ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni



ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆಯ (Amruthadhare serial) ಭೂಮಿಕಾ ಲುಕ್‌ ಕೆಲ ದಿನಗಳಿಂದ ಬದಲಾಗಿದೆ. ಕಥೆ ಬದಲಾದಾಗ ಲುಕ್‌ ಚೇಂಜ್‌ ಆಗಬೇಕು ಸರಿ, ಆದರೆ ಕನ್ನಡಕ ಕಿತ್‌ ಬಿಸಾಕೋದು ಸರೀನ? ಭೂಮಿಕಾ ಪಾತ್ರದ ಲುಕ್ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಸೀರಿಯಲ್‌ಗಳಲ್ಲಿ ಸದ್ಯ ಸಖತ್‌ ಹೈಪ್‌ ತಗೊಂಡು ಮುನ್ನುಗ್ತಾ ಇರೋದು ಅಮೃತಧಾರೆ. ಈ ಸೀರಿಯಲ್‌ನ ಕಥೆ, ಚಿತ್ರಕಥೆ, ಸಂಭಾಷಣೆ ಮಾತ್ರವಲ್ಲ, ಇದರಲ್ಲಿ ನಟಿಸುತ್ತಿರುವ ಕಲಾವಿದರು ಎಲ್ಲರೂ ಈ ಸೀರಿಯಲ್‌ ಅನ್ನು ಯಶಸ್ಸಿನತ್ತ ಮುನ್ನಡೆಸ್ತಾ ಇದ್ದಾರೆ. ಸದ್ಯಕ್ಕೆ ಈ ಸೀರಿಯಲ್‌ ಅಪಾರ ಜನಪ್ರಿಯತೆ ಗಳಿಸಿದೆ. ಯಶಸ್ವಿ 800 ಸಂಚಿಕೆಗಳನ್ನ ಪೂರೈಸಿದ್ದು, ಬಹಳ ಜನಮನ್ನಣೆ ಪಡೆದುಕೊಂಡಿದೆ. ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಗೌತಮ್‌ ದಿವಾನ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಇಬ್ಬರ ಮಕ್ಕಳು ಆಕಾಶ್ ಪಾತ್ರದಲ್ಲಿ ದುಷ್ಯಂತ್‌ ಆನಂದ್‌, ಮಿಂಚು ಪಾತ್ರದಲ್ಲಿ ನೈನಿಕಾ ಮಹೇಶ್ ರಾವ್‌ ಅಭಿನಯಿಸುತ್ತಿದ್ದಾರೆ. ಇದರ ನಾಯಕ ರಾಜೇಶ್‌ ನಟರಂಗ ರಂಗಭೂಮಿ ಹಿನ್ನಲೆಯಿಂದ ಬಂದವರು. ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ‘ಗುಪ್ತಗಾಮಿನಿ’ ಇವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟ ಧಾರಾವಾಹಿ. ‘ಮೊಗ್ಗಿನ ಮನಸ್ಸು’, ‘ಕೆಂಡಸಂಪಿಗೆ’ ಸೇರದಂತೆ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಇವರ ಮಗಳು ಧ್ವನಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಇದರ ನಾಯಕಿ ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಛಾಯಾ ಸಿಂಗ್‌ ಉತ್ತರ ಭಾರತ ಮೂಲದವರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಛಾಯಾ ಸಿಂಗ್ ಜನ ಮೆಚ್ಚಿದ ನಾಯಕಿ. ತಮಿಳು ನಟ ಕೃಷ್ಣ ಅವರನ್ನ ವರಿಸಿದ್ದಾರೆ.

ಭೂಮಿಕಾ ಸೀರಿಯಸ್‌ ಲುಕ್‌ ಮಾಯ!

ಈಗ ಪ್ರಶ್ನೆ ಛಾಯಾಸಿಂಗ್‌ ನಿರ್ವಹಿಸಿರೋ ಭೂಮಿಕಾ ಪಾತ್ರದ ಬಗ್ಗೆ ಕಾಮೆಂಟ್‌ ಮೇಲೆ ಕಾಮೆಂಟ್‌ ಹರಿದು ಬರ್ತಿದೆ. ಆ ಕಾಮೆಂಟ್‌ಗೆ ಕಾರಣ ಅವರ ಕನ್ನಡಕ. ಈ ಹಿಂದೆ ಅವರು ಭೂಮಿಕಾ ಟೀಚರ್‌ ಆಗಿ ಏಕಾಏಕಿ ಸೀರಿಯಸ್‌ ಆಗಿ ಬದಲಾಗಿದ್ದರು. ಎಷ್ಟು ಸೀರಿಯಸ್‌ ಅಂದರೆ ಶುರು ಶುರುವಿಗೆ ಪುಟಾಣಿ ಮಿಂಚು ಅವರ ಹತ್ತಿರ ಹೋಗೋದಕ್ಕೂ ಭಯ ಪಡ್ತಿದ್ದಳು. ದಪ್ಪ ಅಂಚಿನ ಕನ್ನಡಕ, ಎತ್ತಿ ಕಟ್ಟಿದ ಕೂದಲು, ಕ್ಲೋಸ್ಡ್‌ ನೆಕ್‌ ಬ್ಲೌಸ್‌ನಲ್ಲಿ ಅವರ ಗಾಂಭೀರ್ಯ ಎದ್ದು ಕಾಣ್ತಿತ್ತು. ಈ ಸೀರಿಯಲ್‌ ಲುಕ್‌ ಎಲ್ಲಿಯವರೆಗೆ ಅಂದರೆ ಗೌತಮ್‌ ಜೊತೆಗೆ ಮತ್ತೆ ಸೇರೋವರೆಗೆ. ಸುಮ್‌ ಸುಮ್ನೇ ಸಿಟ್ಟು, ಸಣ್ಣಪುಟ್ಟದಕ್ಕೂ ಅಸಹನೆ, ಅತಿಯಾದ ಶಿಸ್ತು ಇದರಿಂದ ಭೂಮಿಕಾ ಬರ್ತಿದ್ದಾಳೆ ಅಂದರೆ ಅವಳ ಮಗ ಅಪ್ಪು, ಮಲ್ಲಿ ಮಾತ್ರ ಅಲ್ಲ, ವೀಕ್ಷಕರಿಗೂ ಒಳಗೊಳಗೆ ಭಯ ಆಗ್ತಿತ್ತು. ತಾನು ಸಲಿಗೆ ಕೊಟ್ಟರೆ ಎಲ್ಲಿ ಮನಸ್ಸಿನ ಒಳಗಿರುವ ಮೃದುತನ ಹೊರಗೆ ಬರುತ್ತೋ, ಅದರಿಂದ ತನ್ನ ಗಂಡ ಮಕ್ಕಳಿಗೆ ಸಮಸ್ಯೆ ಆಗುತ್ತೋ ಅನ್ನುವ ಭಯದಲ್ಲಿ ಅವಳ ವರ್ತನೆ ಹಾಗಿತ್ತು.

ಆದರೆ ಯಾವಾಗ ಗೌತಮ್‌ ಜೊತೆಗಿನ ಭೂಮಿ ಸಂಬಂಧ ಸರಿಹೋಯ್ತೋ ಆವಾಗಿಂದ ಅವಳ ಲುಕ್‌, ಸೀರಿಯಸ್‌ನೆಸ್‌ ಎಲ್ಲ ಚೇಂಜ್‌ ಆಗಿದೆ. ಗಂಡ ಮಕ್ಕಳ ಜೊತೆಗೆ ನಗು ನಗುತ್ತ ಇರುವ ಚೂಟಿ ಚೂಟಿ ಭೂಮಿ ಮತ್ತೆ ಬಂದಿದ್ದಾಳೆ. ಹಾಗೆ ನೋಡಿದರೆ ಭೂಮಿಗೆ ಈಗ ವಯಸ್ಸು ನಲವತ್ತು ದಾಟಿರಬೇಕು. ಆ ಪ್ರಕಾರ ಅವಳಿಗೆ ಕನ್ನಡಕ ಬರೋದು ಸಹಜವೇ. ಈಗ ಇದ್ದಕ್ಕಿದ್ದ ಹಾಗೆ ಅವಳು ಮೂವತ್ತರ ಆಸುಪಾಸಿನ ಚೆಲುವೆಯ ಲುಕ್‌ ಅಲ್ಲಿ ಕಾಣಿಸಿಕೊಳ್ತಿದ್ದಾಳೆ. ಇರಲಿ, ಎಷ್ಟಾದರೂ ಹೀರೋಯಿನ್‌ ಅಲ್ವಾ, ಅದಕ್ಕೆ ಸರಿಯಾಗಿ ಕನ್ನಡಕವೂ ಮಾಯವಾಗಿದೆ. ಅಂದರೆ ಭೂಮಿಕಾ ಟೀಚರ್‌ ಇಲ್ಲೀವರೆಗೆ ಕನ್ನಡಕ ಹಾಕ್ತಿದ್ದದ್ದು ದೃಷ್ಟಿ ದೋಷಕ್ಕೆ ಅಲ್ವಾ, ಸೀರಿಯಸ್‌ ಆಗಿ ಕಾಣ್ಬೇಕು ಅನ್ನೋ ಕಾರಣಕ್ಕಾ? ಈಗ ಆ ಕನ್ನಡಕ ಎಲ್‌ ಹೋಯ್ತು, ಕನ್ನಡಕದ ಜಾಗಕ್ಕೆ ಲೆನ್ಸ್‌ ಬಂತಾ ಅಂತೆಲ್ಲ ಭೂಮಿಕಾ ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ. ಭೂಮಿಕಾ ಮಗಳು ಮಿಂಚುಗೆ ಕನ್ನಡಕ ಇದೆ, ಭೂಮಿಕಾಗೂ ಇದ್ದಿದ್ದರೆ ಒಂಥರಾ ಚೆನ್ನಾಗಿರ್ತಿತ್ತು ಅನ್ನೋರೂ ಇದ್ದಾರೆ.

ಒಟ್ಟಿನಲ್ಲಿ ಭೂಮಿಕಾ ಕನ್ನಡಕ ಸದ್ಯ ಚರ್ಚೆಯಲ್ಲಿರೋ ಟಾಪಿಕ್.‌



Source link

Leave a Reply

Your email address will not be published. Required fields are marked *