Pariksha Pe Charcha: ಹಿಂದಿ, ನೇಪಾಳಿ, ಬಂಗಾಳಿ ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ

Pariksha Pe Charcha: ಹಿಂದಿ, ನೇಪಾಳಿ, ಬಂಗಾಳಿ ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ


ನವದೆಹಲಿ, ಫೆಬ್ರವರಿ 6: ಇಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ಪರೀಕ್ಷಾ ಪೆ ಚರ್ಚಾ (ಪರೀಕ್ಷಾ ಪೇ ಚರ್ಚಾ) ಈ ವೇಳೆ ಪ್ರಧಾನಿ ಮೋದಿಯ ಮುಂದೆ ಸಿಕ್ಕಿನ್ನ ಹುಡುಗಿಯೊಬ್ಬಳು ಹಿಂದಿ, ನೇಪಾಳಿ ಮತ್ತು ಬಂಗಾಳಿ ಭಾಷೆಗಳಲ್ಲಿ ತಾನೇ ಬರೆದ ‘ಹಮಾರ ಭಾರತ್ ಭೂಮಿ’ ಎಂಬ ದೇಶಭಕ್ತಿ ಗೀತೆ ಹಾಡುವ ಮೂಲಕ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತಾನು 3 ಭಾಷೆಗಳಲ್ಲಿ ಹಾಡುಗಳನ್ನು ಬರೆದಿದ್ದೇನೆ ಎಂದು ಆಕೆ ಹೇಳಿದಾಗ ಸಂತೋಷಗೊಂಡ ಪ್ರಧಾನಿ ಮೋದಿ, ‘ನಿನಗೆ ಕವಿತೆ ಬರೆಯುವ ಅಭ್ಯಾಸವಿದೆಯೇ? ನಿನಗೆ ಬರವಣಿಗೆ ಎಂದರೆ ಇಷ್ಟವೇ?’ ಎಂದು ಕೇಳಿದರು. ಅದಕ್ಕೆ ಹೌದು ಎಂದ ಬಾಲಕಿ ಸುಶ್ರಾವ್ಯವಾಗಿ ತಾನು ಬರೆದ ಹಾಡನ್ನು ಹಾಡಿದಾಗ ಮೋದಿ ಹಾಗೂ ಇತರ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಆಕೆಯನ್ನು ಪ್ರೋತ್ಸಾಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಪರೀಕ್ಷಾ ಪೆ ಚರ್ಚಾ 9 ನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿದ್ದಾರೆ. ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಜೊತೆ ಅನೌಪಚಾರಿಕ ಸಂವಾದ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *