ಕಾಂಗ್ರೆಸ್ ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ: ಹಸ್ತಕ್ಷೇಪಕ್ಕೆ ಆಕ್ಷೇಪಚಿತ್ರದ ಕ್ರೆಡಿಟ್ ಮೂಲ: tv9
ಬೆಂಗಳೂರು, ಫೆಬ್ರವರಿ 9: ಕಾಂಗ್ರೆಸ್ (ಕಾಂಗ್ರೆಸ್) ಪಾಳಯದಲ್ಲಿ ಒಂದೆಡೆ ಕುರ್ಚಿ ಕದನ ನಡೆಯುತ್ತಿರುತ್ತದೆ, ಮತ್ತೊಂದೆಡೆ ಹಸ್ತಕ್ಷೇಪದ ಜಟಾಪಟಿ ಜೋರಾಗಿದೆ. ಇದರ ನಡುವೆ ಸಿದ್ದರಾಮಯ್ಯರ ಪುತ್ರ ಯತೀಂದ್ರ ಆಡಿದ ಮಾತು, ಅವರ ನಡೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತರುತ್ತಿದೆ. ಇತ್ತೀಚೆಗಷ್ಟೇ ಸಚಿವ ಕೆಜೆ ಜಾರ್ಜ್ ರಾಜೀನಾಮೆ ಕೊಡಲು ಮುಂದಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಬಳಿಕ, ‘ಅಪ್ಪಾಜಿಯೇ ಐದು ವರ್ಷ ಸಿಎಂ’ ಎನ್ನುವ ಮೂಲಕ ಯತೀಂದ್ರ ನಾಯಕತ್ವ ಬದಲಾವಣೆ ಚರ್ಚೆಯ ಬೆಂಕಿಗೆ ತುಪ್ಪ ಸುರಿದಿದ್ದರು. ಈಗ ಸಿಎಂ ತವರು ಜಿಲ್ಲೆ ಕಾಂಗ್ರೆಸ್ ನಾಯಕರೇ ಯತೀಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಯತೀಂದ್ರ ವಿರುದ್ಧ ಕಿಡಿಕಾರಿದ್ದಾರೆ. ತನ್ವೀರ್ ಸೇಠ್ ಕ್ಷೇತ್ರದಲ್ಲೂ ಯತೀಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಈ ಸಮಯದಲ್ಲಿ ಮೈಸೂರಿನಲ್ಲಿ ಪೊಲೀಸ್ ಠಾಣೆ ಜಿ. ಪರಮೇಶ್ವರ್ ಮುಂದೆ ತನ್ವೀರ್ ಸೇಠ್ ಬೇಸರ ಹೊರಹಾಕಿದ್ದಾರೆ.
‘ನಾನು ವೇದಿಕೆಗೆ ಬರಲ್ಲ. ಬಂದರೆ ಬೇರೆಯೇ ಮಾತನಾಡಿಬಿಡುತ್ತೇನೆ’ ಎಂದು ತನ್ವೀರ್ ಸೇಠ್ ಗರಂ ಆಗಿದ್ದಾರೆ. ಶಾಸಕ ಅನಿಲ್ ಸೇರಿ ತನ್ವೀರ್ ಸೇಠ್ರನ್ನು ಮನವೊಲಿಸಿದ್ದಾರೆ. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಬಳಿಕ ಮಾತನಾಡಿದ ತನ್ವೀರ್ ಸೇಠ್, ಕೆಲವು ಅಧಿಕಾರಿಗಳು ಶಂಖದಿಂದ ಬಂದರೇನೇ ತೀರ್ಥ ಅಂದುಕೊಂಡಿದ್ದಾರೆ. ಹಸ್ತಕ್ಷೇಪ ರಾಜ್ಯದ ಉದ್ದಗಲಕ್ಕೂ ಆಗುತ್ತಿದೆ ಅಂತಾ ಕಿಡಿಕಾರಿದ್ದಾರೆ.
ಪಟ್ಟದ ಫೈಟ್ : ಯತೀಂದ್ರ ಬಾಂಬ್ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಕಂಪನ
ಹಸ್ತಕ್ಷೇಪದ ಆರೋಪ ಅಷ್ಟೇ ಅಲ್ಲ, ಸಿಎಂ ಬದಲಾವಣೆ ವಿಚಾರವಾಗಿ ಯತೀಂದ್ರ ನೀಡಿರುವ ಹೇಳಿಕೆ ಬಗ್ಗೆಯೂ ತಿವಿದಿರುವ ತನ್ವೀರ್ ಸೇಠ್, ಅಧಿಕಾರ ಶಾಶ್ವತವಲ್ಲ. ಏತನ್ಮಧ್ಯೆ, ಯಾರೋ ಹೇಳಿಕೆ ಕೊಟ್ಟರೆ ಸಿಎಂ ಬದಲಾವಣೆ ಆಗಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಹೈಕಮಾಂಡ್ ಎಲ್ಲವನ್ನೂ ಗಮನಿಸಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಮಧ್ಯೆ ವಿಜಯಪುರದಲ್ಲಿ ಲಿಂಗಾಯತ ಶಾಸಕರ ಭೋಜನಕೂಟದ ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ನಮ್ಮ ಸಮುದಾಯದ ಹಿತಾಸಕ್ತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವು 34 ಶಾಸಕರಿದ್ದೇವೆ, ನಮಗೆ ಸಿಗಬೇಕಾಗಿರುವುದು ಸಿಗಲೇಬೇಕು.
ಇದನ್ನೂ ಓದಿ: ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಸಿಡಿದ ‘ಕೈ’ ಶಾಸಕ: ಗೃಹ ಸಚಿವರ ಬಳಿ ಅಸಮಾಧಾನ ತೊಡಿಸಿಕೊಂಡ ತನ್ವೀರ್ ಸೇಠ್
ಕಾಂಗ್ರೆಸ್ ನ ನಾಯಕತ್ವ ಬಡಿದಾಟವೇ ವಿಪಕ್ಷಕ್ಕೆ ಅಸ್ತ್ರವಾಗಿದ್ದು, ಕೇಂದ್ರ ಸಚಿವರು ಟೀಕಿಸಿದ್ದಾರೆ. ಈಗಿರುವ ಸಿದ್ದರಾಮಯ್ಯ ಅಸಹಾಯಕ ಎಂದು ಸಚಿವ ವಿ ಸೋಮಣ್ಣ ಕುಟುಕಿದ್ದಾರೆ. ನಾಯಕತ್ವ ಬದಲಾವಣೆ ಸಂಘರ್ಷ ಮುಂದೆ ಮತ್ತೆ ಯಾವ ಹಂತ ತಲುಪಲಿದೆ ಎಂಬುದು ಕಾದುನೋಡಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ