ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda

ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda

ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda

Vaishnavi Gowda: ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ. ಸದ್ಯ ನಟನೆಯಿಂದ ದೂರ ಉಳಿದಿರುವ ನಟಿ ತಮ್ಮ ಪತಿ ಜೊತೆ ಜ್ಯೋತಿರ್ಲಿಂಗ ದರ್ಶನ ಪಡೆದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಮದುವೆಯಾದ ಬಳಿಕ ಒಂದು ಮಿನ್ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದರಷ್ಟೇ. ಇದೀಗ ಪತಿ ಜೊತೆ ಟ್ರಾವೆಲ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ವೈಷ್ಣವಿ ಗೌಡ.

ಸದ್ಯಕ್ಕೆ ನಟಿ ಸ್ಪಿರೀಚುವಲ್ ಜರ್ನಿ ಮಾಡುತ್ತಿದ್ದಾರೆ. ಪತಿ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ದೇಶದ ವಿವಿಧ ಜ್ಯೋತಿರ್ಲಿಂಗ ದರ್ಶನ ಪಡೆಯುವ ಪ್ರತಿಜ್ಞೆ ಸ್ವೀಕರಿಸಿದಂತಿದೆ. ಆ ಹಿನ್ನೆಲೆಯಲ್ಲಿ ಇದೀಗ ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ.

ಕೇವಲ ಒಂದು ತಿಂಗಳಲ್ಲಿ, ಒಂದಲ್ಲ, ಎರಡು ಜ್ಯೋತಿರ್ಲಿಂಗಗಳ ಮುಂದೆ ನಿಲ್ಲುವ ಸೌಭಾಗ್ಯ ನನಗೆ ಸಿಕ್ಕಿತು. ಪದಗಳಿಲ್ಲ, ಕೇವಲ ಕೃತಜ್ಞತೆ. ಮಹಾದೇವ ಕರೆ ಮಾಡಿದಾಗ, ನೀವು ಪ್ರಯಾಣವನ್ನು ಪ್ರಶ್ನಿಸುವುದಿಲ್ಲ – ನೀವು ಶರಣಾಗುತ್ತೀರಿ. ಹರ್ ಹರ್ ಮಹಾದೇವ. ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಮತ್ತು ಶ್ರೀ ಘೃಷ್ಣೇಶ್ವರ ಜ್ಯೋತಿರ್ಲಿಂಗ ಎಂದು ನಟಿ ಬರೆದುಕೊಂಡಿದ್ದಾರೆ.

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ ಹಾಗೂ ಶ್ರೀ ಘೃಷ್ಣೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಹಾಗಾಗಿ ವೈಷ್ಣವಿ ತಮ್ಮ ಪತಿ ಜೊತೆ ಎರಡೂ ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ.

ಮದುವೆಯಾದ ಬಳಿಕ ವೈಷ್ಣವಿ ಗೌಡ, ತಮ್ಮ ಪತಿ ಜೊತೆ ದೇಶದ ವಿವಿದೆಡೆ ಟ್ರಾವೆಲ್ ಮಾಡುತ್ತಿರುತ್ತಾರೆ, ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಜೋಡಿ ಕಳೆದ ವರ್ಷ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ವೈಷ್ಣವಿ ಮೊದಲಿನಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಈಗ ಪತಿ ಜೊತೆ ಸೇರಿ ಮುದ್ದಾದ ರೀಲ್ಸ್ ಗಳನ್ನು ಮಾಡಿ ಶೇರ್ ಮಾಡುತ್ತಿರುತ್ತಾರೆ. ಮತ್ತೆ ಯಾವಾಗ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದಷ್ಟು ಬೇಗ ಸೀರಿಯಲ್ ನಲ್ಲಿ ನಟಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *