ನವದೆಹಲಿ, ಫೆಬ್ರುವರಿ 6: ಅಧಿಕ ಹಣದುಬ್ಬರ, ಮಂದ ಬೆಳವಣಿಗೆ, ಸಾಲದ ಹೊರೆ, ಪರಾವಲಂಬನೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಆಂತರಿಕ ಕ್ಷೋಭೆ ಹೆಚ್ಚುತ್ತಿದೆ. ಅಲ್ಲಿ ಜನರಿಗೆ ಸರಿಯಾದ ಕೆಲಸ ಇಲ್ಲದೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಪಾಕಿಸ್ತಾನದ ರಸ್ತೆಯ ಮೋರಿಯ ಮ್ಯಾನ್ ಹೋಲ್ ಮುಚ್ಚಳವನ್ನೂ ಬಿಡದೆ ಕಳ್ಳತನ ಮಾಡುತ್ತಿರುವ ಘಟನೆಗಳು ಜನರಲ್ಲಿ ಹೆಚ್ಚಾಗುತ್ತಿವೆ.
ಕಬ್ಬಿಣದ ಈ ಮುಚ್ಚಳಗಳು ಬಹಳ ತೂಕವಿದ್ದು, ಅವನನ್ನು ಮಾರಿ ಜನರು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕಳ್ಳತನ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತಿಲ್ಲ, ಸರ್ವೇಸಾಮಾನ್ಯ ಘಟನೆಗಳೇ ಆಗಿಹೋಗಿವೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮಾರ್ಯಂ ಷರೀಫ್ ಅವರೇ ಖುದ್ದಾಗಿ ವಿಡಿಯೋ ಮೆಸೇಜ್ ನೀಡಿ ಕಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೆ ತೊಂದರೆ ಇಲ್ಲ, ರೈತರು ಸೇಫ್; ಭಾರತ-ಅಮೆರಿಕ ಟ್ರೇಡ್ ಡೀಲ್‌ನಲ್ಲಿ ಏನಿದೆ?
‘ಮ್ಯಾನ್ ಹೋಲ್‌ಗಳ ಮುಚ್ಚಳವನ್ನು ಬೆಳಗ್ಗೆ ಹಾಕುತ್ತೇವೆ. ರಾತ್ರಿ ಮುಗಿಯುವುದರೊಳಗೆ ಅದು ಕಳ್ಳತನ ಆಗಿರುತ್ತದೆ. ಈ ಮುಚ್ಚಳವನ್ನು ಕಳ್ಳತನ ಮಾಡಬೇಡಿ. ಕಳ್ಳತನ ಮಾಡಿದರೆ, ಅಥವಾ ಅದನ್ನು ಮಾರಿದರೆ ಅಥವಾ ಖರೀದಿಸಿದರೆ ಅಂಥವರಿಗೆ 1-10 ವರ್ಷ ಜೈಲು ಶಿಕ್ಷೆ ನೀಡುವಂತಹ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಈ ಕಳ್ಳತನದಿಂದಾಗಿ ಯಾರಿಗಾದರೂ ಸಾವಾದರೆ, ಅಪರಾಧಿಗೆ 10 ವರ್ಷ ಶಿಕ್ಷೆ ಹಾಗೂ 3-50 ಲಕ್ಷ ರೂ ದಂಡವನ್ನು ಜೈಲು ಹಾಕುವುದಾಗಿ ಮಾರ್ಯಮ್ ಷರೀಫ್ ತಮ್ಮ ವಿಡಿಯೋ ಮೆಸೇಜ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಾರ್ಯಮ್ ಷರೀಫ್ ಮಾತನಾಡಿರುವ ವಿಡಿಯೋ
ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ, ಈಗ ಜನರು ಕೇವಲ ಸ್ಕ್ರ್ಯಾಪ್ ಹಣವನ್ನು ಗಳಿಸಲು ಮ್ಯಾನ್ಹೋಲ್ ಕವರ್ಗಳನ್ನು ಕದಿಯುವುದನ್ನು ನೋಡುತ್ತಿದ್ದಾರೆ – ಇದು ಪೂರ್ಣ ಪ್ರಮಾಣದ ಬಿಕ್ಕಟ್ಟಿನ ಸ್ಪಷ್ಟ ಸಂಕೇತವಾಗಿದೆ.
ಹೆಚ್ಚುತ್ತಿರುವ ಕಳ್ಳತನದಿಂದ ಗಾಬರಿಗೊಂಡ ಪಂಜಾಬ್ ಸರ್ಕಾರವು ಹೊಸ ಕಾನೂನನ್ನು ಪರಿಚಯಿಸಿದೆ: ಮ್ಯಾನ್ಹೋಲ್ ಕವರ್ಗಳನ್ನು ಕದಿಯುವುದು, ಮಾರಾಟ ಮಾಡುವುದು ಅಥವಾ ಖರೀದಿಸುವುದು ಎಂದರೆ 1–10… pic.twitter.com/SLAKgyvQMb
— ಮೇಘ್ ನವೀಕರಣಗಳು 🚨™ (@MeghUpdates) ಫೆಬ್ರವರಿ 6, 2026
ಭಿಕ್ಷೆ ಬೇಡ, ನಾಚಿಕೆಯಿಂದ ತಲೆ ತಗ್ಗಿಸಿದೆ ಎನ್ನುತ್ತಿರುವ ಪ್ರಧಾನಿ
ಹಣಕ್ಕಾಗಿ ಪ್ರಪಂಚದ ಮುಂದೆ ಭಿಕ್ಷೆ ಎತ್ತುವಾಗ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ಸಾಲ ಪಡೆಯುವುದೆಂದರೆ ಸ್ವಾಭಿಮಾನ ಬಿಟ್ಟುಕೊಟ್ಟಂತೆ ಅನಿಸುತ್ತೆ. ಅವರು ಹೇಳುವ ಯಾವುದೇ ಕೆಲಸವನ್ನೂ ಇಲ್ಲ ಎನ್ನಲು ಆಗುವುದೇ ಇಲ್ಲ ಎಂದು ವಾರದ ಹಿಂದೆ ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಅಳಲು ತೊಡಿಕೊಂಡರು.
ಇದನ್ನೂ ಓದಿ: ಅಮೆರಿಕದಲ್ಲಿ ಜನವರಿಯಲ್ಲಿ ಅತಿಹೆಚ್ಚು ಉದ್ಯೋಗನಷ್ಟ; ಗಂಭೀರ ಸಮಸ್ಯೆಯ ಮುನ್ಸೂಚನೆಯಾ?
ಸಾಲದ ಹೊರೆಯಲ್ಲಿರುವ ಪಾಕಿಸ್ತಾನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ. ಸಾಲದ ಬಡ್ಡಿಯು ದುಡ್ಡಿಲ್ಲದೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಪದೇ ಪದೇ ಐಎಂಎಫ್ ಮುಂದೆ ಸಾಲಕ್ಕಾಗಿ ಪಾಕಿಸ್ತಾನ ಕೈ ಚಾಚಿದೆ. ಚೀನಾ ಜೊತೆಗೆ ಜಂಟಿಯಾಗಿ ತಯಾರಿಸಲಾಗುತ್ತಿರುವ ಯುದ್ಧವಿಮಾನ ಇತ್ಯಾದಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರಾಟಕ್ಕಿಟ್ಟು ಸಾಲ ತೀರಿಸಲು ಪಾಕಿಸ್ತಾನ ಹೆಣಗುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ