ದಳಪತಿ ವಿಜಯ್ (ವಿಜಯ್) ನಟನೆಯ ಕೊನೆಯ ಸಿನಿಮಾ ‘ಜನ ನಾಯಕನ್’ಗೆ ಇನ್ನೂ ರಿಲೀಸ್ ಭಾಗ್ಯ ಸಿಕ್ಕಿಲ್ಲ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣಕ್ಕೆ ಆದ ತೊಂದರೆಯಿಂದ ಅವರ ಚಿತ್ರ ಬಿಡುಗಡೆ ಭಾಗ್ಯ ಕಾಣುತ್ತಿಲ್ಲ. ಹೀಗಿರುವಾಗ ಅವರಿಗೆ ಮದ್ರಾಸ್ ಹೈಕೋರ್ಟ್ ನಿಂದ ದೊಡ್ಡ ಶಾಕ್ ಎದುರಾಗಿದೆ. ಆಸ್ತಿ ಬಹಿರಂಗಪಡಿಸಿದ ಪ್ರಕರಣಕ್ಕೆ ತೆರಿಗೆ ಇಲಾಖೆ ಹೇರಿದ್ದ ಒಂದೂವರೆ ಕೋಟಿ ರೂಪಾಯಿ ದಂಡದ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸೂಚಿಸಿದೆ.
2015-16ನೇ ಆರ್ಥಿಕ ಸಾಲಿನಲ್ಲಿ ವಿಜಯ್ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅವರು 15 ಕೋಟಿ ರೂಪಾಯಿ ಆದಾಯವನ್ನು ತೋರಿಸಿದ್ದಾರೆ, ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಒಂದೂವರೆ ಕೋಟಿ ರೂಪಾಯಿ ದಂಡ ವಿಧಿಸಿತ್ತು.
ದಳಪತಿ ವಿಜಯ್ ಅವರು 2022 ರಲ್ಲಿ ಈ ನೋಟಿಸ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಸೆಂದಿಲ್ ಕುಮಾರ್ ರಾಮಮೂರ್ತಿ ಅವರು ಶುಕ್ರವಾರ (ಫೆಬ್ರವರಿ 6) ತೀರ್ಪು ನೀಡಿದ್ದಾರೆ. ಇದು ವಿಜಯ್ ವಿರುದ್ಧದ ತೀರ್ಪಾಗಿದೆ. ವಿಜಯ್ಗೆ ರಿಲೀಫ್ ನೀಡಲು ಸಾಧ್ಯವಿಲ್ಲ ಎಂದಿದೆ.
ಇದನ್ನೂ ಓದಿ: ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್
‘ತೆರಿಗೆ ಅಧಿಕಾರಿಗಳು ಹೊರಡಿಸಿದ ಶೋಕಾಸ್ ನೋಟೀಸ್ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263 ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಮಿತಿಯೊಳಗೆ ಇದೆ . ಅದರ ಜಾರಿಯಲ್ಲಿ ಯಾವುದೇ ತಪ್ಪಾಗಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿಯನ್ನು ತಿರಸ್ಕರಿಸುವ ವೇಳೆ ‘ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಲಿ’ ಇದನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನೀಡಿದೆ.
ಸಿಕ್ಕಿತ್ತು 15 ಕೋಟಿ
ವಿಜಯ್ ಮನೆಯ ಮೇಲೆ ದಾಳಿ ನಡೆಸಿದ ವಿಜಯ್ ಅವರು 15 ಕೋಟಿ ಹಣದ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ತೆರಿಗೆ ಪಾವತಿಸಿದ ಕಾರಣ ಈ ದಂಡ ವಿಧಿಸಲಾಗಿದೆ. ಅವರು ದಂಡ ಪಾವತಿ ಮಾಡುತ್ತಾರಾ ಅಥವಾ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಈ ಆದೇಶವನ್ನು ಪ್ರಶ್ನಿಸುತ್ತಾರೆ ಕಾದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.