ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿ | Bigg Boss 19 Winner Gaurav Khanna Wife Akanksha Chamola Dance Video Viral

ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿ | Bigg Boss 19 Winner Gaurav Khanna Wife Akanksha Chamola Dance Video Viral



ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿ | Bigg Boss 19 Winner Gaurav Khanna Wife Akanksha Chamola Dance Video Viral

Bigg Boss Akanksha Chamola: ಸುದ್ದಿಗೋಷ್ಠಿಯಲ್ಲಿ ನಟಿ ಆಕಾಂಕ್ಷಾ ಅವರು ಇಬ್ಬರು ನಟರ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ. ಮಗು ಮಾಡಿಕೊಂಡಿಲ್ಲ, ಆದರೆ ಹೀಗೆಲ್ಲ ಡ್ಯಾನ್ಸ್‌ ಮಾಡುತ್ತಿರುವುದು ಸರಿಯೇ ಎಂದು ಅನೇಕರು ಕಾಮೆಂಟ್‌ ಹಾಕುತ್ತಿದ್ದಾರೆ. 

ನನಗೆ 44 ಆಯ್ತು, ಮಗು ಬೇಕು ಎನ್ನೋ ಆಸೆ ಇದೆ, ಹೆಂಡತಿ ಒಪ್ಪುತ್ತಿಲ್ಲ. ಅವಳ ಅಭಿಪ್ರಾಯವನ್ನು ನಾನು ಗೌರವಿಸಬೇಕು ಎಂದು ಬಿಗ್‌ ಬಾಸ್‌ 19 ವಿಜೇತ ಗೌರವ್‌ ಖನ್ನಾ ಅವರು ಮನೆಯೊಳಗಡೆ ಹೇಳಿದ್ದರು. ಈಗ ಪತ್ನಿ ಸುದ್ದಿಗೋಷ್ಠಿಯಲ್ಲಿ ಡ್ಯಾನ್ಸ್‌ ಮಾಡಿದ್ದು, ಚರ್ಚೆ ಹುಟ್ಟುಹಾಕಿದೆ.

ಡಿವೋರ್ಸ್‌ ತಗೋತಿಲ್ಲ

Bas Tu Hi Tu ಎನ್ನುವ ರೊಮ್ಯಾಂಟಿಕ್‌ ವಿಡಿಯೋದಲ್ಲಿ ಆಕಾಂಕ್ಷಾ ಅವರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಅತಿಯಾದ ಬೋಲ್ಡ್‌ ದೃಶ್ಯಗಳು, ರೊಮ್ಯಾನ್ಸ್‌ ಕೂಡ ಇದೆ. ಈ ಹಾಡಿಗೂ ಮುನ್ನ ಡಿವೋರ್ಸ್‌ ಆಗುವ ಅನುಮಾನ ತರಿಸುವಂತೆ ಆಕಾಂಕ್ಷಾ ಅವರು ಪೋಸ್ಟ್‌ ಕೂಡ ಹಂಚಿಕೊಂಡಿದ್ದರು. ಗೌರವ್‌ ಖನ್ನಾ, ಆಕಾಂಕ್ಷಾ ಬೇರೆ ಬೇರೆ ಆಗುತ್ತಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಇದೆಲ್ಲವೂ ಪ್ರಚಾರ, ನಾವು ಡಿವೋರ್ಸ್‌ ತಗೊಳ್ತಿಲ್ಲ ಎಂದು ಆಕಾಂಕ್ಷಾ ಹೇಳಿದ್ದಾರೆ.

ರೊಮ್ಯಾಂಟಿಕ್‌ ಡ್ಯಾನ್ಸ್

Bas Tu Hi Tu ಹಾಡಿನ ಸಂಬಂಧಿತ ಸುದ್ದಿಗೋಷ್ಠಿ ಏರ್ಪಡಿಸಲಾಗಿದೆ. ಆ ವೇಳೆ ಆಕಾಂಕ್ಷಾ ಚಮೋಲ ಅವರು ಕೆಂಪು ಬಣ್ಣದ ಡ್ರೆಸ್‌ ಧರಿಸಿ, ಕಂಗೊಳಿಸುತ್ತಿದ್ದರು. ಅವರ ಜೊತೆ ಇಬ್ಬರು ನಟರು ಕೂಡ ಇದ್ದರು. ಈ ಇಬ್ಬರೂ ನಟರು ಆಕಾಂಕ್ಷಾರನ್ನು ಎಳೆದು, ತಳ್ಳಾಡಿ ಡ್ಯಾನ್ಸ್‌ ಮಾಡಿದ್ದಾರೆ. ಗೌರವ್‌ ಅವರನ್ನು ನೋಡಿದರೆ ಬೇಸರ ಆಗುತ್ತದೆ ಎಂದು ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ. ‌

ವೀಕ್ಷಕರು ಹೇಳಿದ್ದೇನು?

“ನಮಗೆ ಇದನ್ನು ಸಹಿಸೋಕೆ ಆಗ್ತಿಲ್ಲ, ಮಾನ ಮರ್ಯಾದೆ ಬಿಟ್ಟ ಗೌರವ್‌ ಖನ್ನಾ ಪತ್ನಿಯಂಥ ಹೆಂಗಸನ್ನು ನಾವು ಎಲ್ಲಿಯೂ ನೋಡಿಲ್ಲ, ಆ ಇಬ್ಬರು ನಟರ ಜೊತೆ ನೀವು ಹೇಗೆ ಕಂಫರ್ಟ್‌ ಆಗಿದ್ದೀರಿ? ಪ್ರಚಾರ ಮಾಡೋದು ಒಂದುಕಡೆಯಾದರೆ, ಹೀಗೆಲ್ಲ ಆಡಬಾರದು, ಅದಕ್ಕೂ ಲಿಮಿಟ್‌ ಇದೆ. ಗೌರವ್‌ ಖನ್ನಾಗೆ ಇವರಿಗಿಂತ ಒಳ್ಳೆಯ ಹೆಂಡತಿ ಸಿಗಬೇಕು” ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಜನ್ಮದಿನ ಆಚರಣೆ

ಗೌರವ್‌ ಖನ್ನಾ ಅವರು ಟ್ರೋಫಿ ಗಳಿಸಿದ ಬಳಿಕ ಎಲ್ಲ ಕಡೆ ಪತ್ನಿ ಜೊತೆಗೆ ಓಡಾಡಿದ್ದರು. ಗೌರವ್‌ ಹಾಗೂ ಆಕಾಂಕ್ಷಾ ಅವರು ಗ್ರ್ಯಾಂಡ್‌ ಆಗಿ ಜನ್ಮದಿನ ಆಚರಿಸಿಕೊಂಡಿದ್ದರು. ಪಾರ್ಟಿಯಲ್ಲಿ ಇವರ ಡ್ಯಾನ್ಸ್‌ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಅಂದಹಾಗೆ ಕಿರುತೆರೆಯಲ್ಲಿ ಅನುಪಮಾ ಧಾರಾವಾಹಿಯಲ್ಲಿ ಗೌರವ್‌ ಖನ್ನಾ ಅವರು ಅನೂಜ್‌ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕಾಂಕ್ಷಾಗೆ ಕಿರುತೆರೆಯಲ್ಲಿ ಅಷ್ಟು ಜನಪ್ರಿಯತೆ ಸಿಕ್ಕಿಲ್ಲ. ಇವರಿಬ್ಬರು ಲವ್‌ ಮ್ಯಾರೇಜ್‌ ಆಗಿದ್ದು 11 ವರ್ಷಗಳ ನಡುವಿನ ಅಂತರವಿದೆ.



Source link

Leave a Reply

Your email address will not be published. Required fields are marked *