Hajj Note : ಈ 100 ರೂಪಾಯಿ ನೋಟಿನ ಬೆಲೆ 56 ಲಕ್ಷ ! ನಿಮ್ಮನೆಯಲ್ಲೂ ಇದ್ಯಾ ಚೆಕ್ ಮಾಡಿ | 00 Rupee Hajj Note Note Sold For 56 Lakhs Know Why

Hajj Note : ಈ 100 ರೂಪಾಯಿ ನೋಟಿನ ಬೆಲೆ 56 ಲಕ್ಷ ! ನಿಮ್ಮನೆಯಲ್ಲೂ ಇದ್ಯಾ ಚೆಕ್ ಮಾಡಿ | 00 Rupee Hajj Note Note Sold For 56 Lakhs Know Why



Hajj Note : ಈ 100 ರೂಪಾಯಿ ನೋಟಿನ ಬೆಲೆ 56 ಲಕ್ಷ ! ನಿಮ್ಮನೆಯಲ್ಲೂ ಇದ್ಯಾ ಚೆಕ್ ಮಾಡಿ | 00 Rupee Hajj Note Note Sold For 56 Lakhs Know Why

ಹಳೆ ನೋಟುಗಳಿಗೆ ವಿಶೇಷ ಬೇಡಿಕೆ ಇದೆ. ಆನ್ಲೈನ್ ಗಳಲ್ಲಿ ಲಕ್ಷಾಂತರ ರೂಪಾಯಿ ನೀಡಿ ಅದನ್ನು ಖರೀದಿಸಲಾಗುತ್ತದೆ. ಈಗ ಭಾರತದಲ್ಲಿ ಮುದ್ರಣವಾಗ್ತಿದ್ದ, ಗಲ್ಫ್ ದೇಶಗಳಲ್ಲಿ ಮಾನ್ಯವಾಗಿದ್ದ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮ್ಮ ಮನೆಯಲ್ಲೂ ಈ ನೋಟಿದ್ಯಾ ಚೆಕ್ ಮಾಡ್ಕೊಳ್ಳಿ. 

ಹಳೆಯ ನೂರು ರೂಪಾಯಿ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ಇದು ಸತ್ಯ. 1950 ರ ದಶಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ 100 ರೂಪಾಯಿ ‘ಹಜ್ ನೋಟು’ ಲಂಡನ್ ಹರಾಜಿನಲ್ಲಿ 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಈ ನೋಟುಗಳು ಮಾನ್ಯವಾಗಿದ್ದವು. ಈ ಅಪರೂಪದ ನೋಟಿಗೆ ಈಗ್ಲೂ ಬೆಲೆ ಜಾಸ್ತಿ.

56 ಲಕ್ಷಕ್ಕೆ ಮಾರಾಟವಾದ 100ರ ನೋಟು

56 ಲಕ್ಷ ರೂಪಾಯಿಗೆ ಮಾರಾಟವಾದ ನೋಟಿನ ಸಿರಿಯಲ್ ಸಂಖ್ಯೆ HA 078400. ಈ ಹಜ್ ನೋಟುಗಳನ್ನು, ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುವ ಭಾರತೀಯ ತೀರ್ಥಯಾತ್ರಿಕರಿಗಾಗಿ ಆರ್ ಬಿಐ ಬಿಡುಗಡೆ ಮಾಡಿತ್ತು. ಯಾತ್ರಿಕರು ಹಜ್ ಯಾತ್ರೆಗಾಗಿ ಚಿನ್ನವನ್ನು ಖರೀದಿಸುತ್ತಿದ್ದರು. ಇದು ಭಾರತದಿಂದ ಅಕ್ರಮವಾಗಿ ಚಿನ್ನದ ರಫ್ತಿಗೆ ಕಾರಣವಾಯಿತು. ಅಕ್ರಮವಾಗಿ ಚಿನ್ನ ಖರೀದಿಸುವುದನ್ನು ತಡೆಯುವ ಉದ್ದೇಶದಿಂದ ಈ ಕರೆನ್ಸಿ ಜಾರಿಗೆ ಬಂದಿತ್ತು. ಈ ನೋಟು ಭಾರತದಲ್ಲಿ ಮಾನ್ಯವಾಗ್ತಿರಲಿಲ್ಲ. 1961 ರಲ್ಲಿ, ಕುವೈತ್ ತನ್ನದೇ ಆದ ಕರೆನ್ಸಿಯನ್ನು ಪರಿಚಯಿಸಿತು. ಇದನ್ನು ಶೀಘ್ರದಲ್ಲೇ ಇತರ ಗಲ್ಫ್ ರಾಷ್ಟ್ರಗಳು ಅಳವಡಿಸಿಕೊಂಡವು. ಇದರ ಪರಿಣಾಮವಾಗಿ, 1970 ರ ದಶಕದಲ್ಲಿ ಹಜ್ ನೋಟುಗಳ ಉತ್ಪಾದನೆ ನಿಂತುಹೋಯಿತು. ಇತ್ತೀಚಿನ ದಿನಗಳಲ್ಲಿ, ಈ ನೋಟುಗಳನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ. ಕರೆನ್ಸಿ ಸಂಗ್ರಹಕಾರರು, ಹೆಚ್ಚಿನ ಬೆಲೆ ನೀಡಿ ಇದನ್ನು ಖರೀದಿ ಮಾಡ್ತಿದ್ದಾರೆ.

Interesting Facts: ₹1 ನಾಣ್ಯ ತಯಾರಿಸಲು ₹1.11 ವೆಚ್ಚ! ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ ಸರ್ಕಾರ?

ಹಜ್ ನೋಟುಗಳ ವಿಶೇಷತೆ ಏನು?

ಹಜ್ ನೋಟ್ಗಳು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದವು. ಸೀರಿಯಲ್ ಸಂಖ್ಯೆ HA ನಿಂದ ಶುರುವಾಗ್ತಿತ್ತು. ಅದನ್ನು ಗುರುತಿಸುವುದು ಸುಲಭವಾಗಿತ್ತು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್ನಂತಹ ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಮಾನ್ಯವಾಗಿದ್ದವು. ಹಜ್ ನೋಟುಗಳ ಬಣ್ಣ ಸಾಮಾನ್ಯ ಭಾರತೀಯ ನೋಟುಗಳಿಗಿಂತ ಭಿನ್ನವಾಗಿತ್ತು.

ಹಿಂದಿನ ವರ್ಷವೂ ದುಬಾರಿ ಬೆಲೆಗೆ ಮಾರಾಟವಾಗಿದ್ದ ನೋಟು

ಈ ವರ್ಷ ಮಾತ್ರವಲ್ಲ ಮೇ 2024 ರಲ್ಲಿಯೂ ದುಬಾರಿ ಬೆಲೆಗೆ ಈ ನೋಟುಗಳು ಮಾರಾಟ ಆಗಿದ್ದವು. ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಎರಡು ಹಳೆಯ 10 ರೂಪಾಯಿ ನೋಟುಗಳು ಹೆಚ್ಚಿನ ಬೆಲೆಗೆ ಹರಾಜಾಗಿದ್ದವು. ಒಂದು ನೋಟು 6.90 ಲಕ್ಷ ರೂಪಾಯಿಗಳಿಗೆ ಮತ್ತು ಇನ್ನೊಂದು 5.80 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು.

ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು

ಆಗ ಹರಾಜಾಗಿದ್ದ ನೋಟುಗಳನ್ನು ಮೇ 25, 1918 ರಂದು ಮೊದಲನೆಯ ಮಹಾಯುದ್ಧದ ಅಂತಿಮ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ನೋಟುಗಳು ಜುಲೈ 2, 1918 ರಂದು ಜರ್ಮನ್ ಯು-ಬೋಟ್ನಿಂದ ಟಾರ್ಪಿಡೊ ಮಾಡಲ್ಪಟ್ಟ ಬ್ರಿಟಿಷ್ ಹಡಗು ಎಸ್ಎಸ್ ಶಿರಾಲಾದಲ್ಲಿತ್ತು. ಎಸ್ಎಸ್ ಶಿರಾಲಾ ಮುಳುಗುವುದು ಒಂದು ಮಹತ್ವದ ಐತಿಹಾಸಿಕ ಘಟನೆಯಾಗಿದೆ. ಆ ಯುಗದ ನೋಟುಗಳು ವಿಶಿಷ್ಟ ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅದಕ್ಕಾಗಿಯೇ ಅವು 21 ನೇ ಶತಮಾನದಲ್ಲಿ ಅಂತಹ ಹೆಚ್ಚಿನ ಬೆಲೆಗಳನ್ನು ಹೊಂದಿವೆ.



Source link

Leave a Reply

Your email address will not be published. Required fields are marked *