Headlines

ಸಂತ್ರಸ್ತರ ಸೂರಿಗಾಗಿ ಕೊಟ್ಟ ‌ಜಾಗದಲ್ಲಿ ಮಸೀದಿ ನಿರ್ಮಾಣ: ಬಾಗಲಕೋಟೆಯಲ್ಲಿ ಭುಗಿಲೆದ್ದ ಆಕ್ರೋಶ

ಸಂತ್ರಸ್ತರ ಸೂರಿಗಾಗಿ ಕೊಟ್ಟ ‌ಜಾಗದಲ್ಲಿ ಮಸೀದಿ ನಿರ್ಮಾಣ: ಬಾಗಲಕೋಟೆಯಲ್ಲಿ ಭುಗಿಲೆದ್ದ ಆಕ್ರೋಶ


ಬಾಗಲಕೋಟೆ , (ಫೆಬ್ರವರಿ 06): ಬಾಗಲಕೋಟೆ ಜನರು ಆಲಮಟ್ಟಿ ಜಲಾಶಯಕ್ಕೆ ಮನೆ ಮಠ ಆಸ್ತಿ ಪಾಸ್ತಿ ಹಿರಿಯರ ಕನಸು ಎಲ್ಲರನ್ನು ಕೃಷ್ಣಾರ್ಪಣೆ ಮಾಡಿ ಬಿಟ್ಟವರು. ಆ ಸಂತ್ರಸ್ತರ ಪುನರ್ವಸತಿಗೆ ನಿರ್ಮಾಣವಾದ ನಗರವೇ ನವನಗರ. ಮನೆಗಳ ನಿರ್ಮಾಣಕ್ಕೆ ಅಂತಃ ಇರುವ ಜಾಗದಲ್ಲಿ (ಮಸೀದಿ) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೊದಲು ತಗಡಿನ ಶೆಡ್ ತರಹ ಕಟ್ಟಿ ಮುಂದೆ ಅವುಗಳನ್ನು ಮಸೀದಿಗಳನ್ನಾಗಿ ನಿರ್ಮಿಸಲಾಗಿದೆ. ಇದಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಹಿಂದು ಕಾರ್ಯಕರ್ತರು ಹೋರಾಟದ ಹಾದಿ ಹಿಡಿದಿದ್ದಾರೆ.

ನವನಗರದ ಮನೆಗಳಿಗೆ ಅಂತ ಸಂತ್ರಸ್ತರಿಗೆ ಹೆಚ್ಚಿನ ಹಣ ಕೊಟ್ಟು „ಖರೀದಿಸಲಾಗಲಿಲ್ಲ, ನಂತರ ಆ ಜಾಗದಲ್ಲಿ ಸದ್ದಿಲ್ಲದೇ ಮಸೀದಿ ಕಟ್ಟಡ ಕಾಮಗಾರಿಗಳು ಶುರುವಾಗ್ತಿವೆ.ಮೊದಲು ತಗಡಿನ ಶೆಡ್ ತರಹ ಕಟ್ಟಿದರು’ ಎಂದು ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೋರಾಟದ ಹಾದಿ ಹಿಡಿದಿದ್ದಾರೆ. ಏನು ತೊಂದರೆ.ಕೂಡಲೆ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಗಂಡನನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ?

ಚಂಡಿಗಢ ಮಾದರಿಯಲ್ಲಿ ನವನಗರವನ್ನು ನಿರ್ಮಾಣ ಮಾಡಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.ಇನ್ನೂ ಹಲವು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಆಗಬೇಕಿದೆ.ಇದರ ನಡುವೆ ಈಗ ಸೆಕ್ಟರ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ನವನಗರದಲ್ಲಿ ಬಾಗಲಕೋಟೆ ಪಟ್ಟಣದ ಅಭಿವೃದ್ಧಿ ಪ್ರಾಧಿಕಾರ ಅನಧಿಕೃತ ಮಾಸಿಕ ಸಂಸ್ಥೆಗಳ ಸ್ಥಾಪನೆಗೆ ಪರವಾನಿಗೆ ನೀಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಮಧ ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಎರಡು ದಿನದ ಹಿಂದೆ ಪ್ರತಿಭಟನೆ ನಡೆಸಿದ್ದು, ರಾಜಕೀಯ ಒತ್ತಡಕ್ಕೆ ಮಣಿದು ನಿಯಮಾವಳಿಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಬೇಕಾಬಿಟ್ಟಿ ಪರವಾನಗಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಿವೇಶನ ಜಾಗದಲ್ಲಿ ಹಳೆ ಬಾಗಲಕೋಟೆಯಲ್ಲೂ ಮಸೀದಿ ನಿರ್ಮಾಣ ಹಿನ್ನೆಲೆ ಕಳೆದ ವರ್ಷ ಜುಲೈನಲ್ಲಿ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಬಗ್ಗೆ ಮಾತಾಡಿದ ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ, ಇದಕ್ಕೆ ಬೇರೆ ಕಡೆಯಿಂದ ಫಂಡಿಂಗ್ ಆಗುತ್ತಿದೆ.ಫಂಡಿಂಗ್ ಆಗುತ್ತಿರೋದರಿಂದ ಮನೆ ಜಾಗ ಖರೀದಿ ಮಾಡಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಬಿಟಿಡಿಎ ಆರ್ ಓ ಕೇಳಿದ, ಒಂದೊಂದು ಸೆಕ್ಟರ್ ನಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಕಾರ್ನರ್ ಸೈಟ್ ಬಿಡಲಾಗಿದೆ. ಹಿಂದೆ ಬಿಟಿಡಿಎ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.ನಿವೇಶನಕ್ಕಾಗಿ ನೀಡಿದ ಜಾಗದಲ್ಲಿ ಮಸೀದಿ ಕಟ್ಟಡದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಕಟ್ಟಡದ ಅನುಮತಿ ಪಡೆದು ಕಟ್ಟಬೇಕು.ಇಂಜಿನಿಯರಿಂಗ್ ಸೆಕ್ಷನ್ ಅಧಿಕಾರಿಗಳನ್ನು ಪರೀಕ್ಷಿಸಿ ಪರಿಶೀಲನೆ ನಡೆಸಿ ಬಿಟಿಡಿಎ ಮುಖ್ಯ ಇಂಜಿನಿಯರ್ ಅವರಿಗೆ ಮಾಹಿತಿ ನೀಡಲಾಗುವುದು.

ಒಟ್ಟಾರೆ ಅನಧಿಕೃತ ಸಭೆಗಳಿಗೆ ಸ್ಥಳೀಯರು ಹಿಡಿದಿದ್ದು, ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ. ಹೀಗಾಗಿ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *