gold Silver copper ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ | Move Over Gold Silver Copper Set For Massive Demand Surge In India

gold Silver copper ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ | Move Over Gold Silver Copper Set For Massive Demand Surge In India



gold Silver copper ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ | Move Over Gold Silver Copper Set For Massive Demand Surge In India

ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ ನೀಡಿದೆ. ಈ ಲೋಹಕ್ಕೆ ಬಾರಿ ಬೇಡಿಕೆ ವ್ಯಕ್ತವಾಗಲಿದೆ. ಹೂಡಿಕೆ ದೃಷ್ಟಿಯಿಂದಲೂ ಈ ಲೋಹ ಉತ್ತಮ ಆಯ್ಕೆಯಾಗಿದೆ. 

ನವದೆಹಲಿ (ಫೆ.06) ಭಾರತ ಸೇರಿದಂತೆ ಜಾಗತಿಕವಾಗಿ ಚಿನ್ನ ಹಾಗೂ ಬೆಳ್ಳಿ ದರ ಭಾರಿ ಏರಿಕೆ ಕಂಡು ಕೋಲಾಹಲ ಸೃಷ್ಟಿಸಿದೆ. ಕಳೆದ ಕೆಲ ದಿನಗಳಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡರೂ ದುಬಾರಿ ಹಣೆ ಪಟ್ಟಿ ದೂರವಾಗಿಲ್ಲ. ಚಿನ್ನ ಹಾಗೂ ಬೆಳ್ಳಿ ಬೆಲೆ ತ್ವರಿತಗತಿಯಲ್ಲಿ ಏರಿಕೆ ಕಾಣುತ್ತಿದೆ. ಆದರೆ ICRA (ಇನ್ವೆಸ್ಟ್‌ಮೆಂಟ್ ಇನ್‌ಫಾರ್ಮೇಶನ್ ಆ್ಯಂಡ್ ಕ್ರಿಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ ಲಿಮಿಟೆಡ್) ನೀಡಿದ ವರದಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ತಾಮ್ರದ(Copper) ಬೇಡಿಕೆ ದುಪ್ಪಟ್ಟಾಗಲಿದೆ. ತಾಮ್ರ ಈಗಾಗಲೇ ದುಬಾರಿಯಾಗುತ್ತಿದೆ. ಮುಂದಿನ 2 ವರ್ಷದಲ್ಲಿ ತಾಮ್ರದ ಬೆಲೆಯಲ್ಲಿ ಭಾರಿ ಏರಿಕೆ ಕಾಣದಲಿದೆ. ಇಷ್ಟೇ ಅಲ್ಲ ಬೇಡಿಕೆಗೆ ತಕ್ಕಂತೆ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ತಾಮ್ರಾ ಇತರ ಲೋಹಗಳ ದಾಖಲೆ ಬೆಲೆಯನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ICRA ವರದಿ ನೀಡಿದೆ.

2026ರ ಆರಂಭದಲ್ಲಿ ಬೆಲೆಯಲ್ಲಿ ಶೇಕಡಾ 40ರಷ್ಟ ಏರಿಕೆ

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ತಾಮ್ರದ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಲಿದೆ. ಶೇಕಡಾ 10 ರಿಂದ 12 ರಷ್ಟು ಬೇಡಿಕೆ ಹೆಚ್ಚಾಗಲಿದೆ. ಈ ಪ್ರಮಾಣ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ ಎಂದು ICRA ವರದಿಯಲ್ಲಿ ಉಲ್ಲೇಖಿಸಿದೆ. ವಿಶೇಷ ಅಂದರೆ ತಾಮ್ರದ ಬೆಲೆ 2025ಕ್ಕೆ ಹೋಲಿಸಿದರೆ 2026ರ ಆರಂಭದಲ್ಲೇ ಶೇಕಡಾ 40ರಷ್ಟು ಏರಿಕೆಯಾಗಿದೆ. 2026ರ ಆರಂಭದಲ್ಲೇ ಟನ್ ತಾಮ್ರಕ್ಕೆ 11.77 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2026ರ ಅಂತ್ಯಕ್ಕೆ ಈ ಬೆಲೆ ಶೇಕಡಾ 40 ರಿಂದ ಶೇಕಡಾ 50ರಷ್ಟು ಏರಿಕೆಯಾಗಲಿದೆ. ಮುಂದಿನ 2 ವರ್ಷದಲ್ಲಿ ತಾಮ್ರದ ಬೆಲೆ ದಾಖಲೆ ಬರೆಯಲಿದೆ ಎಂದು ICRA ವರದಿ ಹೇಳಿದೆ.

ಬೇಡಿಕೆಗೆ ಕಾರಣವೇನು?

ತಾಮ್ರದ ಬೆಲೆ ಏರಿಕೆ, ದುಬಾರಿಯಾದರೂ ಭಾರತದಲ್ಲಿ ತಾಮ್ರದ ಬೇಡಿಕೆ ಕಡಿಮೆಯಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ನಗರೀಕರಣಗಳಿಂದ ಬೇಡಿಕೆ ದುಪ್ಪಟ್ಟಾಗಲಿದೆ. ಇಷ್ಟೇ ಅಲ್ಲ, ಗ್ರೀನ್ ಎನರ್ಜಿಗೆ ಭಾರತ ಉತ್ತೇಜನ ನೀಡಿದೆ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಭಾರತದಲ್ಲಿ ತಾಮ್ರದ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆ, ರೈಲ್ವೇ ವಿದ್ಯುದ್ದೀಕರಣ, ರಕ್ಷಣಾ ವಲಯದಲ್ಲೂ ತಾಮ್ರಾದ ಅವಶ್ಯಕತೆ ಹೆಚ್ಚಾಗಿದೆ.ಈ ಕಾರಣಗಳಿಂದ ಭಾರತ ಇತರ ದೇಶಗಳಿಗಿಂತ ಹೆಚ್ಚು ತಾಮ್ರದ ಬಳಕೆ ಮಾಡಲಿದೆ.

ಭಾರತದಲ್ಲಿ ಬೇಡಿಕೆಗೆ ತಕ್ಕಂತೆ ತಾಮ್ರ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಶುದ್ಧೀಕರಿಸಿದ ತಾಮ್ರವನ್ನು ಭಾರತ ಆಮದು ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ತಾಮ್ರ ಸೇರಿದಂತೆ ಕೆಲ ಲೋಹಗಳ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲೇ ಉತ್ಪಾದನೆ ಹಾಗೂ ಶುದ್ದೀಕರಣ ಮಾಡಲು ಮುಂದಾಗಿದೆ. ಹೀಗಾಗಿ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಹೂಡಿಕೆ ಮಾಡಲಾಗಿದೆ. ಈ ಪೈಕಿ ಅದಾನಿ ಗ್ರೂಪ್ ಸ್ಮೆಲ್ಟರ್ ಕಾರ್ಖಾನೆ ಈ ಕೊರತೆ ನೀಗಿಸುವ ಸಾಧ್ಯತೆ ಇದೆ.

ಹೂಡಿಕೆ ದೃಷ್ಟಿಯಿಂದ ಕಾಪರ್ ಮೇಲೆ ಹೂಡಿಕೆ ಉತ್ತಮವಾಗಿದೆ. ಷೇರುಮಾರುಕಟ್ಟೆಯಲ್ಲಿ ತಾಮ್ರ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಇದೀಗ ICRA ನೀಡಿದ ಸ್ಫೋಟಕ ವರದಿ ಆಧರಿಸಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದರಿಂದ ತಾಮ್ರ ಭಾರತದಲ್ಲಿ ಮತ್ತಷ್ಟು ಹೊಳೆಯಲಿದೆ ಜೊತೆಗೆ ಬೆಲೆಯೂ ದುಬಾರಿಯಾಗಲಿದೆ. 



Source link

Leave a Reply

Your email address will not be published. Required fields are marked *