Headlines

ಹೆಂಡ್ತಿ-ಸಮಯದ ಬಗ್ಗೆ ವೈರಲ್ ಆಗ್ತಿದೆ ಈ ಸೋಷಿಯಲ್ ಮೀಡಿಯಾ ಪೋಸ್ಟ್.. ನಮ್ದೂ ಇದೇ ಸ್ಥಿತಿ ಅಂತೀರಾ? | This Social Media Post Became Viral Now And Receiving Lot Of Comments

ಹೆಂಡ್ತಿ-ಸಮಯದ ಬಗ್ಗೆ ವೈರಲ್ ಆಗ್ತಿದೆ ಈ ಸೋಷಿಯಲ್ ಮೀಡಿಯಾ ಪೋಸ್ಟ್.. ನಮ್ದೂ ಇದೇ ಸ್ಥಿತಿ ಅಂತೀರಾ? | This Social Media Post Became Viral Now And Receiving Lot Of Comments



ಹೆಂಡ್ತಿ-ಸಮಯದ ಬಗ್ಗೆ ವೈರಲ್ ಆಗ್ತಿದೆ ಈ ಸೋಷಿಯಲ್ ಮೀಡಿಯಾ ಪೋಸ್ಟ್.. ನಮ್ದೂ ಇದೇ ಸ್ಥಿತಿ ಅಂತೀರಾ? | This Social Media Post Became Viral Now And Receiving Lot Of Comments

ಇಂದಿನ ಜೀವನವನ್ನು ಯಾಂತ್ರಿಕ ಜೀವನ ಎನ್ನಬೇಕೋ ಅಥವಾ ಎಐ ಯುಗ ಎನ್ನಬೇಕೋ ಗೊತ್ತಾಗುತ್ತಿಲ್ಲ. ಕಾರಣ, ಇಂದು ಬದುಕಿನಲ್ಲಿ ಬೇರೆಲ್ಲವನ್ನೂ ಕಳೆದುಕೊಂಡು ಕೇವಲ ಹಣದ ಹಿಂದೆ ಓಡುತ್ತಿದ್ದಾರೆ ಜನ. ಹಾಗಂತ ಅದು ತಪ್ಪ-ಸರಿ ಎಂಬ ವಾದ ಮಾಡುತ್ತಾ ಕುಳಿತುಕೊಳ್ಳಬೇಕಾಗಿಲ್ಲ.  ಈ ಸ್ಟೋರಿ ನೋಡಿ..

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು- ಹಾಡು ನೆನಪಾಗ್ತಿದೆ!

ಇಂದಿನ ಜೀವನವನ್ನು ಯಾಂತ್ರಿಕ ಜೀವನ ಎನ್ನಬೇಕೋ ಅಥವಾ ಎಐ ಯುಗ ಎನ್ನಬೇಕೋ ಗೊತ್ತಾಗುತ್ತಿಲ್ಲ. ಕಾರಣ, ಇಂದು ಬದುಕಿನಲ್ಲಿ ಬೇರೆಲ್ಲವನ್ನೂ ಕಳೆದುಕೊಂಡು ಕೇವಲ ಹಣದ ಹಿಂದೆ ಓಡುತ್ತಿದ್ದಾರೆ ಜನ. ಹಾಗಂತ ಅದು ತಪ್ಪ-ಸರಿ ಎಂಬ ವಾದ ಮಾಡುತ್ತಾ ಕುಳಿತುಕೊಳ್ಳಬೇಕಾಗಿಲ್ಲ. ಕಾರಣ, ಇಂದು ನೀವು ನೆಮ್ಮದಿಯಿಂದ ಊಟ ಮಾಡಬೇಕು ಎಂದರೆ ಹಣ ಸಂಪಾದನೆ ಅನಿವಾರ್ಯ. ಆದರೆ, ಅದೊಂದೇ ಜೀವನ ಎನ್ನುವಂತಾಗಿದ್ದು ಮಾತ್ರ ದುರಂತ!

ಹಣದ ಹಿಂದೆ ಮಾತ್ರ ಬಿದ್ದಿಲ್ಲ

ವಿಷಯ ಇಷ್ಟೇ.. ಇಂದು ನಾವು ಕೇವಲ ಹಣದ ಹಿಂದೆ ಮಾತ್ರ ಬಿದ್ದಿಲ್ಲ. ಅದರ ಜೊತೆ ಹತ್ತುಹಲವು ಸಂಗತಿಗಳನ್ನು, ಜೀವನದ ಅತ್ಯಮೂಲ್ಯ ಖುಷಿಯ ಕ್ಷಣಗಳನ್ನು ಕೂಡ ಕಳೆದುಕೊಳ್ಳುತ್ತಿದ್ದೇವೆ. ಅದರ ಅರಿವು ಮಾತ್ರ ಬಹಳಷ್ಟು ಜನರಿಗೆ ಇಲ್ಲ. ಒಂದು ಗಳಿಸಿಕೊಂಡಾಗ ಮತ್ತೊಂದನ್ನು ಕಳೆದುಕೊಳ್ಳಲೇಬೇಕು ಎಂಬ ಸಂದರ್ಭವನ್ನು ನಾವೇ ತಂದುಕೊಂಡಿದ್ದೇವೆ. ಕಾರಣ, ಸ್ವಾರ್ಥ.. ಬರೀ ಸ್ವಾರ್ಥವಲ್ಲ, ಮಹಾ ಸ್ವಾರ್ಥ..

ಬಹಳಷ್ಟು ಜನರ ಜೀವನ ಹಾಗಿಲ್ಲ

ಈ ಸ್ವಾರ್ಥದ ಕಾರಣಕ್ಕೇ ನಾವು ಒಂದನ್ನು ಗಳಿಸಿಕೊಳ್ಳುವುದಕ್ಕೋಸ್ಕರ ಮತ್ತೊಂದನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾದರೆ ನಮಗೆ ಉಳಿಯೋದು ಬರಿಗೈ ಮಾತ್ರ.. ಒಂದನ್ನು ಗಳಿಸಿಕೊಂಡು ಮತ್ತೊಂದನ್ನೂ ಗಳಿಸಿಕೊಳ್ಳುವಂತಿರಬೇಕು ಜೀವನ.. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರ ಜೀವನ ಹಾಗಿಲ್ಲ. ಆದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವೈರಲ ಪೋಸ್ಟ್ ಹರಿದಾಡುತ್ತಿದೆ. ಅದರಲ್ಲೇನಿದೆ? ಮುಂದೆ ನೋಡಿ..

* ಬಾಲ್ಯದಲ್ಲೇ ಅಣ್ಣ-ತಮ್ಮಂದಿರ ಜೊತೆ ಉಂಡುಬಿಡಿ, ಮುಂದೆ ಆ ಅವಕಾಶ ಸಿಗಲಿಕ್ಕಿಲ್ಲ..

* ಹೆಂಡ್ತಿ ಬರುವುದಕ್ಕಿಂತ ಮುಂಚೆಯೇ ತಾಯಿಯ ಪ್ರೀತಿಯನ್ನು ಅನುಭವಿಸಿಬಿಡಿ, ಏಕೆಂದರೆ, ಮುಂದೆ ಅದು ದೊರೆಯಲಿಕ್ಕಿಲ್ಲ..

* ಮದುವೆಯಲ್ಲೇ ಹೆಂಡ್ತಿಯ ಸೌಂದರ್ಯವನ್ನು ನೋಡಿ ಬಿಡಿ, ಮುಂದೆ ಅದು ಉಳಿಯುವ ಗ್ಯಾರಂಟಿ ಇಲ್ಲ..

* ಚಿಕ್ಕವರಿದ್ದಾಗಲೇ ಮಕ್ಕಳ ಜೊತೆ ಮಾತಾಡಿಬಿಡಿ, ಮುಂದೆ ನಿಮ್ಮೊಂದಿಗೆ ಮಾತನ್ನಾಡಲು ಅವರಿಗೆ ಸಮಯ ಇರಲಿಕ್ಕಿಲ್ಲ..

* ಎಲ್ಲದಕ್ಕೂ ಕಾರಣ-ಹೆಜ್ಜೆಹೆಜ್ಜೆಗೂ ಕಾಲಚಕ್ರದಲ್ಲಿ ಬದಲಾವಣೆ.. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಕಳೆದುಕೊಳ್ಳುವುದೇ ಜೀವನ ಎನ್ನುವಂತೆ ಇಂದಿನ ಜೀವನ ನಿರ್ವಹಣೆ ನಡೆಯುತ್ತಿದೆ.. ಸೋ, ಯೋಚಿಸಿ ಹೆಜ್ಜೆ ಇಡಿ..



Source link

Leave a Reply

Your email address will not be published. Required fields are marked *