ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!

ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!


ಬೆಂಗಳೂರು, ಫೆಬ್ರುವರಿ 07: ಮಾರತ್ಹಳ್ಳಿಯ ಯಮಲೂರಿನಲ್ಲಿರುವ ಬಿಲ್ಡರ್ ಶಿವಕುಮಾರ್ ಅವರ ನಿವಾಸದಲ್ಲಿ ಜನವರಿ 25 ರಂದು ನಡೆದ 18 ಕೋಟಿ (ನೇಪಾಳಿ ದಂಪತಿ ದರೋಡೆ) ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಹಿರಂಗವಾಗಿದೆ. ಕಳ್ಳತನ ಮಾಡಿದ ನೇಪಾಳಿ ಜೋಡಿ ಮಹಾರಾಷ್ಟ್ರದ ಮೂಲಕ ನೇಪಾಳಕ್ಕೆ ಪರಾರಿಯಾಗಿದೆ ಎಂದು ಶಂಕಿಸಿದ್ದಾರೆ.

ಈ ದರೋಡೆಯಲ್ಲಿ ಮನೆಗೆಲಸದವಳು ಕಮಲಾ ಪ್ರಮುಖ ಪಾತ್ರ ವಹಿಸಿದ್ದಳು. ದಿನೇಶ್ ಮತ್ತು ಕಮಲಾ ಸೇರಿದಂತೆ ನಾಲ್ವರ ಗ್ಯಾಂಗ್ ಈ ಕೃತ್ಯವನ್ನು ಎಸಗಿದೆ. ಕಳ್ಳರು ಮಹಾರಾಷ್ಟ್ರ ಮತ್ತು ಗೋವಾದಿಂದ ಇಬ್ಬರನ್ನು ಕರೆಸಿಕೊಂಡು ಕಳ್ಳತನಕ್ಕೆ ಪಕ್ಕಾ ಯೋಜನೆ ರೂಪಿಸಿದ್ದರು. ಕೃತ್ಯದ ನಂತರ, ಅವರು ಕೆ.ಆರ್. ಪುರಂ ನಿಲ್ದಾಣಕ್ಕೆ ಹೋಗಿ, ನಂತರ ಯಶವಂತಪುರ ಬಸ್ ನಿಲ್ದಾಣದ ಮೂಲಕ ಪರಾರಿಯಾಗಿದೆ. ಬ್ಯಾಗ್‌ಗಳಲ್ಲಿ ಚಿನ್ನಾಭರಣವನ್ನು ತುಂಬಿಕೊಂಡು ತೆರಳುವಾಗ ಯಶವಂತಪುರದಲ್ಲಿ ಅವರ ಚಲನವಲನಗಳು ಟಿವಿ9ಗೆ ಲಭ್ಯವಾಗಿದೆ.



Source link

Leave a Reply

Your email address will not be published. Required fields are marked *