ನವರತ್ನಗಳಲ್ಲಿ ಹವಳವು ಬಹಳ ವಿಶೇಷವಾದ ಒಂದು ಅದೃಷ್ಟ, ಶಕ್ತಿ ಮತ್ತು ಶುಭಕಾರ್ಯಗಳನ್ನು ನೀಡುವ ರತ್ನವಾಗಿದೆ. ಅದರಂತೆ ಹವಳವನ್ನು ಧಾರಣೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿರ್ಮಿಸಿದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ.
ಗುರೂಜಿಯವರು ಹೇಳುವಂತೆ, ಕನಿಷ್ಠ ಎರಡು ಕ್ಯಾರೆಟ್ನ ಶುದ್ಧ ಹವಳವನ್ನು ತಮ್ಮ ಜಾತಕಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು. ಇದನ್ನು ಸೂರ್ಯನ ಬೆರಳು ಅಂದರೆ ಉಂಗುರದ ಬೆರಳಿನಲ್ಲಿ ಧರಿಸಬೇಕು. ಹವಳದ ಉಂಗುರವು ಕೆಳಭಾಗದಲ್ಲಿ ತೆರೆದಿರಬೇಕು. ಮಂಗಳವಾರದ ದಿನ ಹಿರಿಯರ ಮುಖಾಂತರ – ತಂದೆ-ತಾಯಿ, ಗುರುಗಳು, ಪುರೋಹಿತರು ಅಥವಾ ಶಾಸ್ತ್ರಿಗಳ ಕೈಯಿಂದ – ಹಾಲಿನಲ್ಲಿ ಅಭಿಷೇಕ ಮಾಡಿ ಧಾರಣೆ ಮಾಡುವುದು ಬಹಳ ಶುಭ. ರತ್ನಶಾಸ್ತ್ರದಲ್ಲಿ ಡೈಮಂಡ್ಗಿಂತ ಹವಳಕ್ಕೆ ಪ್ರಥಮ ಪ್ರಾಶಸ್ತ್ಯಬೇಕು. ಇದು ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಭಯವನ್ನು ದೂರ ಮಾಡುತ್ತದೆ.
ಪೊಲೀಸ್ ಇಲಾಖೆಯವರು, ಆರ್ಮಿ ಸಿಬ್ಬಂದಿ, ರಾಜಕೀಯ ವ್ಯಕ್ತಿಗಳು, ನಾಯಕತ್ವದ ಗುಣ ಬೇಕಾಗಿರುವವರು, ಗಣಿಗಾರಿಕೆ ಮತ್ತು ಕಷ್ಟಕರ ಉದ್ಯೋಗದಲ್ಲಿರುವವರಿಗೆ ಹವಳ ಧಾರಣೆ ತುಂಬಾ ಒಳ್ಳೆಯದು. ಆದರೆ ಎಲ್ಲಾ ರಾಶಿಯವರಿಗೂ ಹವಳ ಸೂಕ್ತವಲ್ಲ. ವೃಷಭ, ಕುಂಭ ಮತ್ತು ತುಲಾ ರಾಶಿಅವರು ಹವಳವನ್ನು ಧರಿಸಬಾರದು. ವೃಷಭ ರಾಶಿಯವರು ಧರಿಸಿದರೆ ಮಾನಸಿಕ ಚಂಚಲತೆ ಹೆಚ್ಚಾಗಬಹುದು. ಕುಂಭ ಮತ್ತು ತುಲಾ ರಾಶಿಯವರಿಗೆ ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಹಣವಿದೆಯೆಂದು ಹತ್ತು ಬೆರಳುಗಳಿಗೆ ಹತ್ತು ಉಂಗುರ ಅಥವಾ ಎಲ್ಲಾ ನವರತ್ನಗಳನ್ನು ಧರಿಸುವುದು ಅಸಮರ್ಪಕ. ಇದು ಶಾರೀರಿಕವಾಗಿ ಕುಗ್ಗಿಸುವಂತಹ ಅಡ್ಡ ಪರಿಣಾಮಗಳನ್ನು ಬೀರಬಹುದು.
ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ!
ಹವಳವನ್ನು ಧರಿಸುವಾಗ, “ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಂ” ಎಂಬ ಮಂತ್ರವನ್ನು 21 ಬಾರಿ ಜಪಿಸಬೇಕು. ಇದನ್ನು ಸುಬ್ರಹ್ಮಣ್ಯನ ಪಾದದಲ್ಲಿಟ್ಟು ಅಥವಾ ಮನೆಯಲ್ಲಿ ಗುರು ಹಿರಿಯರ ಮೂಲಕ ಹಾಲಿನಲ್ಲಿ ಅಭಿಷೇಕ ಮಾಡಿ ಮಂಗಳವಾರದಂದು ಧರಿಸುವುದು ಅತ್ಯಂತ ಶುಭಕರ ಎಂದು ಗುರೂಜಿ ಸಲಹೆ ನೀಡಿದರು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ