ತಮ್ಮದೇ ಹಳೆ ಕಲ್ಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ತಮ್ಮದೇ ಹಳೆ ಕಲ್ಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್


ಶಾರುಖ್ ಖಾನ್ (ಶಾರುಖ್ ಖಾನ್) ಪ್ರಸ್ತುತ ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಸತತ ಮೂರು ಬ್ಲಾಕ್ ಬಸ್ಟರ್ ನೀಡಿದ ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾ ಮೂಲಕ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡುವ ಭರವಸೆಯಲ್ಲಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಇದೀಗ ‘ಕಿಂಗ್’ ಬಳಿಕ ಶಾರುಖ್ ಖಾನ್ ನಟಿಸುತ್ತಿರುವ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದ್ದು, ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್ ನಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ.

2004 ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೈ ಹೂ ನಾ’ ಶಾರುಖ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ಕಲ್ಟ್ ಎನಿಸಿಕೊಂಡಿದೆ. ಆ ಸಿನಿಮಾದ ಹಾಸ್ಯ, ಪಾತ್ರಗಳ ಸ್ಟೈಲ್, ಹಾಡುಗಳಂತೂ ಜನಪ್ರಿಯ. ಶಾರುಖ್ ಖಾನ್ ಅವರ ಆಪ್ತ ಗೆಳತಿ ಫರಾಹ್ ಖಾನ್ ನಿರ್ದೇಶಿಸಿದ್ದ ‘ಮೈ ಹೂ ನಾ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ಕನ್ನೇ ಮಾಡಿತ್ತು. ಇದೀಗ ಶಾರುಖ್ ಖಾನ್ ‘ಮೈ ಹೂ ನ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ.

ಈಗ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫರಾಹ್ ಖಾನ್ ‘ಮೈ ಹೂ ನಾ 2’ ಸಿನಿಮಾಕ್ಕಾಗಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 2004ರ ‘ಮೈ ಹೂ ನಾ’ ಅಣ್ಣ-ತಮ್ಮನ ಕತೆ ಆಗುತ್ತಿದೆ. ಆದರೆ ಈ ಬಾರಿಯ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ವಿಭಿನ್ನ ಶೆಡ್‌ಗಳಿರುವ ಪಾತ್ರಗಳನ್ನು ಫರಾಹ್ ಖಾನ್ ಸೃಷ್ಟಿಸಿದ್ದು, ಕಿಂಗ್ ಖಾನ್‌ಗೆ ಈ ಐಡಿಯಾವನ್ನು ಸಿದ್ಧಪಡಿಸಲಾಗಿದೆ. ಶಾರುಖ್ ಕೂಡ ಈ ಹೊಸ ಪ್ರಯೋಗಕ್ಕೆ ಅತೀವ ಆಸಕ್ತಿ ತೋರಿಸಿದ್ದಾರೆ ಎನ್ನಬೇಡಿ. ಆಕಾಶ್ ಕೌಶಿಕ್ ಅವರು ಸಿನಿಮಾದ ಚಿತ್ರಕತೆ ರಚಿಸುತ್ತಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಮಗಳ ವರ್ಕೌಟ್ ವಿಡಿಯೋ ವೈರಲ್

2004ರ ‘ಮೈ ಹೂ ನಾ’ ಸಿನಿಮಾದ ರೀತಿಯೇ ಸೀಕ್ವೆಲ್ ಸಹ ದೇಶಭಕ್ತಿಯ ಹಿನ್ನೆಲೆಯನ್ನೇ. ಭಾರತಕ್ಕೆ ಎದುರಾಗುವ ಹೊಸ ಸವಾಲು ಮತ್ತು ಅದನ್ನು ಎದುರಿಸುವ ಮೇಜರ್ ರಾಮ್ ಪ್ರಸಾದ್ ಶರ್ಮಾ ಅವರ ಸಾಹಸಗಾಥೆ ಸಿನಿಮಾದಲ್ಲಿ ಇರಲಿದೆ. ಆದರೆ ಈ ಬಾರಿ ಸಾಹಸದ ಜೊತೆಗೆ ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಇಮ್ಮಡಿಯಾಗಿರಲಿವೆ. ಜೊತೆಗೆ ಹಾಡುಗಳು ಸಹ ಸಖತ್ ಆಗಿಯೇ ಇರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಶಾರುಖ್ ಖಾನ್ ಸದ್ಯ ತಮ್ಮ ‘ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಈ ಕೆಲಸಗಳು 2026 ರ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ, ನಂತರವೇ ಅವರು ‘ಮೈ ಹೂ ನಾ 2’ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್ ಕೇಳಲಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡ ಬಳಿಕವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *