ಬೆಂಗಳೂರು, ಫೆಬ್ರವರಿ 9: ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿಯವರು ಕೊಟ್ಟ ಮೊಬೈಲ್ ಅನ್ನು ದುರುಪಯೋಗಪಡಿಸಿಕೊಂಡು ಕುಟುಂಬದ ಸದಸ್ಯರ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದ ಯುವತಿ ಒಬ್ಬರು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ (ಬೆಂಗಳೂರು) ಬೈಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯ ನಿವಾಸಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಬೇಕೆಂದು ಯುವತಿ ಕೇಳಿದ್ದ ಕಾರಣ ಮೊಬೈಲ್ ತೆಗೆದು ಕೊಟ್ಟಿದ್ದರು. ಕೆಲವು ದಿನಗಳ ಹಿಂದೆ ಆಕೆ ಅಪರಿಚಿತ ಯುವಕನೊಂದಿಗೆ ಮಾತನಾಡುತ್ತಿದ್ದ ವಿಚಾರ ಕುಟುಂಬದ ಗಮನಕ್ಕೆ ಬಂದಿತ್ತು. ಈ ವಿಚಾರವನ್ನು ಆಕೆಯ ತಾಯಿ ಪತಿಗೆ ತಿಳಿಸಿದ್ದರು. ಅದಾದ ನಂತರ ಅನುಮಾನ ಬಂದು ಮೊಬೈಲ್ ಪರಿಶೀಲನೆ ನಡೆಸಿದಾಗ ಕುಟುಂಬದ ಸದಸ್ಯರ ಖಾಸಗಿ ಅಂಗಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಪ್ರಿಯಕರನಿಗೆ ಕಳುಹಿಸಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾಯಿ ಮಲಗಿದ್ದ ವೇಳೆ ಖಾಸಗಿ ಅಂಗದ ಫೋಟೋ ತೆಗೆದಿದ್ದ ಯುವತಿ
ಆರೋಪಿ ಯುವತಿಯು ತಾಯಿ ಮಲಗಿದ್ದ ವೇಳೆ ಅವರ ಖಾಸಗಿ ಅಂಗಾಂಗಗಳ ಫೋಟೋಗಳನ್ನು ತೆಗೆದು ಕಳುಹಿಸಿದ್ದಾಳೆ ಎಂದು ಮೊಬೈಲ್ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಯುವತಿಯು ತನ್ನ ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಅವರಿಗೆ ಗೊತ್ತಾಗದಂತೆ ನಗ್ನ ಫೋಟೊ ತೆಗೆದಿದ್ದಾಳೆ. ಅದನ್ನು ಕೂಡ ಪ್ರಿಯಕರನಿಗೆ ಕಳುಹಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಷಯ ತಿಳಿದು ಮಗಳಿಗೆ ಬುದ್ಧಿ ಹೇಳಿ ಫೋಟೋಗಳನ್ನು ಅಳಿಸಿಹಾಕಿದ್ದೇವೆ ಎಂದು ತಾಯಿ ಹೇಳಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ಆ ಫೋಟೊಗಳು ದುರುಪಯೋಗವಾಗುವ ಭಯದಿಂದ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಪಡ್ಡೆ ಹುಡುಗರ ಬಲೆಗೆ ಬೀಳಿಸಲು ಹೆಸರೇ ಬದಲಾಯಿಸಿದ್ದ ಸುಚಿತ್ರಾ! ಖತರ್ನಾಕ್ ಪ್ಲಾನ್ ರಹಸ್ಯ ಬಟಾಬಯಲು
ಸದ್ಯ, ಯುವತಿ ಹಾಗೂ ಆಕೆಯ ಪ್ರಿಯಕರ ವರುಣ್ ಅಲಿಯಾಸ್ ಗಿರಿಧರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಕಾಲೇಜಿಗೆ ಹೋಗುವ ಮಗಳು ಓದುವುದಕ್ಕೆ ಬೇಕಾದುದನ್ನು ಕೇಳಿದರೆ ಮೊಬೈಲ್ ತೆಗೆದುಕೊಟ್ಟ ಪ್ಯಾರನ್ಸ್ ಅದರಿಂದಲೇ ಇಕ್ಕಟ್ಟಿಗೆ ಸಿಲುಕಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ