ಬೆಂಗಳೂರು, (ಫೆಬ್ರವರಿ 06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (ಬೆಂಗಳೂರು) ವಾಹನಗಳು ರಸ್ತೆಗಳು ಸರಿ ಇಲ್ಲ, ಇನ್ನೊಂದೆಡೆ ಮನಷ್ಯರು ಓಡುವ ಫುಟ್ ಪಾತ್ಗಳು ಸಹ ಸರಿ ಇಲ್ಲ. ಹೀಗಾಗಿ ಸಾರ್ವಜನಿಕರು ಫುಟ್ಪಾತ್ ಮೇಲೆ ಹುಡುಕುವಾಗ ಹುಷಾರಾಗಿರಬೇಕು. ಯಾಕಂದ್ರೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ದಿಢೀರ್ ಚರಂಡಿಗೆ ಬಿದ್ದಿದ್ದಾನೆ. ಬೆಂಗಳೂರಿನ ಸರ್ವಜ್ಞನಗರದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಶಾಲೆಯ ಮುಂದೆ ಕಾಮಗಾರಿ ಕೈಗೊಂಡಿದ್ದು, ಅದೇ ಮಾರ್ಗದಲ್ಲಿ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾಗ 1ನೇ ತರಗತಿಯ ವಿದ್ಯಾರ್ಥಿ ಚರಂಡಿಗೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಬಾಲಕನನ್ನು ಎತ್ತಿದ್ದು, ಅದೃಷ್ಟವಶಾತ್ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚರಂಡಿ ಸ್ಲ್ಯಾಬ್ ಕ್ಲೋಸ್ ಮಾಡದೇ ಹಾಗೆಯೇ ಬಿಡಲಾಗಿದೆ. ಜಲಮಂಡಳಿ ನಿರ್ಲಕ್ಷ್ಯದ ಬೆನ್ನಲ್ಲೇ ಜಿಬಿಎದಿಂದಲೂ ನಿರ್ಲಕ್ಷ್ಯತನದಿಂದ ಈ ದುರ್ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.