Headlines

Love need Effort ಬೆಳಗ್ಗೆ ಗಂಡ ಹೆಂಡತಿ ಜಗಳ, ಮುನಿಸಿಕೊಂಡ ಜೋಡಿಯ ವ್ಯಾಟ್ಸಾಪ್ ಚಾಟ್‌ಗೆ ನೆಟ್ಟಿಗರ ಶಹಬ್ಬಾಷ್ | Morning Spat Midnight Love How A Whatsapp Chat Revived Romance For This Couple

Love need Effort ಬೆಳಗ್ಗೆ ಗಂಡ ಹೆಂಡತಿ ಜಗಳ, ಮುನಿಸಿಕೊಂಡ ಜೋಡಿಯ ವ್ಯಾಟ್ಸಾಪ್ ಚಾಟ್‌ಗೆ ನೆಟ್ಟಿಗರ ಶಹಬ್ಬಾಷ್ | Morning Spat Midnight Love How A Whatsapp Chat Revived Romance For This Couple



Love need Effort ಬೆಳಗ್ಗೆ ಗಂಡ ಹೆಂಡತಿ ಜಗಳ, ಮುನಿಸಿಕೊಂಡ ಜೋಡಿಯ ವ್ಯಾಟ್ಸಾಪ್ ಚಾಟ್‌ಗೆ ನೆಟ್ಟಿಗರ ಶಹಬ್ಬಾಷ್ | Morning Spat Midnight Love How A Whatsapp Chat Revived Romance For This Couple

ಬೆಳಗ್ಗೆ ಗಂಡ ಹೆಂಡತಿ ಜಗಳ, ಮುನಿಸಿಕೊಂಡ ಬಳಿಕ ಪತ್ನಿ ತನ್ನ ಆಕ್ರೋಶವನ್ನು ವ್ಯಾಟ್ಸಾಪ್ ಮೂಲಕ ಹೊರಹಾಕಲು ಮುಂದಾಗಿದ್ದಾಳೆ. ಆದರೆ ಪತಿಯ ಒಂದು ಮೆಸೇಜ್‌ಗೆ ಕರಗಿ ನೀರಾಗಿದ್ದಾಳೆ. ಈ ವ್ಯಾಟ್ಸಾಪ್ ಚಾಟ್‌ಗೆ ನೆಟ್ಟಿಗರ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಗಂಡ ಹೆಂಡತಿ ಜಗಳ ಹೊಸದೇನಲ್ಲ.ಆದರೆ ಕೆಲವು ಬಾರಿ ತಾರಕಕ್ಕೇರಿ ದುರಂತಗಳು ನಡೆದಿದೆ. ಕ್ಷುಲ್ಲಕ ಕಾಣಕ್ಕೆ ಜಗಳವಾಡಿ ಹಲವು ಸಂಬಂಧಗಳು ಮುರಿದು ಬಿದ್ದಿದೆ. ಹೀಗೆ ಇಲ್ಲೊಂದು ಜೋಡಿ ಸವಾಲುಗಳ ಎದುರಿಸವ ನಡುವೆ ಕಿತ್ತಾಡಿಗೊಂಡಿದ್ದಾರೆ. ಇಬ್ಬರು ಬೈದಾಡಿದ್ದಾರೆ. ಬೆಳಗ್ಗೆ ಗಂಡ ಹಾಗೂ ಹೆಂಡತಿ ಜಗಳವಾಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿ ಬಳಿಕ ಮುನಿಸಿಕೊಂಡಿದ್ದಾರೆ. ಗಂಡ ಕಚೇರಿಯತ್ತ ಹೊರಟರೆ, ಮನೆಯಲ್ಲಿದ್ದ ಹೆಂಡತಿ ಆಕ್ರೋಶ ತಣ್ಣಗಾಗಿರಲಿಲ್ಲ. ಹೀಗಾಗಿ ವ್ಯಾಟ್ಸಾಪ್ ಮೂಲಕ ಗಂಡನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲು ಮೆಸೇಜ್ ಮಾಡಿದ್ದಾಳೆ. ಆದರೆ ಗಂಡನ ಉತ್ತರ, ಪ್ರತಿಕ್ರಿಯೆ ಎಲ್ಲಾ ಪ್ಲಾನ್ ಉಲ್ಟಾ ಮಾಡಿದ್ದು ಮಾತ್ರವಲ್ಲ, ಹೆಂಡತಿ ಕರಗಿ ನೀರಾಗಿದ್ದಾಳೆ.

ಜಗಳದ ವ್ಯಾಟ್ಸಾಪ್ ಮೆಸೇಜ್ ಹಂಚಿಕೊಂಡ ಹೆಂಡತಿ

ಹೆಂಡತಿ ಜಗಳ ಹಾಗೂ ಘಟನೆ ಕುರಿತು ರೆಡ್ಡಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾಳೆ. ಗಂಡನ ಬೈಗಳು ಕೇಳಿಸಿಕೊಂಡ ಆಕ್ರೋಶಗೊಂಡ ಪತ್ನಿ ವ್ಯಾಟ್ಸಾಪ್ ಮೂಲಕ ಇನ್ನೇನಾಾದರು ಹೇಳಲು ಬಾಕಿ ಇದೆಯಾ? ಎಂದು ಬೆಳಗಿನ ಜಗಳದ ಕುರಿತು ಮೆಸೇಜ್ ಮಾಡಿದ್ದಾಳೆ. ಗಂಡನಿಂದಲೂ ಅದೇ ರೀತಿಯ ಖಾರವಾದ ಪ್ರತಿಕ್ರಿಯೆ ಬಂದರೆ ತನ್ನ ಆಕ್ರೋಶ ಹಾಗೂ ನೋವು ಹೊರಹಾಕಲು ಮುಂದಾಗಿದ್ದಳು. ಆದರೆ ಗಂಡನ ಒಂದೇ ಮೇಸೆಜ್ ಪರಿಸ್ಥಿತಿಯನ್ನೇ ಬದಲಿಸಿದೆ. ಗಂಡ ನೇರವಾಗಿ ಇಂದು ಬೆಳಗಿನ ಘಟನೆಗೆ ಕ್ಷಮಿಸು ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ನೋಡಿದ ಹೆಂಡತಿ ಕೋಪ ನೀರಾಗಿ ಕರಗಿದೆ. ಗಂಡನ ಮೆಸೇಜ್‌ಗೆ ಪ್ರತಿಕ್ರಿಯಿಸಿದ ಹೆಂಡತಿ, ಬೆಳಗ್ಗೆ ಜಗಳವಾಡಿದ್ದಕ್ಕೆ ಕ್ಷಮಿಸು ಎಂದು ಮೆಸೇಜ್ ಮಾಡಿದ್ದಾಳೆ.

ಇದರ ಬೆನ್ನಲ್ಲೇ ಮತ್ತೊಂದು ಮೆಸೇಜ್ ಮಾಡಿದ್ದಾಳೆ. ನನಗೆ ನಾಲ್ಕು ಪದ ಅಲ್ಲ, ಸ್ವಲ್ಪ ದೊಡ್ಡ ಮೆಸೇಜ್ ಕಳುಹಿಸಿ, ನನ್ನ ಮೂಡ್ ಸರಿಯಾಗಲು ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ಗಂಡ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಗಮನಸೆಳೆದಿದೆ. ನಮ್ಮ ಸದಸ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನನನಗೆ ಬೆಂಬಲವಾಗಿ ನಿಂತಿದ್ದೆ. 2025 ನಮಗೆ ಸವಾಲುಗಳಿಂದ ಕೂಡಿತ್ತು. 2026 ಹಾಗೂ 2027 ಉತ್ತಮ ಭವಿಷ್ಯ ನಮ್ಮದಾಗಲಿದೆ. ನನ್ನ ನಿರ್ಧಾರಗಳ ಜೊತೆ ನಿಂತು ನನ್ನ ಎಲ್ಲಾ ಅಸಹನೆಗಳನ್ನು ತಾಳ್ಮೆಯಿಂದಲೇ ನಿಭಾಯಿಸುವ ನೀನು ನನ್ನ ಪ್ರೀತಿ. ಲವ್ ಯು ಎಂದು ಸಂದೇಶ ಕಳುಹಿಸಿದ್ದಾನೆ.

ಗಂಡನ ಸಂದೇಶ ನೋಡಿ ಹೆಂಡತಿ ಭಾವುಕಳಾಗಿದ್ದಾಳೆ. ಇದಕ್ಕೆ ಈಕೆ ಕೂಡ ಉತ್ತರಿಸಿದ್ದಾಳೆ. ಜಗಳವಾಡುತ್ತೇನೆ. ಗೊತ್ತಿದೆ ನಮ್ಮ ಉತ್ತಮ ಭವಿಷ್ಯಕ್ಕಾಗಿ ಶ್ರಮವಹಿಸುತ್ತಿದ್ದೆ. ನನ್ನ ಸಂಗಾತಿಯಾಗಿ ನಿನ್ನನ್ನು ಆಯ್ಕೆ ಮಾಡಿರುವುದು ಹೆಮ್ಮೆ ಇದೆ. ಪ್ರೀತಿಯಿಂದ ಲವ್ ಯೂ ಎಂದು ಉತ್ತರಿಸಿದ್ದಾಳೆ. ಇದೀಗ ನೆಟ್ಟಿಗರು ಈ ಚಾಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸಂಬಂಧಗಳಲ್ಲಿ ಕ್ಷಮೆ ಕೇಳುವುದು, ಸಂಬಂಧಗಳ ಗೌರವ ಉಳಿಸಿಕೊಳ್ಳುವ ಪ್ರಯತ್ನಗಳೇ ಕಾಣುತ್ತಿಲ್ಲ. ಇಬ್ಬರು ಜಗಳಾವಾಡುತ್ತಾರೆ, ಬೈಗಳ ಶುರುವಮಾಡುತ್ತಾರೆ. ಯಾರೂ ಕೂಡ ಕ್ಷಮೆ ಕೇಳಿ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲ್ಲ. ಪ್ರೀತಿ, ಸಂಬಂಧ ಗಟ್ಟಿಗೊಳಿಸಲು ಈ ರೀತಿಯ ಕ್ಷಮೆ ಅಗತ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *