15ರ ಪೋರನ ವೈಭವದ ಆಟಕ್ಕ ಒಲಿದ ಕಿರೀಟ, ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂತಿ ದಾಖಲೆಯ ಆಟಕ್ಕೆ ಹಲವು ದಾಖಲೆ ಜೊತೆಗೆ ವಿಶ್ವಕಪ್ ಟ್ರೋಫಿ ಒಲಿದು ಬಂದಿದೆ. ಭಾರತ 6ನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದೆ.

ವಯಸ್ಸು ಕೇವಲ 14, ವೈಭವ್ ಸೂರ್ಯವಂಶಿ ಅಬ್ಬರದ ಆಟಕ್ಕೆ ಹಲವು ದಾಖಲೆಗಳು ಪುಡಿ ಪುಡಿಯಾಗಿದೆ. ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತದಲ್ಲಿ 175 ರನ್ ಚಚ್ಚಿದ ದಾಖಲೆ ಬೆರೆದಿದ್ದಾನೆ. 15 ಬೌಂಡರಿ , 15 ಸಿಕ್ಸರ್ ಅಬ್ಬರಕ್ಕೆ ಇಂಗ್ಲೆಂಡ್ ಸುಸ್ತಾಗಿತ್ತು. ಭಾರತ ನೀಡಿದ 412 ರನ್ ಟಾರ್ಗೆಟ್ ಚೇಸ್ ಮಾಡಲು ವಿಫಲವಾದ ಇಂಗ್ಲೆಂಡ್ 311 ರನ್ ಸಿಡಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ 100 ರನ್ ಭರ್ಜರಿ ಗೆಲುವು ದಾಖಲಿಸಿದೆ. 6ನೇ ಅಂಡರ್ 19 ಟ್ರೋಫಿ ಗೆದ್ದು ದಾಖಲೆ ಬರೆದಿದೆ.

ಬ್ಯಾಟಿಂಗ್ ಫ್ರೆಂಡ್ಲಿ ಹರಾರೆ ಪಿಚ್ನಲ್ಲಿ ಇಂಗ್ಲೆಂಡ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಬೆನ್ ಡಾಕಿನ್ಸ್ 66 ರನ್, ಬೆನ್ ಮೇಯ್ಸ್ 45, ಥಾಮಸ್ ರಿಯೂ 31 ರನ್ ಕಾಣಿಕೆ ನೀಡಿದರು. ಇತ್ತ ಸೆಲೆಬ್ ಫಾಲ್ಕೋನರ್ ಭಾರತೀಯ ಬೌಲರ್ಗಳಿಗೆ ತಲೆನೋವಾಗಿದ್ದರು. ಸಿಕ್ಸರ್ ಮೂಲಕವೇ ಅಬ್ಬರಿಸಿದ್ದರು. ಫಾಲ್ಕೋನರ್ 115 ರನ್ ಸಿಡಿಸಿ ಔಟಾಗೋ ಮೂಲಕ ಇಂಗ್ಲೆಂಡ್ 311 ರನ್ಗೆ ಆಲೌಟ್ ಆಯಿತು.

ವೈಭವ್ ಸೂರ್ಯವಂಶಿ 175 ರನ್ ಸಿಡಿಸಿದ್ದರೆ, ನಾಯಕ ಆಯುಷ್ ಮರಾಠೆ 53ರನ್, ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಅಭಿಗ್ಯಾನ್ ಕುಂಡು 40, ಕಾನಿಷ್ಕ್ ಚೌವ್ಹಾನ್ 37 ರನ್ ನೆರವಿನಿಂದ ಭಾರತ ಭಾರತ 9 ವಿಕೆಟ್ ಕಳೆದುಕೊಂಡು 411 ರನ್ ಸಿಡಿಸಿತು. ಇದು ಅಂಡರ್ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದ ಗರಿಷ್ಠ ಮೊತ್ತಗಳ ದಾಖಲೆ ಪಟ್ಟಿಯಲ್ಲಿ ಸೇರಿಕೊಂಡಿದೆ.

ವೈಭವ್ ಸೂರ್ಯವಂಶಿ ಫೈನಲ್ ಪಂದ್ದಲ್ಲಿ 15 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಅಂಡರ್ 19 ವಿಶ್ವಕಪ್ ಟೂರ್ನಿಯ ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ಮಿಚೆಲ್ ಹಿಲ್ ಸಿಡಿಸಿದ 12 ಸಿಕ್ಸರ್ ದಾಖಲೆಯನ್ನು ಸೂರ್ಯವಂಶಿ ಮುರಿದಿದ್ದಾರೆ.

ವೈಭವ್ ಸೂರ್ಯವಂಶಿ ಅಂಡರ್ ವಿಶ್ವಕಪ್ ಟೂರ್ನಿಯ 7 ಇನ್ನಿಂಗ್ಸ್ಗಳಲ್ಲಿ 439 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಸೂರ್ಯವಂಶಿಯ 175 ರನ್ ಅಬ್ಬರ ಹೊಸ ಇತಿಹಾಸ ಬರೆದಿದೆ. ವೈಭವ್ ಮಹತ್ವದ ಪಂದ್ಯದಲ್ಲೂ ಫಾರ್ಮ್ ಮುಂದುವರಿಸಿದ್ದಾರೆ.

Source link
15ರ ಪೋರನ ವೈಭವದ ಆಟಕ್ಕ ಒಲಿದ ಕಿರೀಟ, ಭಾರತಕ್ಕೆ 6ನೇ U19 ವಿಶ್ವಕಪ್ ಟ್ರೋಫಿ