ಅ19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ 6ನೇ ಟ್ರೋಫಿ ಗೆದ್ದುಕೊಂಡು ದಾಖಲೆ ಬರೆದಿದೆ. ಈ ಸಾಧನೆಗೆ ಬಿಸಿಸಿಐ ಉಡುಗೊರೆ ನೀಡಿದೆ.

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ಐತಿಹಾಸಿಕ ದಾಖಲೆ ಬರೆದಿದೆ. ಇಂಗ್ಲೆಂಡ್ ವಿರುದ್ದ ಫೈನಲ್ ಪಂದ್ಯದಲ್ಲಿ 100 ರನ್ ಭರ್ಜರಿ ಗೆಲುವು ದಾಖಲಿಸುವ ಮೂಲಕ 6ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಗರಿಷ್ಠ ಟ್ರೋಫಿ ಸಾಧನೆ ಮಾತ್ರವಲ್ಲ, ವೈಭವ್ ಸೂರ್ಯವಂಶಿ ದಾಖಲೆಯ 175ರನ್ ಸೇರಿದಂತೆ ಹಲವು ದಾಖಲೆಗಳು ಅಂಡರ್ 19 ಫೈನಲ್ ಪಂದ್ಯದಲ್ಲಿ ನಿರ್ಮಾಣವಾಗಿದೆ. ಇದೀಗ ಬಿಸಿಸಿಐ ಉಡುಗೊರೆ ಘೋಷಿಸಿದೆ.

ಅಂಡರ್ 19 ವಿಶ್ವಕಪ್ ಟ್ರೋಫಿ ಗೆದ್ದು ಸಾಧನೆ ಮಾಡಿದ ಟೀಂ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಗೆಲುವಿನ ಬಳಿಕ ಮಾತನಾಡಿದ ಬಿಸಿಸಿಐ ಸೆಕ್ರಟರಿ ದೇವಜಿತ್ ಸೈಕಿಯಾ, ಅಂಡರ್ 19 ಭಾರತದ ತಂಡ ಅದ್ಭುತ ಸಾಧನೆ ಮಾಡಿದೆ. ಈ ಸಾಧನೆಗೆ ಬಿಸಿಸಿಐ 7.5 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಅಂಡರ್ 19 ಭಾರತ ತಂಡದ ಈ ನಗದು ಬಹುಮಾನಕ್ಕೆ ಅರ್ಹವಾಗಿದೆ. ನಮ್ಮ ತಂಡದ ಪ್ರದರ್ಶನದ ಬಗ್ಗೆ, ಸಾಧನೆ ಬಗ್ಗೆ ಹೆಮ್ಮೆ ಇದೆ. 7.5 ಕೋಟಿ ರೂ ನಗದು ಬಹುಮಾನ ನೀಡಲಾಗಿದೆ ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ. ಟೀಂ ಇಂಡಿಯಾ ಟ್ರೋಫಿ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಂಡರ್ 19 ವಿಶ್ವಕಪ್ ಗೆದ್ದ ಭಾರತವನ್ನು ಅಭಿನಂದಿಸಿದ್ದಾರೆ. ಭಾರತದ ಕ್ರಿಕೆಟ್ ಪ್ರತಿಭೆಗಳು ಪ್ರಜ್ವಲಿಸುತ್ತಿದ್ದಾರೆ. ಅಂಡರ್ 19 ಭಾರತ ತಂಡ ವಿಶ್ವಕಪ್ ಟ್ರೋಫಿಯನ್ನು ಮನೆಗೆ ತಂದಿರುವುದು ಹೆಮ್ಮೆ ತಂದಿದೆ. ಇಡೀ ಟೂರ್ನಿಯಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಯುವ ಸಮೂಹಕ್ಕೆ ಸ್ಪೂರ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 80 ಎಸೆತದಲ್ಲಿ 15 ಬೌಂಡರಿ 15 ಸಿಕ್ಸರ್ ಮೂಲಕ 175 ರನ್ ಸಿಡಿಸಿ ದಾಖಲೆ ಬರೆದಿದ್ದರು. ಈ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 411 ರನ್ ಸಿಡಿಸಿತ್ತು.ಇತ್ತ ಇಂಗ್ಲೆಂಡ್ ತಂಡ 311 ರನ್‌ಗೆ ಆಲೌಟ್ ಆಗಿತ್ತು. ಇದರೊಂದಿಗೆ ಭಾರತ 100 ರನ್ ಭರ್ಜರಿ ಗೆಲುವು ದಾಖಲಿಸಿತ್ತು.

ಭಾರತ ಅಂಡರ್ 19 ಫೈನಲ್ ಪಂದ್ಯದಲ್ಲಿ ಒಟ್ಟು 31 ಸಿಕ್ಸರ್ ಸಿಡಿಸಿ ಗರಿಷ್ಠ ಸಿಕ್ಸರ್ ದಾಖಲೆ ಬರೆದಿದೆ. ಇದಕ್ಕೂ ಮೊದಲು 23 ಸಿಕ್ಸರ್ ದಾಖಲೆ ನಿರ್ಮಾಣವಾಗಿತ್ತು. ಇದೀಗ ಈ ದಾಖಲೆ ಭಾರತ ಪುಡಿ ಮಾಡಿದೆ. ಇನ್ನು ಭಾರತ 2000, 2008, 2012, 2018, 2022 ಹಾಗೂ 2026ರಲ್ಲಿ ಅಂಡರ್ 19 ಟ್ರೋಫಿ ಗೆದ್ದ ಸಾಧನೆ ಮಾಡಿದೆ.

Source link
ಅ19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್, 7.5 ಕೋಟಿ ರೂ ನಗದು ಬಹುಮಾನ