
<p>ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್, ಅತೀ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯವಿದೆ. ಈ ಪೈಕಿ ಬಜೆಟ್ ಸ್ಮಾರ್ಟ್‌ಫೋನ್ ಬಹುತೇಕರ ಮೊದಲ ಆಯ್ಕೆಯಾಗಿದೆ.</p><p> </p><img>ಏಪ್ರಿಲ್ 2025 ರಲ್ಲಿ ಬಿಡುಗಡೆಯಾದ ವಿವೋ T4, 20,000 ರೂ. ಒಳಗಿನ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. ಇದು ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್, 8 GB RAM, 50+2 MP ಬ್ಯಾಕ್ ಕ್ಯಾಮೆರಾ, 32 MP ಫ್ರಂಟ್ ಕ್ಯಾಮೆರಾ, 90W ಫ್ಲ್ಯಾಶ್ ಚಾರ್ಜಿಂಗ್ ಜೊತೆಗೆ 7300 mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.<img>ಐಕ್ಯೂ Z10 ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರಲ್ಲಿ 50 MP + 2 MP ಬ್ಯಾಕ್ ಕ್ಯಾಮೆರಾ ಮತ್ತು 32 MP ಫ್ರಂಟ್ ಕ್ಯಾಮೆರಾ ಇರಲಿದೆ. 90 ವ್ಯಾಟ್ಸ್ ಫ್ಲ್ಯಾಶ್ ಚಾರ್ಜಿಂಗ್ ಬೆಂಬಲಿಸುವ 7300 mAh ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೀಡಲಾಗಿದೆ.<img>ಮೋಟೋರೋಲಾ ಅಭಿಮಾನಿಗಳಿಗಾಗಿ ಮೋಟೋ G67 ಪವರ್ ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 2 ಚಿಪ್‌ಸೆಟ್‌ನೊಂದಿಗೆ ಬಂದಿದೆ. ಇದರಲ್ಲಿ 8 GB RAM, 50+8 MP ಬ್ಯಾಕ್ ಕ್ಯಾಮೆರಾ, 32 MP ಫ್ರಂಟ್ ಕ್ಯಾಮೆರಾ, 30W ಟರ್ಬೋ ಚಾರ್ಜಿಂಗ್ ಜೊತೆಗೆ 7000 mAh ಬ್ಯಾಟರಿ ಮತ್ತು 6.7-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ.<img>ರಿಯಲ್‌ಮೀ P4 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ 6 GB RAM, 50+8 MP ಬ್ಯಾಕ್ ಕ್ಯಾಮೆರಾ, 16 MP ಫ್ರಂಟ್ ಕ್ಯಾಮೆರಾ, 80W ಅಲ್ಟ್ರಾ ಚಾರ್ಜಿಂಗ್ ಜೊತೆಗೆ 7000 mAh ಬ್ಯಾಟರಿ ಮತ್ತು 6.77-ಇಂಚಿನ ಹೈಪರ್ ಗ್ಲೋ ಅಮೋಲೆಡ್ ಡಿಸ್‌ಪ್ಲೇ ಇದೆ.<img>ಶಿಯೋಮಿ ರೆಡ್‌ಮಿ ನೋಟ್ 15 ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್ ಮತ್ತು 8 GB RAM ನೊಂದಿಗೆ ಬರುತ್ತದೆ. ಇದರಲ್ಲಿ 108+8 MP ಬ್ಯಾಕ್ ಕ್ಯಾಮೆರಾ, 20 MP ಫ್ರಂಟ್ ಕ್ಯಾಮೆರಾ, 45W ಟರ್ಬೋ ಚಾರ್ಜಿಂಗ್ ಬೆಂಬಲಿಸುವ 5520 mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ನೀಡಲಾಗಿದೆ.
Source link
ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್