Headlines

AR Rahman ಕೋಮುವಾದಿ ವಿವಾದ: ಜನರು ಬೊಗಳೋಕೆ ಶುರು ಮಾಡಿದ್ದಾರೆ: ಟೀಕಿಸಿದ PraKash Raj! | Actor Prakash Raj On Ar Rahman And Kangana Ranaut Communal Controversy

AR Rahman ಕೋಮುವಾದಿ ವಿವಾದ: ಜನರು ಬೊಗಳೋಕೆ ಶುರು ಮಾಡಿದ್ದಾರೆ: ಟೀಕಿಸಿದ PraKash Raj! | Actor Prakash Raj On Ar Rahman And Kangana Ranaut Communal Controversy



AR Rahman ಕೋಮುವಾದಿ ವಿವಾದ: ಜನರು ಬೊಗಳೋಕೆ ಶುರು ಮಾಡಿದ್ದಾರೆ: ಟೀಕಿಸಿದ PraKash Raj! | Actor Prakash Raj On Ar Rahman And Kangana Ranaut Communal Controversy

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕುರಿತ ಕಂಗನಾ ರಣಾವತ್ ಹೇಳಿಕೆಗೆ ನಟ ಪ್ರಕಾಶ್ ರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೆಹಮಾನ್ ಅವರನ್ನು ದೇಶದ್ರೋಹಿ ಎಂದವರನ್ನು ಟೀಕಿಸಿದ್ದು, ಈ ಬೆಳವಣಿಗೆಯನ್ನು ‘ಬೊಗಳುವಿಕೆ’ ಎಂದು ಕರೆದಿದ್ದಾರೆ.

ಕೋಮುವಾದಿ ವಿಚಾರಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದು ಸಂಗೀತ ನಿರ್ದೇಶಕ ಎ ಆರ್‌ ರೆಹಮಾನ್‌ ಹೇಳಿದ್ದರು. ಈ ಬಗ್ಗೆ ನಟಿ ಕಂಗನಾ ರಣಾವತ್‌ ಪ್ರತಿಕ್ರಿಯೆ ನೀಡಿದ್ದು, ಭಾರೀ ಚರ್ಚೆಯನ್ನುಂಟು ಮಾಡಿತ್ತು. ಈ ಬಗ್ಗೆ ಪ್ರಕಾಶ್‌ ರಾಜ್‌ ಮಾತನಾಡಿದ್ದಾರೆ. ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಿದ್ದಾರೆ.

ಕೆಲಸವನ್ನು ಮೀರಿ ಬೆಳೆದಿದ್ದಾರೆ

ಉಸಿರುಗಟ್ಟಿಸುವ ಭಿನ್ನಾಭಿಪ್ರಾಯ ಎಂಬ ಟಾಪಿಕ್‌ ಅಡಿಯಲ್ಲಿ ಪ್ರಕಾಶ್‌ ರಾಜ್‌ ಅವರು ಮಾತನಾಡಿದ್ದಾರೆ. “ಎ ಆರ್‌ರೆಹಮಾನ್‌ ಅವರ ವಿಚಾರದಲ್ಲಿ ಏನಾಗ್ತಿದೆ? ಸಮಾಜದ ಪ್ರತಿಕ್ರಿಯೆ ಏನು? ‘ಮಾ ತುಜೆ ಸಲಾಂ’, ‘ಜೈ ಹೋ’ ಹಾಡಿಗೆ ಎರಡು ಆಸ್ಕರ್‌ ಪ್ರಶಸ್ತಿ ಸಿಕ್ಕಿದಾಗ ಖುಷಿಯಿಂದ ಸಂಭ್ರಮಿಸಿದ್ದೀರಿ. ಅವರು ಹಾಗೆ ಜನರಲ್‌ ಆಗಿ ಮಾತನಾಡಿದ್ದಾರೆ. ಅವರು ಕೆಲಸಕ್ಕಾಗಿ ಎಲ್ಲಿಯೂ ಅಲೆದಿಲ್ಲ. ಅದಕ್ಕೂ ಮೀರಿ ಅವರಿದ್ದಾರೆ ಎಂದು ನಿಮಗೆ ಮಾಹಿತಿ ಇರಬೇಕು. ಇಧೇ ಸತ್ಯ, ಆದರೆ ಜನರು ಬೊಗಳೋಕೆ ಶುರು ಮಾಡಿದ್ರು” ಎಂದು ಅವರು ಹೇಳಿದ್ದಾರೆ.

ರೆಹಮಾನ್‌ ವಿವಾದಾತ್ಮಕ ಹೇಳಿಕೆ ಏನು?

ಬಿಬಿಸಿ ಜೊತೆಗಿನ ಸಂದರ್ಶನದಲ್ಲಿ ಎ ಆರ್‌ ರೆಹಮಾನ್‌ ಮಾತನಾಡಿ, “ಕೋಮುವಾದಿ ವಿಚಾರಗಳಿಗೋಸ್ಕರವೇ ಹಿಂದಿ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಇವೆ” ಎಂದಿದ್ದರು. ಈ ಬಗ್ಗೆ ದೊಡ್ಡ ಚರ್ಚೆ ಆಯಿತು, ಅನೇಕರು ರೆಹಮಾನ್‌ಅವರನ್ನು ದೂರಿದರು.

ಪ್ರಕಾಶ್‌ ರಾಜ್‌ ಏನಂದ್ರು?

ಈ ಬಗ್ಗೆ ಪ್ರಕಾಶ್‌ ರಾಜ್‌ ಮಾತನಾಡಿ, “ಬೊಳಗುವುದನ್ನು ನೋಡಿ. ಓರ್ವ ಲೇಡಿ ಡೈರೆಕ್ಟರ್‌ ಈ ಬಗ್ಗೆ ಮಾತನಾಡುತ್ತ, ತನ್ನ ಸಿನಿಮಾಕ್ಕೆ ಕೆಲಸ ಮಾಡಿಲ್ಲ ಎಂದು ದೇಶದ್ರೋಹಿ ಎಂದು ಮಾತನಾಡುತ್ತಾರೆ. ಕಂಗನಾ ರಣಾವರ್‌ ಅವರು ಎಮರ್ಜೆನ್ಸಿ ಎನ್ನುವ ಸಿನಿಮಾ ಮಾಡಿದ್ದು ಅದನ್ನು ಕ್ಲಾಸಿಕ್‌ ಎಂದು ಕರೆದುಕೊಳ್ತಾರೆ. ರೆಹಮಾನ್‌ ಇದಕ್ಕೆ ಕೆಲಸ ಮಾಡಿಲ್ಲ. ನೋಡಿ ನಿಮ್ಮ ಸುತ್ತ ಮುತ್ತ ಏನಾಗ್ತಿದೆ ಎಂದು” ಎಂದಿದ್ದಾರೆ.

ಕಂಗನಾ ರಣಾವತ್‌ ಹೇಳಿದ್ದೇನು?

ರೆಹಮಾನ್ ಅವರೇ, ನಾನು ಕೇಸರಿ ಪಕ್ಷವನ್ನು ಬೆಂಬಲಿಸುವೆ ಎಂದು ಬಾಲಿವುಡ್‌ನಲ್ಲಿ ಬೇದಭಾವ ಮಾಡುತ್ತಾರೆ. ನಿಮ್ಮಷ್ಟು ಪೂರ್ವಾಗ್ರಹ ಪೀಡಿತ, ದ್ವೇಷಯುತವಾದ ವ್ಯಕ್ತಿಯನ್ನು ನಾನು ನೋಡಿಲ್ಲ. ನಾನು ‘ಎಮರ್ಜೆನ್ಸಿ’ ಸಿನಿಮಾದ ಕಥೆ ಹೇಳಲು ಬಂದಾಗ ನೀವು ನನ್ನನ್ನು ಭೇಟಿ ಮಾಡಲು ಸಹ ನಿರಾಕರಿಸಿದ್ದೀರಿ. ನೀವು ದ್ವೇಷದಿಂದ ಕುರುಡಾಗಿದ್ದೀರಿ. ಪ್ರೊಪಗಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಎಂದು ಹೇಳಿದರು. ಎಲ್ಲ ವಿಮರ್ಶಕರಿಂದ ಎಮರ್ಜೆನ್ಸಿ ಸಿನಿಮಾವು ಮಾಸ್ಟರ್ ಪೀಸ್‌ಎಂದು ಕರೆಸಿಕೊಳ್ತು. ವಿರೋಧ ಪಕ್ಷಗಳು ಕೂಡ, ಸಿನಿಮಾ ಬ್ಯಾಲೆನ್ಸ್‌ ಆಗಿತ್ತು ಎಂದು ಹೊಗಳಿ ಪತ್ರ ಬರೆದರು.

ತನ್ನ ಹೇಳಿಕೆ ವೈರಲ್‌ ಆದ ಬಳಿಕ ರೆಹಮಾನ್‌ ಅವರು ವಿಡಿಯೋ ಮಾಡಿದ್ದು, “ಸಂಸ್ಕೃತಿಯನ್ನು ಸಂಭ್ರಮಿಸುವ, ಸಂವಹನ ನಡೆಸುವ, ಗೌರವಿಸುವ ಸಾಧನವೇ ಸಂಗೀತವಾಗಿದೆ. ಭಾರತ ನನ್ನ ಸ್ಪೂರ್ತಿ, ನನ್ನ ಶಿಕ್ಷಕ, ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲಾಗುವುದು. ನಾನು ಯಾರಿಗೂ ನೋವು ಉಂಟು ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ” ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *