ನಟಿ ಕಂಗನಾ ರಣಾವತ್ ಮತ್ತು ರಾಜಕಾರಣಿ ಚಿರಾಗ್ ಪಸ್ವಾನ್ ಸಂಸತ್ ಕಲಾಪಕ್ಕೆ ಒಟ್ಟಿಗೆ ಆಗಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಇವರಿಬ್ಬರ ಫೋಟೋಗಳು ವೈರಲ್ ಆಗಿದ್ದು, ಇದೀಗ ಮತ್ತೆ ಇವರ ಜೋಡಿಯನ್ನು ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಹಿಂದೊಮ್ಮೆ ನಟನೂ ಆಗಿ ಈಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರುವ ಬಿಹಾರದ ಯುವ ರಾಜಕಾರಣಿ ಚಿರಾಗ್ ಪಸ್ವಾನ್ ಇಬ್ಬರು ಈಗ ಸಂಸದರಾಗಿದ್ದು, ಇವರು ಜೊತೆಗೆ ನಿಂತಾಗಲೆಲ್ಲಾ ಸಾಕಷ್ಟು ಟ್ರೋಲ್ ವೈರಲ್ ಆಗ್ತಿರ್ತಾರೆ. ಮೊದಲ ಬಾರಿಗೆ ಇವರಿಬ್ಬರು ಸಂಸತ್‌ಗೆ ಆಯ್ಕೆಯಾಗಿ ಮೊದಲ ಬಾರಿ ಸಂಸತ್‌ನಲ್ಲಿ ಭೇಟಿಯಾದಾಗ ಇವರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರು ಬೇರೆಯದೇ ಗಾಸಿಪ್ ಸೃಷ್ಟಿ ಮಾಡಿದ್ದರು. ಈಗ ಮತ್ತೆ ಇವರಿಬ್ಬರ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ.

ಹೌದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರೂ ಆಗಿರುವ ಚಿರಾಗ್ ಪಸ್ವಾನ್ ಕೇಂದ್ರದ ಮಾಜಿ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕ ದಿವಂಗತ ರಾಮ್ ವಿಲಾಸ್ ಪಸ್ವಾನ್ ಅವರ ಪುತ್ರ. 42 ವರ್ಷದ ಚಿರಾಗ್ ಪಸ್ವಾನ್ ಅವರಿಗೆ ಇನ್ನೂ ಮದುವೆಯಾಗಿಲ್ಲ, ಇಂಜಿನಿಯರಿಂಗ್ ಮುಗಿಸಿರುವ ಅವರು ಸಿನಿಮಾದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. 2011ರಲ್ಲಿ ಹಿಂದಿಯ ಮಿಲೇ ನಾ ಮಿಲೇ ಹಮ್ ಸಿನಿಮಾದಲ್ಲಿ ಅವರು ನಟಿಸಿದ್ದರು. ಅದೂ ನಟಿ ಕಂಗನಾ ರಣಾವತ್ ಜೊತೆ. ಹೌದು ನಟಿ ಕಂಗನಾ ಹಾಗೂ ಚಿರಾಗ್ ಪಸ್ವಾನ್ ಜೊತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈಗ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಚಿರಾಗ್ ಬಿಹಾರದ ಹಾಜಿಪುರ ಕ್ಷೇತ್ರದ ಸಂಸದರಾಗಿದ್ದಾರೆ.

ಇತ್ತ ಕಂಗನಾ ರಣಾವತ್ ಅವರಿಗೆ ಪರಿಚಯ ಬೇಕಾಗಿಲ್ಲ, 39 ವರ್ಷದ ಬಾಲಿವುಡ್‌ನ ಕ್ವೀನ್ ತಮ್ಮ ರಾಜ್ಯ ಹಿಮಾಚಲ ಪ್ರದೇಶದ ಮಂಡಿಯಿಂದ ಕಳೆದ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದು, ಸಂಸದರಾಗಿದ್ದಾರೆ. ಇವರು ಕೂಡ ಅವಿವಾಹಿತರು. ಹೀಗಾಗಿ ಇವರಿಬ್ಬರು ಮೊದಲು ಲೋಕಸಭೆಯಲ್ಲಿ ಸಿಕ್ಕಾಗ ಇವರಿಬ್ಬರು ಪರಸ್ಪರ ಮಾತನಾಡಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅನೇಕರು ಇವರಿಗೆ ನೀವಿಬ್ಬರೂ ಜೊತೆಯಲ್ಲಿ ನಿಂತರೆ ಚೆನ್ನಾಗಿ ಕಾಣುತ್ತಿರಾ ಎಂದು ಇವರ ವೀಡಿಯೋಗಳಿಗೆ ಕಾಮೆಂಟ್ ಮಾಡಿದ್ದರು. ಹೀಗಿರುವಾಗ ಇವರು ಜೊತೆಯಾಗಿ ಸಂಸತ್ ಕಲಾಪಕ್ಕೆ ಆಗಮಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ನಟಿ ಸಂಸದೆ ಕಂಗನಾ ರಣಾವತ್ ಹಾಗೂ ಸಚಿವ ಚಿರಾಗ್ ಪಸ್ವಾನ್ ಜೊತೆಯಾಗಿ ಸಂಸತ್ ಕಲಾಪಕ್ಕೆ ಆಗಮಿಸುತ್ತಿರುವ ದೃಶ್ಯವಿದೆ. ಪ್ರಸ್ತುತ ಸಂಸತ್‌ನ ಅಧಿವೇಶನ ನಡೆಯುತ್ತಿದೆ. ಕಂಗನಾ ಕಪ್ಪು ಬಣ್ಣದ ಬ್ಯಾಗ್ ಕೈಯಲ್ಲಿ ಹಿಡಿದು ಬೂದು ಬಣ್ಣದ ಕೋಟ್ ಧರಿಸಿ ಬಂದಿದ್ದರೆ, ಚಿರಾಗ್ ಪಸ್ವಾನ್ ಅವರು ಬಿಳಿ ಜುಬ್ಬಾ ನೀಲಿ ಜೀನ್ಸ್ ಧರಿಸಿ ಶಾಲು ಸುತ್ತಿಕೊಂಡು ಆಗಮಿಸಿದ್ದರು.

ವೀಡಿಯೋ ನೋಡಿದ ನೆಟ್ಟಿಗರು ಈ ಭಾರಿಯೂ ಜೋಡಿಗೆ ಸಖತ್ ಕಾಮೆಂಟ್ ಮಾಡ್ತಿದ್ದಾರೆ. ಒಬ್ಬರು ಇವರು ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇವರಿಬ್ಬರೂ ಜೊತೆಯಾಗಿ ಇದ್ದರೆ ಇನ್ನೂ ಚೆನ್ನಾಗಿ ಕಾಣಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹೋ ದೇವರೆ ಬಹಳ ಸಮಯದ ನಂತರವೂ ಇವರಿಬ್ಬರು ಜೊತೆಗೆ ಸೊಗಸಾಗಿ ಕಾಣಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಮದುವೆಯನ್ನು ಬೇಗ ಮಾಡಿ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನೀವಿಬ್ಬರೂ ಜೊತೆಯಾಗಿ ನೋಡುವುದಕ್ಕೆ ಚೆನ್ನಾಗಿ ಕಾಣಿಸುತ್ತೀರಿ ಸಂಬಂಧದ ಮಾತುಕತೆಯನ್ನು ಮುಂದುವರೆಸಿ ಎಂದು ಒಬ್ಬರು ಅವರಿಗೂ ಈ ವೀಡಿಯೋ ಟ್ಯಾಗ್ ಮಾಡಿದ್ದಾರೆ.
View this post on Instagram
A post shared by Asian News International (@ani_trending)

Source link
ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ: ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು