ಜಾತ್ರೆಗೆ ಕಡಿಯಲು ತಂದಿದ್ದ ಆಡು, ರೈತನಿಗೆ ಒಲಿದ ಅಚ್ಚರಿಯ ಅದೃಷ್ಟ! ಜಾಕ್‌ಪಾಟ್‌ ಹೊಡೆದ ರೈತನ ಮನೆಗೆ ಜನವೋ ಜನ! | Farmer Luck Turns Overnight As Goat Gives Birth To Six Lambs In Chikkamagaluru

ಚಿಕ್ಕಮಗಳೂರಿನ ಚಂದ್ರಕಟ್ಟೆ ನಿವಾಸಿ ಯುವ ರೈತ ಸಂತೋಷ್, ಜಾತ್ರೆಗೆ ಕಡಿಯಲು ತಂದಿದ್ದ  ಆಡು ಒಂದು ಗರ್ಭಿಣಿ ಎಂಬ ಅನುಮಾನದಿಂದ ಅದನ್ನು ಉಳಿಸಿಕೊಂಡಿದ್ದರು. ಇದೀಗ ಆ ಕುರಿಯು ಏಕಕಾಲಕ್ಕೆ ಆರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ರೈತನಿಗೆ ಅಚ್ಚರಿಯ ಜೊತೆಗೆ ಅದೃಷ್ಟವನ್ನು ತಂದಿದೆ.

ಚಿಕ್ಕಮಗಳೂರು: ನಗರದ ಹೊರಹೊಲಯದ ಚಂದ್ರಕಟ್ಟೆ ಪ್ರದೇಶದಲ್ಲಿ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಜಾತ್ರೆಗೆ ಕಡಿಯುವ ಉದ್ದೇಶದಿಂದ ತಂದಿದ್ದ ಆಡುಯೊಂದು ಏಕಕಾಲಕ್ಕೆ 6 ಮರಿಗಳನ್ನು ಹೆತ್ತು, ಯುವ ರೈತನಿಗೆ ಅಕ್ಷರಶಃ ‘ಲಾಟರಿ’ ಮಗುಚಿದಂತಾಗಿದೆ.

ಚಂದ್ರಕಟ್ಟೆ ನಿವಾಸಿ ಯುವ ರೈತ ಸಂತೋಷ್ ಎಂಬವರು ಜಾತ್ರೆಯ ಅಂಗವಾಗಿ ಎರಡು ಆಡುಗಳನ್ನು ಕಡಿಯಲು ತಂದಿದ್ದರು. ಈ ವೇಳೆ ಒಂದು ಆಡನ್ನು ಕಡಿದರು, ಇನ್ನೊಂದು ಆಡು ಗರ್ಭಿಣಿಯಾಗಿರಬಹುದು ಎಂಬ ಅನುಮಾನದಿಂದ ಅದನ್ನು ಕಡಿಯದೆ ಹಾಗೆ ಉಳಿಸಿಕೊಂಡಿದ್ದರು. ರೈತನ ಈ ನಿರ್ಧಾರವೇ ಇದೀಗ ಅವನ ಪಾಲಿಗೆ ವರವಾಗಿ ಪರಿಣಮಿಸಿದೆ.

ಬರೋಬ್ಬರಿ 6 ಮರಿ ಹಾಕಿದ ಆಡು

ಇಂದು ಬೆಳಗ್ಗೆ ಆ ಆಡು ಒಂದೇ ಸಮಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ, ಇದನ್ನು ಕಂಡು ರೈತ ಸಂತೋಷ್ ಸೇರಿದಂತೆ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಅಪರೂಪವಾಗಿ ಕಂಡುಬರುವ ಈ ಘಟನೆಗೆ ಸಾಕ್ಷಿಯಾದ ಆಡು ನಾಲ್ಕು ಹೆಣ್ಣು ಮತ್ತು ಎರಡು ಗಂಡು ಮರಿಗಳಿಗೆ ಜನ್ಮ ನೀಡಿದ್ದು, ಎಲ್ಲಾ ಆರು ಮರಿಗಳು ಸಂಪೂರ್ಣ ಆರೋಗ್ಯವಾಗಿವೆ.

ಒಂದೇ ಆಡು ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕುತೂಹಲಿಗಳು ಆಡು ಮತ್ತು ಮರಿಗಳನ್ನು ನೋಡಲು ಚಂದ್ರಕಟ್ಟೆಗೆ ಭೇಟಿ ನೀಡುತ್ತಿದ್ದಾರೆ. ಕೆಲವರು ಇದನ್ನು ದೈವದ ವರವೆಂದು, ಇನ್ನೂ ಕೆಲವರು ರೈತನ ಭಾಗ್ಯವೆಂದು ಹೇಳಿಕೊಳ್ಳುತ್ತಿದ್ದಾರೆ.

ಎರಡು ಮರಿಗಳನ್ನು ಹಾಕುವುದೇ ಹೆಚ್ಚು!

ಸಾಮಾನ್ಯವಾಗಿ ಒಂದು ಆಡು ಒಂದು ಅಥವಾ ಎರಡು ಮರಿಗಳನ್ನು ಮಾತ್ರ ಹಾಕುತ್ತದೆ, ಈ ರೀತಿಯ ಅಪರೂಪದ ಘಟನೆ ಕೃಷಿಕ ಸಮುದಾಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಜಾತ್ರೆಗೆ ಕಡಿಯಲು ತಂದ ಆಡುಯೇ ರೈತನ ಜೀವನಕ್ಕೆ ಹೊಸ ಆಸೆಯ ಸಂಕೇತವಾಗಿ ಪರಿಣಮಿಸಿದ್ದು, ಸಂತೋಷ್ ಅವರ ಕುಟುಂಬದಲ್ಲಿ ಸಂತಸದ ವಾತಾವರಣ ಮನೆಮಾಡಿದೆ. ಒಟ್ಟಾರೆ, ಚಿಕ್ಕಮಗಳೂರು ಹೊರಹೊಲಯದ ಚಂದ್ರಕಟ್ಟೆಯಲ್ಲಿ ನಡೆದ ಈ ಅಪರೂಪದ ಘಟನೆ, ಪ್ರಕೃತಿಯ ಅಚ್ಚರಿಯನ್ನೂ ರೈತನ ಭಾಗ್ಯವನ್ನೂ ಒಂದೇ ವೇಳೆ ತೋರಿಸುವಂತಾಗಿದೆ.

Source link

Leave a Reply

Your email address will not be published. Required fields are marked *