Video Shock ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ಗೆಳತಿ ಜೊತೆಗಿನ ತನ್ನದೇ ಕ್ಲಿಪ್ ನೋಡಿ ಕಂಗಾಲು | Privacy Nightmare Man Discovers Personal Intimate Video Leaked On Global Website

Video Shock ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ಗೆಳತಿ ಜೊತೆಗಿನ ತನ್ನದೇ ಕ್ಲಿಪ್ ನೋಡಿ ಕಂಗಾಲು | Privacy Nightmare Man Discovers Personal Intimate Video Leaked On Global Website



Video Shock ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ಗೆಳತಿ ಜೊತೆಗಿನ ತನ್ನದೇ ಕ್ಲಿಪ್ ನೋಡಿ ಕಂಗಾಲು | Privacy Nightmare Man Discovers Personal Intimate Video Leaked On Global Website

ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ನೆಟ್‌ನಲ್ಲಿ ಸರ್ಚ್ ಮಾಡುತ್ತಿದ್ದ ಈತನಿಗೆ ಒಂದು ವಿಡಿಯೋ ಆಘಾತ ನೀಡಿದೆ. ತಾನು ಹಾಗೂ ಗೆಳತಿ ಹೊಟೆಲ್ ರೂಂನಲ್ಲಿ ತಂಗಿದ್ದ ವಿಡಿಯೋ ಅಶ್ಲೀಲ ಸೈಟ್‌ನಲ್ಲಿ ಪತ್ತೆಯಾಗಿದೆ.

ಶೆಝೆನ್ (ಫೆ.07) ಕುತೂಹಲ ಹೆಚ್ಚಾಗಿ ಒಂದು ಸಲ ಅಶ್ಲೀಲ ವಿಡಿಯೋ ನೋಡಿ ಬಿಡೋಣ ಎಂದು ಸರ್ಚ್ ಮಾಡಲು ಶುರುಮಾಡಿದ್ದಾನೆ. ಹಲವು ವೆಬ್‌ಸೈಟ್‌ಗಳು ಈ ರೀತಿಯ ವಿಡಿಯೋಗಳನ್ನು ನೀಡುತ್ತದೆ. ಗೆಳತಿಯನ್ನು ಸಂಪೂರ್ಣ ತೃಪ್ತಿಪಡಿಸಲು ಅಶ್ಲೀಲ ವಿಡಿಯೋ ನೋಡಬೇಕು ಎಂದು ನಿರ್ಧರಿಸಿದ ಈತ ಹುಡುಕಾಟ ಆರಂಭಿಸಿದೆ. ಹೀಗೆ ಹುಡುಕುತ್ತಿದ್ದ ವ್ಯಕ್ತಿ ಒಂದು ವಿಡಿಯೋ ಥಂಬ್‌ಲೈನ್ ಹಾಗೂ ಪ್ಲೇ ಮಾಡಿ ನೋಡಿದಾಗ ಆಘಾತವಾಗಿದೆ. ಕಾರಣ ಈತ ಸ್ಕ್ರೀನ್ ಮೇಲೆ ನೋಡಿದ ವಿಡಿಯೋ ತನ್ನದೇ ಆಗಿತ್ತು. ಗೆಳತಿ ಜೊತೆ ಎರಡು ವಾರ ಹಿಂದೆ ಹೊಟೆಲ್ ರೂಂನಲ್ಲಿ ತಂಗಿದ್ದ ವಿಡಿಯೋ ಅದಾಗಿತ್ತು. ಈ ವಿಡಿಯೋ ನೋಡಿದ ವ್ಯಕ್ತಿ ಕಂಗಾಲಾದ ಘಟನೆ ದಕ್ಷಿಣ ಚೀನಾದ ಶೆಝೆನ್‌ನಲ್ಲಿ ನಡೆದಿದೆ.

ಏನಿದು ಘಟನೆ?

ಶೆಝೆನ್ ಪ್ರಾಂತ್ಯಕ್ಕೆ ಎರಿಕ್ (ಹೆಸರು ಬದಲಿಸಲಾಗಿದೆ) ಹಾಗೂ ಈತನ ಗೆಳತಿ ಕೆಲಸದ ನಿಮಿತ್ತ ತೆರಳಿದ್ದರು. ಕೆಲಸ ಮುಗಿಸುವಾಗಲೇ ತಡವಾಗಿತ್ತು. ಹೀಗಾಗಿ ಅಂದು ಶೆಝೆನ್‌ನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಗರ್ಲಫ್ರೆಂಡ್ ಜೊತೆ ಉಳಿದುಕೊಳ್ಳಲು ಎರಿಕ್ ಉತ್ತಮ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದರು. ಬಳಿಕ ಹೊಟೆಲ್ ರೂಂಗೆ ತೆರಳಿದ ಈ ಜೋಡಿ ವಿಶ್ರಾಂತಿಗೆ ಜಾರಿದ್ದರು. ಇದರ ನಡುವೆ ಇಬ್ಬರು ರೊಮ್ಯಾನ್ಸ್ ಮಾಡಿದ್ದಾರೆ. ಗರ್ಲ್‌ಫ್ರೆಂಡ್ ಜೊತೆ ಒಂದು ರಾತಿ ರೊಮ್ಯಾಂಟಿಕ್ ಮೂಡ್‌ನಲ್ಲೇ ಕಳೆದಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಶೆಝೆನ್‌ನಿಂದ ವಾಪಾಸ್ಸಾಗಿದ್ದರು.

ಒಂದು ವಾರದ ಕಳೆದರೂ ಎರಿಕ್‌ಗೆ ಗೆಳತಿ ಜೊತೆ ಹೊಟೆಲ್ ರೂಂನಲ್ಲಿ ತಂಗಿದ್ದ ಕ್ಷಣಗಳು ಕಣ್ಣಮುಂದಿನಿಂದ ಮಾಸುತ್ತಿರಲಿಲ್ಲ. ಮುಂದಿನ ಬಾರಿ ಇದೇ ರೀತಿ ಗೆಳತಿ ಜೊತೆ ಹೊಟೆಲ್‌ನಲ್ಲಿ ತಂಗುವ ಅವಕಾಶ ಸಿಕ್ಕಿದರೆ ಮೊದಲೇ ತಯಾರಿ ನಡೆಸಿರಬೇಕು ಎಂದು ಎರಿಕ್ ನಿರ್ಧರಿಸಿದ್ದ. ಹೀಗಾಗಿ ಕುತೂಹಲಕ್ಕಾಗಿ ಅಶ್ಲೀಲ ವಿಡಿಯೋ ಒಂದನ್ನು ನೋಡಲು ಬಯಸಿದ್ದ. ಕೆಲ ವೆಬ್‌ಸೈಟ್ ತಡಕಾಡಿ ಒಂದು ವಿಡಿಯೋ ಕ್ಲಿಕ್ ಮಾಡಿದ್ದ. ಆದರೆ ಈ ವಿಡಿಯೋ ನೋಡಿ ಎರಿಕ್ ಶಾಕ್ ಆಗಿದ್ದಾನೆ. ತಾನು ಗೆಳತ ಜೊತೆ ಶೆಝೆನ್ ಪ್ರಾಂತ್ಯಕ್ಕೆ ತೆರಳಿದಾಗ ನಡೆದ ಘಟನೆಯ ವಿಡಿಯೋ ವೆಬ್‌ಸೈಟ್‌ನಲ್ಲಿ ಜಗಜ್ಜಾಹೀರಾಗಿತ್ತು. ಇದಕ್ಕೆ ಮಿಲಿಯನ್ ಲೈಕ್ಸ್, ವೀವ್ಸ್, ಕಮೆಂಟ್ ಕೂಡ ಬಂದಿತ್ತು. ಈ ವಿಡಿಯೋ ಎರಿಕ್‌ಗೆ ತೀವ್ರ ಆಘಾತ ತಂದಿತ್ತು ಎಂದು ಬಿಬಿಸಿ ವರದಿ ಮಾಡಿದೆ.

ಈ ವಿಡಿಯೋದಲ್ಲಿ ಏನಿದೆ?

ಎರಿಕ್ ಹಾಗೂ ಗೆಳತಿ ಹೊಟೆಲ್ ಕೋಣೆಯ ಒಳ ಪ್ರವೇಶಿಸುತ್ತಿರುವುದು, ಬ್ಯಾಗ್ ಪಕ್ಕಕ್ಕಿಟ್ಟು ಇಬ್ಬರು ತಬ್ಬಿಕೊಂಡು ಮುತ್ತಿಕ್ಕುವ ದೃಶ್ಯಗಳಿಂದ ಹಿಡಿದು ಬೆಳಗಿನ ವರೆಗಿನ ಎಲ್ಲಾ ದೃಶ್ಯಗಳಿತ್ತು. ಪ್ರತಿಷ್ಠಿ ಹೊಟೆಲ್‌ನ ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಈ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಬಳಿಕ ಈ ವಿಡಿಯೋಗಳನ್ನು ದುಬಾರಿ ಮೊತ್ತಕ್ಕೆ ವೆಬ್‌ಸೈಟ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಮಾರಾಟ ಮಾಡಲಾಗುತ್ತದೆ. ಚೀನಾದಲ್ಲಿ ಲೈವ್ ಅಶ್ಲೀಲ ವಿಡಿಯೋ, ನೈಜ ವಿಡಿಯೋ ಕೆಟಗರಿ ಅಡಿ ಈ ವಿಡಿಯೋಗಳಿಗೆ ಭಾರಿ ಬೇಡಿಕೆ ಇದೆ. ಅಶ್ಲೀಲ ಸಿನಿಮಾ ಇಂಡಸ್ಟ್ರಿ ಚಿತ್ರೀಕರಣ ಮಾಡಿದ ವಿಡಿಯೋಗಿಂತ ಈ ವಿಡಿಯೋಗಳ ಬೇಡಿಕೆ ಹೆಚ್ಚಿರುವ ಕಾರಣ ಹಲವು ಹೊಟೆಲ್‌ಗಳಲ್ಲಿ ಈ ರೀತಿ ರಹಸ್ಯ ವಿಡಿಯೋ ಚಿತ್ರೀಕರಣ ಮಾಡಿ ಮಾರಾಟ ಮಾಡುತ್ತಿರುವ ಘಟನೆ ಸಾಕ್ಷಿ ಸಮೇತ ಬೆಳಕಿಗ ಬಂದಿತ್ತು.

ಗೆಳತಿಗೆ ಈ ಕುರಿತು ಎರಿಕ್ ಹೇಳಿದಾಗ ಆಕೆ ನಂಬಲೇ ಇಲ್ಲ. ಆದರೆ ವಿಡಿಯೋ ಲಿಂಕ್ ಕಳುಹಿಸಿದಾಗ ಗೆಳತಿ ದಿಗ್ಬ್ರಮೆಗೊಂಡಿದ್ದಾಳೆ. ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾಳೆ. ಈ ವಿಡಿಯೋವನ್ನು ಕುಟುಂಬಸ್ಥರು, ಆಪ್ತರು,ಗೆಳೆಯರು, ಸಹೋದ್ಯೋಗಿಗಳು ಸೇರಿದಂತೆ ಹಲವರು ನೋಡಿರುತ್ತಾರೆ. ಹೇಗೆ ತಲೆ ಎತ್ತಿ ಓಡಾಡಲಿ ಎಂದು ಗೆಳತಿ ತೀವ್ರ ಆತಂಕಗೊಂಡಿದ್ದಾಳೆ. ಬಳಿಕ ಇಬ್ಬರು ಮನೆಯಿಂದ ಹೊರಗಡೆ ಕಾಲಿಟ್ಟರೆ ಮಾಸ್ಕ್ , ಕ್ಯಾಪ್ ಧರಿಸಿ ತೆರಳುತ್ತಿದ್ದರು. ಇಷ್ಟೇ ಅಲ್ಲ ಈ ಜೋಡಿ ಹೊಟೆಲ್‌ಗಳಲ್ಲಿ ತಂಗುವುದನ್ನೇ ರದ್ದುಗೊಳಿಸಿದ್ದಾರೆ. ಈ ಘಟನೆ ನಡೆದಿರುವುದು 2023ರಲ್ಲಿ ಆದರೆ ಈ ಜೋಡಿ ಈಗಲೂ ಭಯದಿಂದಲೇ ಬದುಕುವಂತಾಗಿದೆ.



Source link

Leave a Reply

Your email address will not be published. Required fields are marked *