Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 7ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 7ರ ದಿನಭವಿಷ್ಯ


ಜನ್ಮಸಂಖ್ಯೆ ೭, ೮, ೯ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿ ಇರುವಂತಹ ನಾಯಕತ್ವದ ಗುಣಗಳು ಇತರರಿಗೂ ಅನುಭವಕ್ಕೆ ಬರುವಂಥ ದಿನ ಇದಾಗಿದೆ. ಉದ್ಯೋಗಸ್ಥರಲ್ಲಿ ನೀವು ಕೆಲಸ ಮಾಡುವ ಸ್ಥಳ- ಕಚೇರಿಯಲ್ಲಿ ನಿಮ್ಮ ನಿರ್ಧಾರಗಳು ಮತ್ತು ಸಲಹೆಗಳಿಗೆ ಮನ್ನಣೆ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗಲಿದೆ, ಆರ್ಥಿಕವಾಗಿಯೂ ಸದೃಢರಾಗುವಿರಿ. ದೀರ್ಘಕಾಲ ಸಾಲವೊಂದು ತೀರಿಸುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೌಟುಂಬಿಕ ವಿಚಾರಗಳಲ್ಲಿ ನಡೆಯುವಂಥ ಮಾತುಕತೆಗಳಲ್ಲಿ ನೀವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸಿ. ಇನ್ನು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ನೆನಪಲ್ಲಿ ಇರಬೇಕಾದದ್ದು ಏನೆಂದರೆ, ನಿಮ್ಮ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಅಥವಾ ಇತರರ ಮೇಲಿನ ಅತಿಯಾದ ನಿಯಂತ್ರಣದಂತೆ ಕಾಣಿಸಬಹುದು. ಬೇರೆಯವರ ಅಭಿಪ್ರಾಯಗಳನ್ನು ಸಹ ಮುಕ್ತ ಮನಸ್ಸಿನಿಂದ ಆಲಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಒಂದು ವಿಚಾರಕ್ಕೆ ಅದು ಆಗಲೇಬೇಕು ಎಂದು ವಿಪರೀತ ಪಟ್ಟು ಹಿಡಿದು ಕೂರುವುದು ಒಳ್ಳೆಯದಲ್ಲ. ಉದ್ಯೋಗ ಸ್ಥಳದಲ್ಲಿ ನೀವು ತರುವುದಕ್ಕೆ ಬಯಸಿದಂತಹ ಬದಲಾವಣೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಮನಸ್ಸಿಗೆ ಬೇಸರ ಆಗಲಿದೆ. ಹಳೇ ಸಾಲದ ವಸೂಲಿ ಮಾಡಬೇಕು ಎಂದಿದ್ದಲ್ಲಿ ಈ ದಿನ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *