ ಎಂಬ ಅನಿಮೇಟೆಡ್ ಸರಣಿಯನ್ನು ಪ್ರಕಟಿಸುವ ಮೂಲಕ ಅನಿಮೇಷನ್ ಜಗತ್ತಿಗೆ ಅಡಿ ಇಟ್ಟಿದ್ದಾರೆ. ಒಂದು ವೇಳೆ ‘RRR’ ಅನಿಮೆ ಅಧಿಕೃತಗೊಂಡರೆ, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಜಾಗತಿಕ ಮಟ್ಟದ ಅನಿಮೆ ಸರಣಿಯಾಗಿ ಗುರುತಿಸಿಕೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *