Headlines

‘ಆಲ್ಫಾ’ ಟ್ರೇಲರ್​ನಲ್ಲಿ ಗಮನ ಸೆಳೆದ ಹೊಸ ಪ್ರತಿಭೆ ಹೇಮಂತ್; ಕಾರ್ತಿಕ್​ ಮಹೇಶ್​​ಗೆ ನೆಗೆಟಿವ್ ಪಾತ್ರ

‘ಆಲ್ಫಾ’ ಟ್ರೇಲರ್​ನಲ್ಲಿ ಗಮನ ಸೆಳೆದ ಹೊಸ ಪ್ರತಿಭೆ ಹೇಮಂತ್; ಕಾರ್ತಿಕ್​ ಮಹೇಶ್​​ಗೆ ನೆಗೆಟಿವ್ ಪಾತ್ರ


ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಈಗ ಹೇಮಂತ್ ಕುಮಾರ್ ಹೆಸರಿನ ಹೊಸ ಪ್ರತಿಭೆ ‘ಆಲ್ಫಾ’ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಫೆಬ್ರವರಿ 20 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಸಖತ್ ರಾ ಆಗಿದೆ.

ಹೇಮಂತ್ ಅವರು ‘ಆಲ್ಫಾ’ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರು ಫೈಟ್, ಡ್ಯಾನ್ಸ್ ಶ್ರದ್ಧೆಯಿಂದ ಕಲಿತಿರೋದು ಟ್ರೇಲರ್ ಅಲ್ಲಿ ನೋಡಿದರೆ ಗೊತ್ತಾಗುತ್ತದೆ. ಟ್ರೇಲರ್ ನೋಡಿದರೆ ಡ್ರಗ್ಸ್ ಹಾಗೂ ಇತರ ವಿಷಯಗಳ ಬಗ್ಗೆ ನಿರ್ದೇಶಕರು ಹೇಳಲು ಹೊರಟಂತೆ ಇದೆ. ಈ ಚಿತ್ರದಲ್ಲಿ ಒಂದು ಸುಂದರ ಪ್ರೇಮಕಥೆ ಕೂಡ ಇದೆ.

ಇದನ್ನೂ ಓದಿ: ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾ ಫಸ್ಟ್ ಲುಕ್; ಹೀರೋ ಆದ ಹೇಮಂತ್ ಕುಮಾರ್

‘ಆಲ್ಫಾ’ ಸಿನಿಮಾದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ ಎಂದಾಗಲೇ ಸಾಕಷ್ಟು ಚರ್ಚೆಗಳು ನಡೆದವು. ಈಗ ಸಿನಿಮಾದಲ್ಲಿ ಅವರ ಅವತಾರ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಅವರದ್ದು ನೆಗೆಟಿವ್ ಪಾತ್ರ ಎಂಬುದು ಸ್ಪಷ್ಟವಾಗಿದೆ. ಆದರೆ, ಪಾತ್ರ ಪ್ರಾಮುಖ್ಯತೆ ಇದೆ ಎಂಬ ಕಾರಣಕ್ಕೆ ಅವರು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಹೇಮಂತ್ ಕುಮಾರ್ ತಂದೆ ಆನಂದ್ ಕುಮಾರ್ ಅವರ ಮಗನಿಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿಜಯ್ ಎನ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹೇಮಂತ್ ಜೊತೆ ಅಯಾನಾ, ಗೋಪಿಕಾ ಸುರೇಶ್, ಅಚ್ಯುತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್, ರಮೇಶ್ ಇಂದಿರಾ, ಗಿರಿರಾಜ್, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮಾಸ್ತಿ ಅವರು ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ. ಫೆಬ್ರವರಿ 20 ರಂದು ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *